ಬಳ್ಳಾರಿ,ಜೂ18
ನಗರದ ಕಂಟೋನ್ ಮೆಂಟ್ ಹತ್ತಿರದ ರಾಜೀವಗಾಂಧಿ ನಗರದ ಸರ್ಕಾರಿ ಶಾಲೆಯ ಪಕ್ಕದ ವಾರ್ಡ್ ನಂ.30 ರ ನಿವಾಸಿಯಾದ ಡಿ.ರಾಮಾಂಜಿನಿ ಎಂಬ 41 ವರ್ಷದ ವ್ಯಕ್ತಿ ಮಾ.05 ರಂದು ಮನೆಯಿಂದ ಹೊರಗಡೆ ಹೋದವನು ವಾಪಾಸ್ ಬಾರದೇ ಕಾಣೆಯಾಗಿರುವ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.
ಚಹರೆ ಗುರುತು: ಅಂದಾಜು 5.7 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ದೃಢ ಮೈಕಟ್ಟು ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಟೀ-ಶರ್ಟ್ ಹಾಗೂ ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ವ್ಯಕ್ತಿ ಬಗ್ಗೆ ಸುಳಿವು ಸಿಕ್ಕಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯ ದೂ.08392-240731, 244145 ಅಥವಾ ಪಿಎಸ್‌ಐ ಮೊ.9480820308, ಪಿಐ ಮೊ.9480803047, ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
