LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಸರಳ-ಸಜ್ಜನಿಕೆಯ ರಾಜಕಾರಣಿ: ಇಂಡಿಯನ್ನು ‘ಬಂಗಾರದ ಗಿಂಡಿ’ ಮಾಡಿದ ಯಶವಂತರಾಯಗೌಡರು

ಇಂಡಿ: ಮಾನ್ಯ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ರಾಜ್ಯದ ಗಡಿ ಭಾಗದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭೀಮಾ ನದಿ ತೀರದ ಪಡನೂರ ಗ್ರಾಮದ ತಂದೆ ದಿ.ವಿಠ್ಠಲಗೌಡ ಪಾಟೀಲ ಅವರ ಜೇಷ್ಠ ಸುಪುತ್ರರಾಗಿದ್ದಾರೆ.  ದಿ.ವಿಠ್ಠಲಗೌಡ ಪಾಟೀಲ ಅವರು ಕೂಡಾ ಕಾಂಗ್ರೇಸ ಪಕ್ಷದಿಂದ ಜಿಲ್ಲಾ ಪಂಚಾಯತ ಸದಸ್ಯರಾಗಿ ಆಯ್ಕೆಯಾಗಿ ವಿರೋಧ ಪಕ್ಷದ ಉಪನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ತಂದೆಯವರ ಹಾದಿಯಲ್ಲಿ ಸಾಗಿದ ಇವರು  ಸತತ ಮೂರು ಬಾರಿ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದ ಇವರು ಅಧ್ಯಕ್ಷರಾಗಿ ವಿರೋಧ ಪಕ್ಷದ ನಾಯಕರಾಗಿ ಅನುಭವ ಹೊಂದಿದ್ದಾರೆ.
 ನಂತರ ಇಂಡಿ ವಿಧಾನಸಭಾ ಮತಕ್ಷೇತ್ರದಿಂದ ೨೦೧೩ರಲ್ಲಿ ಅತ್ಯಧಿಕ ಮತಗಳ ಅಂತರದಿಂದ ಯಶವಂತರಾಯಗೌಡ ಪಾಟೀಲ ಅವರು  ಜಯಶಾಲಿಯಾಗಿ ಶಾಸಕರಾಗಿದ್ದೆ ತಡ ವಿವಿಧ ಯೋಜನೆಗಳಲ್ಲಿ ಸಾವಿರ ಸಾವಿರ ಕೊಟಿ ರೂಪಾಯಿ ಸರಕಾರದಿಂದ  ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರದಿಂದ ಅನುದಾನದ ಸುರುಮಳೆ ಹರಿಸುವ ಮೂಲಕ  ನಾಲ್ಕು ದಶಕಗಳಿಂದ ನೆನೆಗುದಿಗೆ ಬಿದ್ದ ಹಲವಾರು ಅಭಿವೃದ್ದಿ ಕೆಲಸ ಕಾರ್ಯಗಳನ್ನು  ಕಾರ್ಯಗತಗೊಳಿಸಿದ ಹೆಗ್ಗಳಿಕೆ ಇವರಿಗೆ ಸಲ್ಲಬೇಕು. ಶಿಕ್ಷಣ, ನೀರಾವರಿ  ಸೇರಿದಂತೆ ಹಲವಾರು ಯೋಜನೆಗಳನ್ನು ತರುವ ಮೂಲಕ ಇಂಡಿ ಬಂಗಾರದ ಗಿಂಡಿಯಾಗಿ ಪರಿವರ್ತಿಸುವಲ್ಲಿ ಶಾಸಕರ ಪರಿಶ್ರಮದ ಫಲ ಇದರಲ್ಲಿ ಅಡಗಿರುವುದು ಕಟು ಸತ್ಯ
 ಬಾಕ್ಸ್: ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿ ಇವರು ಎಂದು ತಮ್ಮ ಹುಟ್ಟು ಹಬ್ಬವನ್ನು ಅಭಿಮಾನಿಗಳ ಹಾಗೂ ಕಾರ್ಯಕರ್ತರ ನಡುವೆ ಆಚರಿಸಿ ಸಂಭ್ರಮಿಸಿಲ್ಲ. ಅವರು ಏನಿದ್ದರು ಜನ್ಮ ದಿನದಂದು ಮಠ ಮಾನ್ಯ, ದೇವಸ್ಥಾನಗಳಿಗೆ ಭೇಟಿ ನೀಡಿ ಆಶಿರ್ವಾದ ಪಡೆದುಕೊಳ್ಳುವ ಸ್ವಭಾವ. ಅಲ್ಲದೆ ಕುಟುಂಬದ ಯಾವ ಸದಸ್ಯರು ಇದರಲ್ಲಿ ಭಾಗವಹಿಸಿಲ್ಲ.  ಸಾರ್ವಜನಿಕ ವಲಯದಲ್ಲಿ ಅಡಂಬರವಾಗಿ ಜನ್ಮ ದಿನಾಚರಣೆಯನ್ನು ಆಚರಣೆ ಮಾಡಿಕೊಂಡವರಲ್ಲ. ಪ್ರತಿ ವರ್ಷ ಅಭಿಮಾನಿಗಳು ಹಾಗೂ ಕಾರ್ಯಕರ್ತರೆ ಇವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದಾರೆ. ಉಚಿತ ಆರೋಗ್ಯ ಶಿಭೀರ, ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹೀಗೆ ವಿವಿಧ ರೀತಿಯಲ್ಲಿ ಜನ ಸಾಮಾನ್ಯರಿಗೆ ಸಹಾಯವಾಗುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅರ್ಥ ಪೂರ್ಣವಾಗಿ ಶಾಸಕರ ಅನುಪಸ್ಥಿತಿಯಲ್ಲಿ ಜನ್ಮ ದಿನಾಚರಣೆಯನ್ನು ಆಚರಿಸುತ್ತಾ ಬರುತ್ತಿದ್ದಾರೆ. 
  ಬುದ್ದ, ಬಸವ, ಗಾಂಧಿ ಮತ್ತು ಅಂಬೇಡ್ಕರರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಮುನ್ನಡೆದು ದೇಶಕ್ಕೆ ಸಂಸದೀಯ ಪ್ರಜಾಪ್ರಭುತ್ವದ ಭದ್ರ ಬುನಾದಿಯಲ್ಲಿ ಸಾಗುತ್ತಿದ್ದಾರೆ. ಜನಸೇವೆ ಜನಾರ್ಧನ ಸೇವೆ ಸರ್ವರಿಗೂ ಸಮ ಪಾಲು ಸರ್ವರಿಗೂ ಸಮ ಬಾಳು ತತ್ವ ಸಿದ್ದಾಂತದಡಿಯಲ್ಲಿ ಸಾಗುತ್ತಿರುವ ಇವರು ಸದಾ ಹಸನ್ಮೂಖಿಯಾಗಿ ಅಣ್ಣ ಬಸವಣ್ಣನ ಹಾಕಿಕೊಟ್ಟ ಸರ್ನ್ಮಾಗದಲ್ಲಿ ಮುನ್ನುಗುತ್ತಿರುವ ಕಾರ್ಯ ಜನ ಮೆಚ್ಚುವಂತಹದು. ಯಾವುದೆ ರಂಗವಿರಲಿ ಇವರು ಎಲ್ಲ ವರ್ಗದ ಜನಸಾಮಾನ್ಯರನ್ನು ಹತ್ತಿರದಿಂದ ಕಾಣುವ ದೊಡ್ಡ ಗುಣ ಹೊಂದಿದ ಮೆರು ವ್ಯಕ್ತಿತ್ವದವರಾಗಿದ್ದಾರೆ.
  ರಾಜಕೀಯ ಸೇರಿದಂತೆ ಎಲ್ಲ ವಿಧದಲ್ಲ್ಲು ಸರ್ವ ಸಮುದಾಯಗಳಿಗೆ ಅಧಿಕಾರ ಹಂಚಿಕೆ ಮಾಡಿದ ಇವರು ಸರಳ ಸಜ್ಜನಿಕೆ ವ್ಯಕ್ತಿತ್ವ ಇವರದಾಗಿದ್ದು ಅಭಿವೃದ್ದಿ ಹರಿಕಾರ ಎಂದೆನಿಸಿಕೊಳ್ಳುತ್ತಿದ್ದಾರೆ.  ಇಂಡಿ ಮತಕ್ಷೇತ್ರದ ಅಕ್ಕರೆಯ ಗೌಡರಾಗಿ ಬಸವ ಸನ್ಮಾರ್ಗದಲ್ಲಿ ಸಾಗುತ್ತಾ ತಮ್ಮ ದಿಟ್ಟ ಹೆಜ್ಜೆಯನ್ನಿರಿಸುತ್ತ ಬಂದಿದ್ದಾರೆ. 
ಯಶವಂತರಾಯಗೌಡರು ದಕ್ಷ, ಪ್ರಾಮಾಣಿಕ, ಪಾರದರ್ಶಕ ಆಡಳಿತ ನಡೆಸುತ್ತ ಬಂದಿದ್ದು ಇಂಡಿಯನ್ನು ಬಂಗಾರದ ಗಿಂಡಿ ಮಾಡಲು ಹೊರಟಿದ್ದಾರೆ. ಇಂದು ಅವರ ಸಾಧನೆಯ ಹಾದಿಯಲ್ಲಿ ನುಡಿದಂತೆ ನಡೆಯುವ ಸಂಕಲ್ಪ ತೊಟ್ಟಿದ್ದಾರೆ. ಸರ್ಕಾರದ ಯೋಜನೆಗಳನ್ನು ಜನ ಸಮುದಾಯದ ಕಟ್ಟಕಡೆಯ ಮನುಷ್ಯನವರೆಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಇವರ ಕಾರ್ಯ ಶ್ಲಾಘನಿಯವಾಗಿದೆ. 
 ಶೈಕ್ಷಣಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ಆಪ್ರದೇಶ ಎಲ್ಲ ವಿಧದಲ್ಲು ಅಭಿವೃದ್ದಿಲು ಸಾದ್ಯ ಎಂಬ ಪರಿಕಲ್ಪನೆ ಹೊಂದಿದ ಇವರು ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ ತ್ರಿವಿಧ ದಾಸೋಹಿ ಬಂಥನಾಳದ ಶ್ರೀ ಸಂಗನ ಬಸವ ಶಿವಯೋಗಿಗಳ ಆದರ್ಶದಲ್ಲಿ ಬೆಳೆದ ಇವರು. ಲಚ್ಯಾಣದ ಶ್ರೀ ಸಿದ್ದಲಿಂಗ ಮಹಾರಾಜರ ಅಪ್ಪಟ್ಟ ಭಕ್ತರು. ಹೀಗಾಗಿ  ಶಿಕ್ಷಣಕ್ಕಾಗಿ ಸರ್ಕಾರಿ ಜಿಟಿಟಿಸಿ, ಐ.ಟಿ.ಐ ಕಾಲೇಜು,  ಪ್ರಥಮ ದರ್ಜೆ ಕಾಲೇಜು, ಆದರ್ಶ ವಿದ್ಯಾಲಯ, ಪಾಲಿಟೆಕ್ನಿಕ್, ಪ್ರೌಢಶಾಲೆಗಳು,  ಕಾಲೇಜುಗಳು ಹೀಗೆ ಹತ್ತು ಹಲವಾರು ಶಾಲಾ ಕಾಲೇಜುಗಳನ್ನು ತರುವ ಮೂಲಕ ಶೈಕ್ಷಣಿಕ ಬೆಳವಣಿಗೆಗೆ ನಾಂದಿ ಹಾಡಿ ಇಂದು ನಗರದಲ್ಲಿ ವಿದ್ಯಾಗಿರಿಯನ್ನು ಹುಟ್ಟು ಹಾಕಿದ್ದಾರೆ.  
ಈ ಎಲ್ಲ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತ ಅಂದಿನ ಮುಖ್ಯಮಂತ್ರಿಗಳು ನಮ್ಮ ನಾಯಕರಾದ ಸಿದ್ದರಾಮಯ್ಯನವರ ಅವರ ಜೊತೆಯಲ್ಲಿ ಸಹಕಾರ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಚಿವರಿಗೂ, ಅಧಿಕಾರಿಗಳಿಗೂ ಕೃತಜ್ಞತೆ ಸಲ್ಲಿಸಲು ಯಾವತ್ತು ಮರೆತವರಲ್ಲ. ಸಹಾಯ ಸಹಕಾರ ನೀಡಿದ ಸರ್ವರನ್ನು ಹೃದಯ ವೈಶಾಲತೆಯುಳ್ಳ ತಾಲೂಕಿನ ಜನತೆಯನ್ನು ಸ್ಮರಿಸುವುದುದನ್ನು ಎಂದು ಮರೆತವರಲ್ಲ.
ವಿಧಾನಸಭೆಯ ಅಧಿವೇಶನದಲ್ಲಿ ಈಗಿನ ಸರಕಾರವಾಗಲಿ ಆಡಳಿತ ಪಕ್ಷದ ಸರಕಾರ ಇರಲಿ ಕ್ಷೇತ್ರದ ಅಭಿವೃದ್ಧಿಗಾಗಿ ಅತೀ ಹೆಚ್ಚು ಪ್ರಶ್ನೆ ಕೇಳುವ ಮೂಲಕ ಸರಕಾರದ ಗಮನ ಸೆಳೆಯುತ್ತಾರೆ. ಇವರು ಪ್ರತಿ ಹಂತದಲ್ಲು ರೈತರ, ದಿನ ದಲಿತರ, ಹಿಂದುಳಿದ, ಅಲ್ಪ ಸಂಖ್ಯಾತ ವರ್ಗಗಳ ಜೊತೆಗೆ ಮೇಲ್ವರ್ಗ ಸೇರಿದಂತೆ ಸರ್ವ ಸಮುದಾಯಗಳ ಒಳಿತಿಗಾಗಿ ಮತಕ್ಷೇತ್ರದ ಹಿತ ಚಿಂತನೆಗಾಗಿ ತಮ್ಮ ಶ್ರಮವನ್ನು ಬಳಕೆ ಮಾಡುತ್ತಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರಳ-ಸಜ್ಜನಿಕೆಯ ರಾಜಕಾರಣಿ: ಇಂಡಿಯನ್ನು ‘ಬಂಗಾರದ ಗಿಂಡಿ’ ಮಾಡಿದ ಯಶವಂತರಾಯಗೌಡರುಶಾಸಕ ಯಶವಂತರಾಯಗೌಡ ಪಾಟೀಲ ಜನ್ಮದಿನ: ಅ. ೧೦ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರಬಿಸಿ ಊಟ ತಯಾರಕರಿಗೆ ವೇತನ ಭಾಗ್ಯವಿಲ್ಲ: ತಾ.ಪಂ ಕಚೇರಿ ಮುಂದೆ ಅಕ್ಷರ ದಾಸೋಹ ನೌಕರರ ಧರಣಿ ಕಣ್ಣುಗಳು ಮನು?ನ ಅಮೂಲ್ಯ ಅಂಗ, ದೃಷ್ಟಿಯನ್ನು ರಕ್ಷಿಸಿಕೊಳ್ಳಲು ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯ: ಡಾ.ಐ.ಪಿ ಗಡಾದ *ಪಟ್ಟಣದ ಸ್ವಚ್ಛತೆಗೆ, ನೀರಿನ ಸಂರಕ್ಷಣೆಗೆ ಸಹಕರಿಸಿ  ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ  ದತ್ತಾ ವಾಸ್ಟರ್  ಮನವಿ*  ನಾಡಹಬ್ಬ ದಸರಾ ಉದ್ಘಾಟನೆಗೆ ಹಿರೂರ ಶ್ರೀಗಳಿಗೆ ಆಹ್ವಾನ.ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಪುರಸಭೆ ಅಧ್ಯಕ್ಷೆ ಶಿವಲೀಲಾ ಬೂಟಾಳಿ ಸಚಿವ ಶಿವರಾಜ ಎಸ್. ತಂಗಡಗಿ ಅವರಿಂದ ಶ್ರೀ ಖಾಸ್ಗತ ಮಠದ ಶ್ರೀ ಸಿದ್ದಲಿಂಗ ದೇವರಿಗೆ ಆಹ್ವಾನ ಪತ್ರ*ಬೇಡಿಕೆ ಈಡೇರದಿದ್ದರೆ ಅ, 13ರಂದು ಹೆದ್ದಾರಿ ಬಂದ್: ಕರ್ನಾಟಕ ರಾಜ್ಯ ರೈತ ಸಂಘ ಎಚ್ಚರಿಕೆ* ಆರ್‌ಎಸ್‌ಎಸ್ ಇದು ರಾಷ್ಟ್ರೀಯ ಪ್ರಜ್ಞೆ ಬೆಳೆಸುವ ಸಂಘ-ರಾಜು