ತಾಳಿಕೋಟೆ, ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ-೨೦೨೬ರ ಉದ್ಘಾಟನಾ ಸಮಾರಂಭಕ್ಕೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಹಿರೂರ ಶ್ರೀ ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ ಪೀಠಾಧ್ಯಕ್ಷರು, ತಪಸ್ವಿಗಳಾದ ಶ್ರೀ ಷ ಬ್ರ ಗುರುಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಮುಖ್ಯಮಂತ್ರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡಲಾದ ಆಹ್ವಾನ ಪತ್ರಿಕೆಯನ್ನು ವಿಜಯಪುರ ಕನ್ನಡ ಮತ್ತು ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ ಹಾಗೂ ಅಯ್ಯುಬ್ ದ್ರಾಕ್ಷಿಯವರು ಹಸ್ತಾಂತರಿಸಿ ಆಹ್ವಾನ ನೀಡಿದರು.
ಅಕ್ಟೋಬರ್ ೧೧ ರಂದು ಭಾನುವಾರ ಬೆಳಿಗ್ಗೆ ೧೧:೫೦ಕ್ಕೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿದೇವಿಯ ಅಗ್ರ ಪೂಜೆಯೊಂದಿಗೆ ದಸರಾ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಹಿರೂರ ಹಿರೇಮಠದ ಶ್ರೀಗಳಿಗೆ ಪಾಲ್ಗೊಳ್ಳುವಂತೆ ಆಹ್ವಾನಿಸಿದರು.