ತಾಳಿಕೋಟೆ: ಸಮಾಜದಲ್ಲಿ ಏಕತೆ ಶಿಸ್ತು ಸೇವೆ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವದು ಸಂಘದ ಘೋಷಿತ ಧ್ಯೇಯವಾಗಿದೆ ಎಂದು ತಾಳಿಕೋಟೆಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕರಾದ ರಾಜು ಹಂಚಾಟೆ ಅವರು ಹೇಳಿದರು.
ಶುಕ್ರವಾರರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಭಾರತ ದೇಶದ ಪ್ರಮುಖ ಪುರಾತನ ಸ್ವಯಂ ಸೇವಾ ಸಂಸ್ಥೆಯಾಗಿದೆ ದೇಶದ ಪ್ರಮುಖ ಪುರಾತನ ಸಂಘಟನೆಗಳಲ್ಲಿ ಈ ಸಂಘವು ಒಂದಾಗಿದೆ ಎಂದರು.
೧೯೨೫ ರ ವಿಜಯದಶಮಿ ದಿನದಂದು ಡಾ. ಕೇಶವ ಬಲಿರಾಮ್ ಹೆಡಗೆವಾರ್ ಅವರು ನಾಗಪುರದಲ್ಲಿ ಈ ಸಂಘವನ್ನು ಸ್ಥಾಪಿಸಿದರೆಂದರು. ಸಂಘದ ಮುಖ್ಯ ಧ್ಯೇಯ ಉದ್ದೇಶ ಹಿಂದೂ ಸಮಾಜದ ಸಂಘಟನೆ ರಾಷ್ಟ್ರೀಯ ಭಾವನೆ ಶಿಸ್ತು ಸೇವಾ ಮನೋಭಾವ ಮತ್ತು ದೇಶಭಕ್ತಿಯನ್ನು ಜನರಲ್ಲಿ ಮೂಡಿಸುವದ್ದಾಗಿದೆ ಎಂದರು. ಸಂಘದ ಪ್ರಮುಖ ಕಾರ್ಯಗಳಲ್ಲಿ ದೈಹಿಕ ವ್ಯಾಯಾಮ ಆಟ ಯೋಗ ಮತ್ತು ಶಿಸ್ತು ಬದ್ದತೆಯ ಚಟುವಟಿಕೆಗಳು ದೇಶಭಕ್ತಿ ರಾಷ್ಟ್ರದ ಭಗ್ಗೆ ಗೌರವ ಮತ್ತು ಜವಾಬ್ದಾರಿಯ ಭಾವನೆಯನ್ನು ಬೆಳೆದುವದ್ದಾಗಿದೆ ಎಂದರು. ಸಮಾಜ ಸೇವೆ ಪ್ರಕೃತಿ ವಿಕೋಪಗಳ ಸಂಧರ್ಭದಲ್ಲಿ ಪರಿಹಾರದ ಕಾರ್ಯಗಳು ಹಾಗೂ ಅಗತ್ಯವಿರುವವರೆಗೆ ನೆರವು ನೀಡುವದ್ದಾಗಿದೆ ಎಂದರು. ಇದು ಅಲ್ಲದೇ ತನ್ನ ಶಾಖೆಯಗಳ ಸೇವಾ ಚಟುವಟಿಕೆಗಳು ಹಾಗೂ ಸಾಮಜಿಕ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಜೀವನದಲ್ಲಿ ಪ್ರಭಾವ ಬೀರುವ ಸಂಘಟನೆಯಾಗಿದೆ ಎಂದರು. ಇಂತಹ ಪ್ರಗತಿಪರ ದೇಶದ ರಕ್ಷಣೆಯ ಜವಾಬ್ದಾರಿ ಹೊತ್ತುಕೊಂಡಂತಹ ೧೯೨೫ ರಿಂದ ದೇಶ ವಿದೇಶಗಳಲ್ಲಿಯೂ ತನ್ನ ಕಾರ್ಯವ್ಯಾಪ್ತಿ ಪಸರಿಸಿಕೊಂಡು ಈ ಸಂಘವನ್ನು ೧೯೪೨ ರಲ್ಲಿ ತಾಳಿಕೋಟೆಯಲ್ಲಿ ಪ್ರಾರಂಭಿಸಲಾಯಿತು. ತಾಳಿಕೋಟೆಯ ಹಿರಿಯರಾದ ದಿ. ರಾಮಣ್ಣ ಲೋಕರೆ, ದಿ. ಮೀನಾಜಿ ಲೋಕರೆ, ದಿ. ಭೀಮಸಿಂಗ್ ಹಜೇರಿ, ದಿ. ತೃಂಭಕರಾವ್ ಗೋಡಬೋಲೆ, ದಿ. ಭವಾನಿಸಿಂಗ್ ಹಜೇರಿ, ದಿ. ತುಳಜಾರಾಮ್ ಹಂಚಾಟೆ, ದಿ. ನಾಗೇಂದ್ರ ಜವಳಕರ, ದಿ. ಕುಬೇರಪ್ಪ ಭುಸಾರೆ, ದಿ. ವಿಠ್ಠಲಸಿಂಗ್ ಹಜೇರಿ, ದಿ. ನಾನಾಸಾಹೇಬ್, ದಿ. ಗಣಪತರಾವ್ ಮಾನೆ, ದಿ. ರತನಲಾಲ್ ಅಗರವಾಲಾ, ದಿ. ತಿಪ್ಪಣ್ಣ ಮಹೀಂದ್ರಕರ, ದಿ. ಶಂಕ್ರಪ್ಪ ಸೋನಾರ ಇವರನ್ನೊಳಗೊಂಡು ಇನ್ನೂ ಅನೇಕ ಹಿರಿಯರು ಸಂಘದ ಶಾಖೆಗಳ ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸಿ ಎಲ್ಲರಲ್ಲಿಯೂ ದೇಶಾಭಿಮಾನವನ್ನು ರೂಢಿಸುವಲ್ಲಿ ಯಶಸ್ವಿ ಕಂಡಿದ್ದಾರೆಂದರು.
ಅಂದಿನಿಂದ ಇಂದಿನವರೆಗೂ ಸಂಘ ತನ್ನ ಕಾರ್ಯ ವ್ಯಾಪ್ತಿ ಹೆಚ್ಚಿಸುತ್ತಾ ಪ್ರತೀ ವರ್ಷದಂತೆ ಈ ವರ್ಷವೂ ವಿಜಯದಶಮಿ ದಿನದಂದು ಆದರ್ಶಮಯ ಕಾರ್ಯ ಚಟುವಟಿಕೆಗಳ ಕುರಿತು ಎಲ್ಲರಲ್ಲಿ ದೇಶಾಭಿಮಾನ ಹೆಚ್ಚಿಸುತ್ತಾ ಸಾಗಿದೆ.
ಇದೇ ಅಕ್ಟೋಬರ್ ೨೦ ರಂದು ವಿಜಯದಶಮಿ ದಿನದಂದು ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಮುಂಜಾನೆ ೭.೩೦ ಘಂಟೆಯಿಂದ ೮.೩೦ ಘಂಟೆಯವರೆಗೆ ಕಾರ್ಯಕ್ರಮ ಜರುಗಲಿದೆ ಎಂದರು.
ಅಕ್ಟೋಬರ್ ೨೪ ರಂದು ಗಣವೇಷಧಾರಿ ಸ್ವಯಂ ಸೇವಕರ ಪಥ ಸಂಚಲನವು ಸಾಯಂಕಾಲ ೪.೧೫ ಘಂಟೆಗೆ ಸ್ಥಳೀಯ ಕನ್ನಡ ಶಾಲಾ ಮೈದಾನದಿಂದ ಪ್ರಾರಂಭಗೊಳ್ಳಲಿರುವ ಪಥ ಸಂಚಲನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಎಸ್.ಕೆ. ಹೈಸ್ಕೂಲ್ ಆವರಣದಲ್ಲಿ ೫.೧೫ ಕ್ಕೆ ತಲುಪಲಿದೆ. ೫.೩೦ ರಿಂದ ೬.೩೦ ರವರೆಗೆ ಸಾರ್ವಜನಿಕ ಸಮಾರಂಭ ಜರುಗಲಿದೆ ಎಂದು ಹಿರಿಯ ಸ್ವಯಂ ಸೇವಕ ರಾಜು ಹಂಚಾಟೆ ಅವರು ಹೇಳಿದರು.