LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ವೀ.ವಿ.ಸಂಘ ಕನಸ್ಸುಗಳಿಗೆ ರೆಕ್ಕೆ ಕಟ್ಟಿದ ಸಂಸ್ಥೆ-ಡಾ.ಮಾಗಣಗೇರಿ

ತಾಳಿಕೋಟೆ,ಸೆ,೦೫ : ವಿದ್ಯಾರ್ಥಿ ಜೀವನವೆಂಬುದು ಕೇವಲ ಪಠ್ಯ ಪುಸ್ತಕಕ್ಕೆ ಜ್ಞಾನಕ್ಕೆ ಸೀಮಿತವಾಗದೇ ಸಾಂಸ್ಕೃತಿಕ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಕ್ರೀಯವಾಗಿ ಭಾಗವಹಿಸುವ ಮೂಲಕ ಸಮಗ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಚಡಚಣದ ಶ್ರೀ ಸಂಗಮೇಶ ಕಲಾ ಹಾಗೂ ವಾಣಿಜ್ಯ ಮಹಾ ವಿದ್ಯಾಲಯದ ಕನ್ನಡ ಪ್ರಾದ್ಯಾಪಕ ಡಾ.ಎನ್.ಎಸ್.ಮಾಗಣಗೇರಿ ಅವರು ನುಡಿದರು.
ಶನಿವಾರರಂದು ಶ್ರೀ ಖಾಸ್ಗತ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾ ವಿದ್ಯಾಲಯದ ೨೦೨೬-೨೭ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾಚಟುವಟಿಕೆಗಳ ಎನ್.ಎಸ್.ಎಸ್.-ಎನ್‌ಸಿಸಿ, ವಾಯ್‌ಆರ್‌ಸಿ, ಇಎಲ್‌ಸಿ ಮತ್ತು ಸ್ಕೌಟ್ಸ್ & ಗೈಡ್ಸ್ ವಿವಿಧ ಚಟುವಟಿಕೆಗಳ ಕುರಿತು ಏರ್ಪಡಿಸಲಾದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸನ್ಮಾನ ಸ್ವಿಕರಿಸಿ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಮಾತನಾಡುತ್ತಿದ್ದ ಅವರು ಹೊಸ ಶೈಕ್ಷಣಿಕ ವಾತಾವರಣದಲ್ಲಿ ಆತ್ಮ ವಿಸ್ವಾಸದಿಂದ ಮುನ್ನಡೆಯಬೇಕು ಕಾಲೇಜ್‌ದಲ್ಲಿ ಇರುವ ವಿವಿಧ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಪ್ರತಿಭೆಯನ್ನು ಗುರುತಿಸಿ ಭವಿಷ್ಯದ ಗುರಿ ಸಾಧನೆಗಾಗಿ ವಿದ್ಯಾರ್ಥಿಗಳು ನಿರಂತರ ಪರಿಶ್ರಮಿಸಬೇಕೆಂದರು. ಎನ್‌ಎಸ್‌ಎಸ್ ಮೂಲಕ ಸಮಾಜ ಸೇವೆ, ಎನ್‌ಸಿಸಿ ಮೂಲಕ ಸಿಸ್ತು ಮತ್ತು ನಾಯಕತ್ವ ಗುಣ ವಾಯ್‌ಆರ್‌ಸಿ ಮೂಲಕ ಆರೋಗ್ಯ ಹಾಗೂ ಮಾನವೀಯ ಸೇವೆ, ಇಎಲ್‌ಸಿ ಮೂಲಕ ಪ್ರಜಾಪ್ರಭುತ್ವ ಮತ್ತು ಮತದಾನದ ಅರಿವು ಮತ್ತು ಸ್ಕೌಟ್ಸ್ ಗೈಡ್ಸ್ ಮೂಲಕ ಸೇವಾ ಮನೋಭಾವನೆ ಮತ್ತು ಜವಾಬ್ದಾರಿಯುತವಾದ ನಾಗರಿಕತ್ವವನ್ನು ಬೆಳೆಸಿಕೊಳ್ಳಬೇಕೆಂದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆ, ಕ್ರೀಡಾ ಸಾಮಥ್ಯ, ಸಾಮಾಜಿಕ ಸಾಮರ್ಥ್ಯವನ್ನು ಉತ್ತೇಜಿಸುವಂತಹ ಇಂತಹ ಕಾರ್ಯಕ್ರಮಗಳನ್ನು ಶಿಕ್ಷಣದ ಜೊತೆಗೆ ಜೀವನದಲ್ಲಿ ಕೌಶ್ಯಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದ ಡಾ.ಮಾಗಣಗೇರಿ, ಮಾತಾಪಿತರನ್ನು ಗೌರವಿಸಬೇಕು ಅದರಂತೆ ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿಯನ್ನು ಗೌರವದಿಂದ ಕಾಣಿರಿ ಎಂದು ತಾವು ಈ ಹಿಂದೆ ಇದೇ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರ ಕುರಿತು ಶಾಲಾ ಆಡಳಿತ ಮಂಡಳಿಯ ಶಿಕ್ಷಕರ ಕುರಿತು ಗುಣಗಾನ ಮಾಡುವದರೊಂದಿಗೆ ಕೆಲವು ಚಿಕ್ಕ ಕಥೆಗಳನ್ನು ಹೇಳಿದ ಅವರು ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬ ಗಾಧೆ ಮಾತನ್ನು ಅರ್ಥೈಸಿದ ಅವರು ತಮ್ಮ ಅತಿಥಿ ಭಾಷಣದ ಉದ್ದಕ್ಕೂ ತಾಳಿಕೋಟೆಯ ವೀ.ವಿ.ಸಂಘ ಹಾಗೂ ಶ್ರೀ ಖಾಸ್ಗತೇಶ್ವರ ಕಲಾ ವಾಣಿಜ್ಯ ವಿಜ್ಞಾನ ಮಹಾವಿದ್ಯಾಲಯದಂತಹ ಕೆಲವು ಶಿಕ್ಷಣ ನೀಡುವಂತಹ ಸಂಸ್ಥೆಗಳನ್ನು ಸ್ಥಾಪನೆ ಮಾಡುತ್ತಾ ಸಾಗಿದ್ದರ ಕುರಿತು ಪ್ರಶಂಶಿಸಿದ ಅವರು ತಾಳಿಕೋಟೆಯ ವೀ.ವಿ.ಸಂಘ ಕನಸ್ಸುಗಳಿಗೆ ರೆಕ್ಕೆ ಕಟ್ಟಿದ ಸಂಸ್ಥೆಯಾಗಿ ಇದು ಹೊರಹೊಮ್ಮಿದೆ ಎಂದರು.
ಕಾರ್ಯಕ್ರಮದ ಮೊದಲಿಗೆ ಶಿಕ್ಷಕರ ದಿನಾಚರಣೆ ಅಂಗವಾಗಿ ಪೂಜೆ ಗೈಯಲಾದ ಡಾ.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ಗೌರವಿಸುವದರೊಂದಿಗೆ ವೀ.ವಿ.ಸಂಘದ ಉಪಾಧ್ಯಕ್ಷ ಕಾಶಿನಾಥ ಮುರಾಳ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ವೀ.ವಿ.ಸಂಘದ ಅಧ್ಯಕ್ಷರಾದ ವ್ಹಿ.ಸಿ.ಹಿರೇಮಠ ಅವರು ಅಧ್ಯಕ್ಷತೆ ವಹಿಸಿದ್ದರು. ವೀ.ವಿ.ಸಂಘದ ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ ಅವರು ಮಾತನಾಡಿದರು. ಇದೇ ಸಮಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾದ ಶ್ರೀಮತಿ ಸುಜಾತಾ ಚಲವಾದಿ ಅವರು ಅತಿಥಿಗಳ ಕುರಿತು ಪರಿಚಯಿಸಿ ಅವರು ಮಾಡಿದಂತಹ ಸಾಧನೆಗಳ ಕುರಿತು ವಿವರಿಸಿದರು.ಈ ಸಮಯದಲ್ಲಿ ನಿರ್ದೇಶಕರಾದ ಪ್ರಭುಗೌಡ ಮದರಕಲ್ಲ, ಅಶೋಕ ಜಾಲವಾದಿ, ಸಿದ್ದು ಸರೂರ, ಹಾಗೂ ಪ್ರಾದ್ಯಾಪಕ ಸಲಹೆಗಾರರಾದ ಅಜಯ್ ಅಬ್ಬಾರ್, ಆನಂದ ಹಿರೇಮಠ, ಪ್ರಧಾನ ಕಾರ್ಯದರ್ಶಿ ಅನುಸೂಯಾ ಕಶೆಟ್ಟಿ, ಅವರು ಉಪಸ್ಥಿತರಿದ್ದರು.
ಕುಮಾರಿ ಚಂದ್ರಿಕಾ ಭರತನಾಟ್ಯ ಪ್ರದರ್ಶಿಸಿದರು. ವಿದ್ಯಾರ್ಥಿನಿ ನಾಯ್ಕೋಡಿ ಪ್ರಾರ್ಥಿಸಿದರು. ಪ್ರಾಚಾರ್ಯ ಡಿ.ಬಿ.ಮೂಗಡ್ಲಿಮಠ ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀಮತಿ ಸಿ.ಬಿ.ಪಾಟೀಲ ಹಾಗೂ ಶ್ರೀಮತಿ ಕೌಶಲ್ಯ ಅವರು ನಿರೂಪಿಸಿದರು. ಆನಂದ ಹಿರೇಮಠ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜ್ ಆಡಳಿತ ಮಂಡಳಿ, ಭೋದಕ, ಭೋದಕೇತರ ಸಿಬ್ಬಂದಿ, ವಿವಿಧ ಘಟಕಗಳ ಸಂಯೋಜಕರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸಮಾರಂಭವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಆತ್ಮ ವಿಸ್ವಾಸ ಶೈಕ್ಷಣಿಕ ವರ್ಷದ ಬಗ್ಗೆ ಉತ್ತಮ ನಿರಿಕ್ಷೆಯನ್ನು ಮೂಡಿಸುವ ಮೂಲಕ ಯಶಸ್ವಿಯಾಗಿ ನೆರವೇರಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್