LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Gadag

ಗದಗ ಜಿಲ್ಲೆಯ ವರವಿ ಮೌನೇಶ್ವರ ಜಾತ್ರಾಮಹೋತ್ಸವ

I
ಗದಗ, 5 : ನಾಡಿನ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ವರವಿ ಪುಣ್ಯ ಕ್ಷೇತ್ರದ ಭಾವೈಕ್ಯತೆಯ ಪ್ರತೀಕರು ಹಾಗೂ ಪವಾಡ ಪುರುಷರಾದ 
ಶ್ರೀ ಜಗದ್ಗುರು ಮೌನೇಶ್ವರರ ಜಾತ್ರಾಮಹೋತ್ಸವ ಸೆ. 7 ರಿಂದ 11 ರವರೆಗೆ ಶ್ರದ್ಧೆ ಭಕ್ತಿಯಿಂದ ಹಾಗೂ ವಿಜೃಂಭಣೆಯಿಂದ ಜರುಗಲಿದೆ. ಸೆ.7 ರಂದು, ಬೆಳಿಗ್ಗೆ 06-15 ಕ್ಕೆ ಧ್ವಜಾರೋಹಣ, 9 ರಿಂದ 11 ಮಹಾಯಜ್ಞ, 12-15 ಕ್ಕೆ ಜಾತ್ರಾಮಹೋತ್ಸವ ಉದ್ಘಾಟನಾ ಸಮಾರಂಭ ಹಾಗೂ ಸಾಯಂಕಾಲ 5-15 ಗಂಟೆಗೆ ಮಹಾರಥೋತ್ಸವ ಮತ್ತು ರಾತ್ರಿ 8-15 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ದಿನಾಂಕ 8 ರಂದು ಬೆಳಿಗ್ಗೆ 11-30 ಕ್ಕೆ ಧಾರ್ಮಿಕ ಸಭೆ, ಮಧ್ಯಾಹ್ನ 4 ಗಂಟೆಗೆ ಕಡುಬಿನ ಕಾಳಗ, ಸಂಜೆ 6 ರಿಂದ 8 ಧಾರ್ಮಿಕ ಸಭೆ, ಶೈಕ್ಷಣಿಕ ವಿಚಾರಗಳು ಹಾಗೂ ಮೌನೇಶ್ವರ ಲೀಲಾ ವಿಲಾಸ ಪ್ರವಚನ ಹಾಗೂ ರಾತ್ರಿ 8 ರಿಂದ  ಸಾಂಸ್ಕೃತಿಕ ಕಾರ್ಯಕ್ರಮಗಳು,  ದಿನಾಂಕ 9 ರಂದು ಬೆಳಿಗ್ಗೆ 9-15 ರಿಂದ 12 ರವರೆಗೆ ಸಾಮೂಹಿಕ ಉಪನಯನ, ಪಾಲಕಿ ಛಬ್ಬಿಗೆ ಹೋಗಿ ಬರುವದು, ಸಂಜೆ 6 ರಿಂದ 8 ಧಾರ್ಮಿಕ ಸಭೆ ಹಾಗೂ ಮೌನೇಶ್ವರ ಲೀಲಾ ವಿಲಾಸ ಪ್ರವಚನ ಮತ್ತು ರಾತ್ರಿ 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ದಿನಾಂಕ 10 ರಂದು ಪಾಲಕಿ ಅಲಾವಿ ಗುಡ್ಡಕ್ಕೆ ಹೋಗಿ ಬರುವದು ಹಾಗೂ ಪುರವಂತರ ಸೇವೆ, ಸಂಜೆ 6 ರಿಂದ 8 ಧಾರ್ಮಿಕ ಸಭೆ ಹಾಗೂ ಪ್ರವಚನ ಮತ್ತು ರಾತ್ರಿ 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ದಿನಾಂಕ 11 ರಂದು ಶುಕ್ರವಾರ ಮಹಾಪ್ರಸಾದ, ಬೆಳಿಗ್ಗೆ 10 ರಿಂದ 12 ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 12 ರಿಂದ 2 ಪ್ರವಚನ ಹಾಗೂ ಮಧ್ಯಾಹ್ನ 3 ಗಂಟೆಗೆ ಜಾತ್ರಾಮಹೋತ್ಸವ ಸಮಾರೋಪ ಸಮಾರಂಭ, ದಾನಿಗಳಿಗೆ ಸನ್ಮಾನ ಹಾಗೂ ಪೂಜಾಫಲ ಲಿಲಾವು ಕಾರ್ಯಕ್ರಮಗಳು ಜರುಗಲಿವೆ ಎಂದು ವರವಿ ಶ್ರೀ ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮೀಟಿಯ ಅಧ್ಯಕ್ಷರಾದ ಮೋಹನ ಸಿ. ನರಗುಂದ ಹೇಳಿದರು. 
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ದಿನಾಂಕ 7 ರಂದು ಮಧ್ಯಾಹ್ನ 12-15 ಕ್ಕೆ ಜಾತ್ರಾಮಹೋತ್ಸವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ವರವಿ ಶ್ರೀ ಮೌನೇಶ್ವರ ದೇವಸ್ಥಾನದ ಶ್ರೀ ಮೌನೇಶ್ವರ ಮಹಾಸ್ವಾಮಿಗಳವರು ವಹಿಸುವರು. ಅಧ್ಯಕ್ಷತೆಯನ್ನು ವರವಿ ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ ಕಮೀಟಿಯ ಅಧ್ಯಕ್ಷರಾದ ಮೋಹನ ಸಿ ನರಗುಂದ ವಹಿಸುವರು. ಮಾಜಿ ಮುಖ್ಯ ಮಂತ್ರಿ ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಶಾಸಕರಾದ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಗಂಗಣ್ಣ ಎಂ. ಮಹಾಂತಶೆಟ್ಟರ, ಜಿ. ಎಸ್. ಗಡ್ಡದದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ,  ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, ಶಿರಹಟ್ಟಿಯ ತಹಶೀಲ್ದಾರ ಕೆ. ರಾಘವೇಂದ್ರರಾವ್,  ಡಿ ಎಸ್ ಪಿ ಮರ್ತುಜಾ ಖಾದ್ರಿ, ಶಿರಹಟ್ಟಿಯ ಸಿಪಿ ಐ ಬಿ. ವಿ. ನ್ಯಾಮಗೌಡ,  ಪಿ ಎಸ್ ಐ ಈರಪ್ಪ ರಿತ್ತಿ, ಮುಖಂಡರಾದ ಬಸವರಾಜ ಎಂ. ಹತ್ತಿಕಾಳ, ಮುಖಂಡರಾದ ಸಣ್ಣವೀರಪ್ಪ ಫ. ಹಳ್ಳೆಪ್ಪನವರ, ಮುಖಂಡರಾದ ವೀರೇಶ ಪಸಾರದ, ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಜಗೋಪಾಲ ಡಿ. ಕಡ್ಲಿಕೊಪ್ಪ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಗದಗ ಜಿಲ್ಲಾಧ್ಯಕ್ಷರಾದ ದೇವೇಂದ್ರಪ್ಪ ಬಡಿಗೇರ, ಗುತ್ತಿಗೆದಾರ ವೀರಣ್ಣ ಬ. ಕಳಸಣ್ಣವರ, ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷರಾದ ವೆಂಕನಗೌಡ್ರ ಎಂ. ಪಾಟೀಲ, ವಿಶೇಷ ಸನ್ಮಾನಿತರಾಗಿ ಎ ಎಸ್ ಐ ವಿಶ್ವನಾಥ ಬಡಿಗೇರ ಹಾಗೂ
ವಿಶೇಷ ಆಹ್ವಾನಿತರಾಗಿ ಖ್ಯಾತ ವೈದ್ಯರಾದ 
ಡಾ. ವಿನೋದ ಅಕ್ಕಸಾಲಿ ಆಗಮಿಸುವರು.
ರಥೋತ್ಸವದ ನಂತರ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುವವು ಎಂದರು.
ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಜಗೋಪಾಲ ಡಿ. ಕಡ್ಲಿಕೊಪ್ಪ ಅವರು ಮಾತನಾಡಿ, : ಮೌನೇಶ್ವರರು ಜನಿಸಿದ್ದು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವರ ಗೋನಾಳ ಎಂಬ ಗ್ರಾಮದಲ್ಲಿ. ಯಾದಗಿರಿ ಜಿಲ್ಲೆಯ ಕೃಷ್ಣಾ ನದಿಯ ದಡದಲ್ಲಿರುವ ತಿಂಥಣಿ ಶ್ರೀ ಮೌನೇಶ್ವರರ ಪ್ರಮುಖ ಕರ್ಮಭೂಮಿ ಮತ್ತು ಸಮಾಧಿ ಸ್ಥಳವಾಗಿದೆ (ಜೀವಂತ ಸಮಾಧಿ ಪಡೆದ ಪುಣ್ಯಕ್ಷೇತ್ರ). ಅವರು ಧರ್ಮ ಜಾಗೃತಿ ಹಾಗೂ ಭಾವೈಕ್ಯತೆಯ ಸಂದೇಶ ಸಾರುತ್ತ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ವರವಿ ಗ್ರಾಮದಲ್ಲಿ  ನೆಲೆ ನಿಂತು, ತಮ್ಮ ಮಹಿಮೆ ಹಾಗೂ ಪವಾಡಗಳನ್ನು ತೋರಿದ ಮತ್ತೊಂದು ಪ್ರಸಿದ್ಧ ಕ್ಷೇತ್ರವಾಗಿದೆ. "ವರವಿಗೆ 
ಕಾಶಿಯಿಂದ ಗಂಗೆಯನ್ನು  ತರಿಸಿ ಅಂಬಲಿ ಹೊಂಡ ನಿರ್ಮಿಸಿದ್ದು, ಇದು ಪವಿತ್ರ ತೀರ್ಥವಾಗಿದೆ. ಈ ತೀರ್ಥದಿಂದ ಅನೇಕ ರೋಗ ರುಜಿನಗಳು ದೂರವಾಗುತ್ತವೆ. ಅಂತಹ ಮಹಾತ್ಮರ ಜಾತ್ರಾಮಹೋತ್ಸವದಲ್ಲಿ ಸರ್ವರೂ ಪಾಲ್ಗೊಂಡು ಪಾವನರಾಗಬೇಕು ಎಂದು ಕರೆ ನೀಡಿದರು. 
ವರವಿ ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟನ ಕೋಶಾಧ್ಯಕ್ಷರಾದ ಚಂದ್ರಕಾಂತ ಸೋನಾರ ಅವರು ಮಾತನಾಡಿ, 
ದಿನಾಂಕ 11 ರಂದು ಜರುಗುವ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ವರವಿ ಮೌನೇಶ್ವರ ದೇವಸ್ಥಾನದ ಶ್ರೀ ಮೌನೇಶ್ವರ ಮಹಾಸ್ವಾಮಿಗಳವರು, ಶಿರಹಟ್ಟಿಯ ಫಕ್ಕೀರೇಶ್ವರ ಸಂಸ್ಥಾನಮಠದ ಶ್ರೀ ಫಕ್ಕೀರ ದಿಂಗಾಲೇಶ್ವರ ಮಹಾಸ್ವಾಮಿಗಳವರು ಹಾಗೂ ಅಣ್ಣಿಗೇರಿಯ ದಾಸೋಹ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ವಹಿಸುವರು. ಅಧ್ಯಕ್ಷತೆಯನ್ನು ವರವಿ ಶ್ರೀ ಜಗದ್ಗುರು ಮೌನೇಶ್ವರರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ ಕಮೀಟಿಯ ಅಧ್ಯಕ್ಷರಾದ ಮೋಹನ ಸಿ. ನರಗುಂದ ವಹಿಸುವರು. ಮಾಜಿ ಸಚಿವರು ಹಾಗೂ ಶಾಸಕರಾದ ಡಾ. ಎಚ್. ಕೆ. ಪಾಟೀಲ ಘನ ಉಪಸ್ಥಿತರಿರುವರು. ಉನ್ನತ ಶಿಕ್ಷಣ ಇಲಾಖೆಯ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿಗಳಾದ ಬಸವರಾಜ ರಾಯರಡ್ಡಿ ಉದ್ಘಾಟಿಸುವರು. 
ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವರಾದ ಕೆ. ಎಸ್. ಬಸವಂತಪ್ಪ ಗೌರವ ಉಪಸ್ಥಿತರಿರುವರು. ಶಾಸಕರು ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾದ ಸಿ. ಎಸ್. ನಾಡಗೌಡರ, ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ವಿಜಯಕುಮಾರ ಪತ್ತಾರ(ಕನಕಗಿರಿ), ಜಿಪಂ ಮಾಜಿ ಅಧ್ಯಕ್ಷರಾದ ವಿಶ್ವನಾಥ ಕಪ್ಯತ್ತನವರ, ಮುಖಂಡರಾದ ಆನಂದ ಗಡ್ಡದದೇವರಮಠ, ಜಿಪಂ ಮಾಜಿ ಅಧ್ಯಕ್ಷರಾದ ಶ್ರೀಮತಿ ಸುಜಾತ ದೊಡ್ಡಮನಿ, ಪಪಂ ಮಾಜಿ ಅಧ್ಯಕ್ಷ ಹುಮಾಯೂನ ಮಾಗಡಿ, ಎಪಿ ಎಂಸಿ ಸದಸ್ಯರಾದ ಅಪ್ಪಣ್ಣ ಇನಾಮತಿ, ಧುರೀಣರಾದ ಗಿರೀಶ ಡಬಾಲಿ, ಡಾವಣಗೇರಿ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಬಿ. ನಾಗೇಂದ್ರಾಚಾರ, ಶಿರಹಟ್ಟಿಯ ತಾಪಂ ಮಾಜಿ ಸದಸ್ಯ ದೇವಪ್ಪ ಲಮಾಣಿ, ಛಬ್ಬಿ ಗ್ರಾಪಂ ಮಾಜಿ ಉಪಾಧ್ಯಕ್ಷ ರಮೇಶ ಖೀ. ಲಮಾಣಿ, ಛಬ್ಬಿ ಗ್ರಾಪಂ ಮಾಜಿ ಸದಸ್ಯರಾದ ಶ್ರೀಮತಿ ಭಾರತಿ ನಿಂ. ತಾರಿಕೊಪ್ಪ, ಛಬ್ಬಿ ಗ್ರಾಪಂ ಮಾಜಿ ಸದಸ್ಯ ಸಣ್ಣದುರ್ಗಪ್ಪ ಯ. ಹರಿಜನ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಮಾಜಿ ಸದಸ್ಯರಾದ ಮಾನಯ್ಯ ಬಡಿಗೇರ, ಗುಲ್ಬರ್ಗ ಕೆ ಎಂ ಎಫ್ ನಿವೃತ್ತ ಸಹಾಯಕ ನಿರ್ದೇಶಕರಾದ ಚಂದ್ರಶೇಖರ ಪತ್ತಾರ, ವಿಶ್ವವಾಣಿ ಬೆಂಗಳೂರಿನ ಸಿ ಇ ಓ ಚಿದಾನಂದ ಕಡ್ಲಾಸ್ಕರ್, ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಬಿ. ದೇವರಾಜ ಹಾಗೂ ಗುತ್ತಿಗೆದಾರರಾದ ಸುಭಾಸ ಸಿ. ಬಿರಾದಾರ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಸಾಯಂಕಾಲ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್