Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸುಪ್ರೀಂ ಕೋರ್ಟ್ ವಕಾಲತ್ತು ಕುರಿತು ವಿಶೇಷ ಉಪನ್ಯಾಸ 

ಬೆಳಗಾವಿ: ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಕಾಲೇಜು ತನ್ನ ಇಂಟರ್ನಲ್ ಕ್ವಾಲಿಟಿ ಅಶ್ಯೂರುನ್ಸ್ ಸೆಲ್ (IQAC) ಮತ್ತು ಇಂಟರ್ನ್‌ಶಿಪ್‌ ಮತ್ತು ಪ್ಲೇಸ್ಮೆಂಟ್ ಸೆಲ್ ಮೂಲಕ “ಅಪೆಕ್ಸ್‌ನಲ್ಲಿ ವಕಾಲತ್ತು: ಸುಪ್ರೀಂ ಕೋರ್ಟ್‌ನಲ್ಲಿ ವೃತ್ತಿ ಜೀವನವನ್ನು ರೂಪಿಸುವುದು” ಎಂಬ ಶೀರ್ಷಿಕೆಯಡಿ ವಿಶೇಷ ಉಪನ್ಯಾಸವನ್ನು ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ನವದೆಹಲಿಯ ಸುಪ್ರೀಂ ಕೋರ್ಟ್ ನ ಅಡ್ವೋಕೇಟ್ ಚಾರುದತ್ತ ಮಹೀಂದ್ರಕರ ಅವರನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿ ಆಹ್ವಾನಿಸಲಾಗಿತ್ತು. ದೇಶದ ಉನ್ನತ ನ್ಯಾಯಾಂಗ ವೇದಿಕೆಯಲ್ಲಿನ ಕಾನೂನು ವೃತ್ತಿ ಕುರಿತಾದ ಅಮೂಲ್ಯ ವಿಷಯವನ್ನು ಇದು ಒದಗಿಸಿತು. ಸುಪ್ರೀಂ ಕೋರ್ಟ್ ಅಭ್ಯಾಸದಲ್ಲಿ ಯಶಸ್ವಿ ವೃತ್ತಿ ನಿರ್ಮಿಸಲು ಆಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿತು.
 ಸುಪ್ರೀಂ ಕೋರ್ಟ್‌ ಮುಂದೆ ವಿಷಯಗಳನ್ನು ದಾಖಲಿಸುವ ವಿಧಾನವನ್ನು ಮತ್ತು ವಕೀಲಿ ವೃತ್ತಿಯಲ್ಲಿ ಪರಿಣತಿಯನ್ನು ಗಳಿಸಲು ಬೇಕಾಗುವ ವೃತ್ತಿಪರ ಕೌಶಲ್ಯಗಳನ್ನು ಚಾರುದತ್ತ ಮಹೀಂದ್ರಕರ ವಿವರಿಸಿದರು.
 ಕಾನೂನು ಸಂಶೋಧನೆ, ಪ್ರಬಂಧ ರಚನೆ, ನೈತಿಕತೆ, ಆತ್ಮಶಕ್ತಿ ಮತ್ತು ನಿರಂತರ ಅಧ್ಯಯನದ ಮಹತ್ವದ ಮೇಲೆ ಒತ್ತಿ ಹೇಳಿದರು. ಸುಪ್ರೀಂ ಕೋರ್ಟ್‌ ಎದುರು ತಮ್ಮ ಅಭ್ಯಾಸದ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು.  ವಿದ್ಯಾರ್ಥಿಗಳು ಸಮರ್ಪಣೆಯಿಂದ ತಮ್ಮ ಗುರಿಗಳನ್ನು ಸಾಧಿಸುವಂತೆ ಪ್ರೋತ್ಸಾಹಿಸಿದರು.
 ಸಾರ್ವಜನಿಕ ಹಿತಾಸಕ್ತಿ ವಿವಾದಗಳು, ವಾಣಿಜ್ಯ ವಾದಗಳು ಮತ್ತು ವಿಶೇಷ ಕಾನೂನು ಕ್ಷೇತ್ರಗಳಾದ ಯುವ ವಕೀಲರಿಗೆ ಸೃಷ್ಟಿಯಾಗುತ್ತಿರುವ ಅವಕಾಶಗಳನ್ನೂ ಇದು ಒಳಗೊಂಡಿತ್ತು. ವಿದ್ಯಾರ್ಥಿಗಳು ಸಕ್ರಿಯವಾಗಿ ಸಂವಾದದಲ್ಲಿ ಪಾಲ್ಗೊಂಡು ಇಂಟರ್ನ್‌ಶಿಪ್, ವೃತ್ತಿ ಯೋಜನೆ ಮತ್ತು ವೃತ್ತಿಪರ ಅಭಿವೃದ್ಧಿ ಕುರಿತು ವಿವರಿಸಲಾಯಿತು.
ಪ್ರಭಾರ ಪ್ರಾಚಾರ್ಯ ಡಾ. ಡಿ. ಪ್ರಸನ್ನಕುಮಾರ್, ಕಾಲೇಜಿನ ಆಡಳಿತ ಮಂಡಳಿ ಚೇರ್ಮನ್ ಆರ್. ಎಸ್. ಮುತಾಲಿಕ್ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಡಾ. ಸಮೀನಾ ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ಪ್ರೊ. ಅಶ್ವಿನಿ ಪರಬ್ ಹಾಗೂ ಪ್ರೊ. ಜ್ಯೋತಿ ಕುಲಕರ್ಣಿ ಅವರ ಸಂಯೋಜನೆಯಲ್ಲಿ ಯಶಸ್ವಿಯಾಗಿ ನಡೆಯಿತು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ತಡೆಗೆ ಕ್ರಮ ನಕಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ತಡೆಗೆ ಕ್ರಮ ಆತ್ಮನಿರ್ಭರ ಭಾರತದತ್ತ ಹೆಜ್ಜೆ: ದೇವಲಾಪುರದಲ್ಲಿ ಸೋಯಾಬೀನ್ ಕ್ಷೇತ್ರೋತ್ಸವ ಹಾಗೂ ಬೀಜ ಕಿಟ್ ವಿತರಣೆ"ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ"*ಜುಲೈ 12ರಂದು  ವಿಶ್ವಕರ್ಮರ ಜನ ಜಾಗೃತಿ ಜಿಲ್ಲಾ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ*ಸುಪ್ರೀಂ ಕೋರ್ಟ್ ವಕಾಲತ್ತು ಕುರಿತು ವಿಶೇಷ ಉಪನ್ಯಾಸ ರಾಜ್ಯಮಟ್ಟದ ಸಿಮೆಂಟ್ ಶಿಲ್ಪಕಲಾ ಶಿಬಿರಕ್ಕೆ ಡಾ. ಬಾಬುರಾವ್ ನಡೋಣಿ ಆಯ್ಕೆ ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಲು ತಾಲೂಕಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆಜೂನ್ 28 ರಂದು ರಾಷ್ಟಿçÃಯ ಪಲ್ಸ್ ಪೋಲಿಯೋ ಅಭಿಯಾನಸುಪ್ರೀಂ ಕೋರ್ಟ್ ‘ಸಮಾಧಾನ್ ಸಮಾರೋಹ್' ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳಿಗೆ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೂಚನೆ