ಬೆಳಗಾವಿ: ತಾಲೂಕಿನ ಕಂಗ್ರಾಳಿ ಬಿ.ಕೆ. ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಬೆಳಗಾವಿ ಸಹಯೋಗದಲ್ಲಿ ‘ಸ್ವಚ್ಛತೆಯೇ ಸೇವೆ-2026’ ಅಭಿಯಾನದ ಅಂಗವಾಗಿ ‘ಸ್ವಚ್ಛತಾ ಜ್ಞಾನ ಯಾತ್ರೆ’ ಕಾರ್ಯಕ್ರಮ ಜರುಗಿತು. ಸ್ವಚ್ಛತೆಯ ಜಾಗೃತಿ ಕುರಿತಾದ ‘ಸ್ವಚ್ಛತಾ ಜ್ಞಾನ ಯಾತ್ರೆಗೆ ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ್ ಚಾಲನೆ ನೀಡಿ, ಸ್ವಚ್ಛತೆಯ ಪ್ರತಿಜ್ಞಾವಿಧಿ ಬೋಧಿಸಿದರು.
ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ, ಸಹಾಯಕ ನಿರ್ದೇಶಕ (ಗ್ರಾಉ) ಬಸವಂತಪ್ಪ ಕಡೇಮನಿ, ಜಿಪಂ ಸಿಬ್ಬಂದಿ ಬಾಹುಬಲಿ ಮೆಳವಂಕಿ, ಸಾಗರ ರಾಮಗೊಂಡ, ರೇವತಿ ಶಿಂಗೆ ಸೇರಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.