ರಾಮದುರ್ಗ,ಜೂ,೨೨ : ತಾಲೂಕಿನ ಚಂದರಗಿಯ ಎಸ್.ಎಂ. ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶಾಲೆಯ ೭೦೦ ವಿದ್ಯಾರ್ಥಿಗಳು ಏಕಕಾಲದಲ್ಲಿ ಯೋಗಾಸನ ಮಾಡಿದರು.
ಯೋಗ ಗುರು ಗೋಪಾಲ ಅಪ್ಪಿನಬೈಲ್ ಅವರ ಮಾರ್ಗದರ್ಶನದಲ್ಲಿ ನಡೆದ ಯೋಗಾಭ್ಯಾಸದಲ್ಲಿ ಮಕ್ಕಳು ಹಾಗೂ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿ ಯೋಗ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಎಸ್.ಆರ್. ನವರಕ್ಕಿ, ವ್ಯವಸ್ಥಾಪಕ ಜೆ.ಬಿ. ಮೇಟಿ, ಪ್ರಾಚಾರ್ಯರಾದ ಐ.ಎಸ್. ಸೂಳಿಭಾವಿ ಹಾಗೂ ರಾಬಿ ಎ.ಕೆ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
೨೬ ನೇ ಕರ್ನಾಟಕ ಎನ್.ಸಿ.ಸಿ ಬಟಾಲಿಯನ್ ಬೆಳಗಾವಿ ಇವರ ಸಹಯೋಗದೊಂದಿಗೆ ಈ ಕಾರ್ಯಕ್ರಮ ಜರುಗಿತು.