Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಿ. ಚನ್ನಮ್ಮ ದೇವೇಗೌಡ ಅವರ ಪುಣ್ಯಸ್ಮರಣೆ ಅಂಗವಾಗಿ ಕುಂದಾ ರವಾನೆ. 


ಬೆಳಗಾವಿ: ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಧರ್ಮಪತ್ನಿ ದಿವಂಗತ ಶ್ರೀಮತಿ ಚನ್ನಮ್ಮ ದೇವೇಗೌಡರವರ ಪುಣ್ಯಸ್ಮರಣೆ ಕಾರ್ಯಕ್ರಮವು ಇಂದು ನಡೆಯಲಿರುವ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲಾ ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ವಿಶೇಷವಾಗಿ ಕುಂದಾ (ಸ್ವೀಟ್) ವಿತರಣೆ ಮಾಡುವ ಉದ್ದೇಶದಿಂದ ಕುಂದಾ ನಗರಿ ಬೆಳಗಾವಿಯಿಂದ ಚನ್ನಮ್ಮನವರ ಸಮಾಧಿವರೆಗೆ ಗುರುವಾರ ಕುಂದಾ ರವಾನಿಸಲಾಯಿತು.
ಈ ಕಾರ್ಯಕ್ರಮವು ಜಾತ್ಯಾತೀತ ಜನತಾದಳ ಪಕ್ಷದ ಬೆಳಗಾವಿ ಜಿಲ್ಲಾಧ್ಯ  ಶಂಕರ ಭ. ಮಾಡಲಗಿ ಹಾಗೂ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ ಅವರ ನೇತೃತ್ವದಲ್ಲಿ ನಡೆಯಿತು. ದಿವಂಗತ ಚನ್ನಮ್ಮ ದೇವೇಗೌಡರವರ ಸ್ಮರಣಾರ್ಥ ನಡೆಯಲಿರುವ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಭೀಮಾನಿಗಳು ಹಾಗೂ ಕಾರ್ಯಕರ್ತರಿಗೆ ಕುಂದಾ ವಿತರಿಸುವ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ಮೂಡಲಗಿ ತಾಲೂಕು ಜಾತ್ಯಾತೀತ ಜನತಾದಳ ಪಕ್ಷದ ಅಧ್ಯಕ್ಷ  ಪ್ರಕಾಶ ಕಾಳಶೆಟ್ಟಿ, ಯುವ ಜನತಾದಳ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ರಾಮು ರಜಪೂತ, ಬೆಳಗಾವಿ ಗ್ರಾಮೀಣ ಜಾತ್ಯಾತೀತ ಜನತಾದಳ ಪಕ್ಷದ ತಾಲೂಕು ಅಧ್ಯಕ್ಷ ರಾಜು ರೊಟ್ಟಿ, ಯುವ ಘಟಕ ಅಧ್ಯಕ್ಷ ಬಿ.ಎನ್ ಪಾಟೀಲ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಪಕ್ಷದ ಮುಖಂಡರು ದಿವಂಗತ ಚನ್ನಮ್ಮ ದೇವೇಗೌಡರವರ ಸೇವಾ ಮನೋಭಾವ ಹಾಗೂ ಸರಳ ವ್ಯಕ್ತಿತ್ವವನ್ನು ಸ್ಮರಿಸಿ, ಅವರ ಆದರ್ಶಗಳು ಸಮಾಜಕ್ಕೆ ಸದಾ ಪ್ರೇರಣೆಯಾಗಲಿ ಎಂದು ನುಡಿದರು. ನಾಳೆ ನಡೆಯಲಿರುವ ಪುಣ್ಯಸ್ಮರಣೆ ಕಾರ್ಯಕ್ರಮವು ಭಕ್ತಿಪೂರ್ವಕವಾಗಿ ಹಾಗೂ ಗೌರವಯುತವಾಗಿ ನೆರವೇರಲೆಂದು ಹಾರೈಸಿದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST