Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶರೀಫರ ತತ್ವ ಪದಗಳಲ್ಲಿ ಜೀವನದ ಮೌಲ್ಯವಿದೆ - ಸಿದ್ದಲಿಂಗೇಶ್ ಸಜ್ಜನ ಶೆಟ್ಟರ್



ಗದಗ,ಜೂ,೧೩ : ಕನ್ನಡ ಸಾಹಿತ್ಯದಲ್ಲಿ ಹಲವಾರು ಸಾಹಿತ್ಯ ಪ್ರಕಾರಗಳನ್ನು ನೋಡಿದ್ದೇವೆ ಶರಣ ಸಾಹಿತ್ಯ, ವಚನ ಸಾಹಿತ್ಯ, ಚುಟುಕು ಸಾಹಿತ್ಯ, ಬಂಡಾಯ ಸಾಹಿತ್ಯ, ಹಾಗೂ ಜನಪದ ಸಾಹಿತ್ಯ, ಈ ಸಾಹಿತ್ಯ ಪ್ರಕಾರಗಳಲ್ಲಿ ಒಂದಾದ ಜಾನಪದ ಸಾಹಿತ್ಯದಲ್ಲಿ ವಿಶೇಷವಾಗಿ ನಮ್ಮ ನಾಡಿನ ಹಲವು ಶರಣರು ಸಂತರು ಸೂಫಿಗಳು ಮತ್ತು ಮತ್ತು ಸಾಮಾಜಿಕ ಚಳುವಳಿಯ ನಾಯಕರುಗಳು ಹಾಗೂ ದಾರ್ಶನೀಕರನ್ನ ಕಾಣುತ್ತೇವೆ, ಅಂತಹ ಸಮಾಜ ಸುಧಾರಕರಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹರಿಕಾರನೆಂದೆ ಹೆಸರುವಾಸಿಯಾದ ಸಂತ ಶಿಶುನಾಳ ಶರೀಫ ಶಿವಯೋಗಿಗಳು ಒಬ್ಬರು.
 ಅವರು ತಮ್ಮ ಸಾಹಿತ್ಯದಲ್ಲಿ ಹಲವಾರು ತತ್ವ ಪದಗಳನ್ನು ಮತ್ತು ಜನಪದ ಗೀತೆಗಳು ರಚಿಸಿ ಅವರೇ ಹಾಡಿ ಈ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡಿದ್ದಾರೆ,
 ಇಂದಿಗೂ ಸಂತ ಶಿಶುನಾಳ ಶರೀಫ ಸಾಹೇಬರ ಹಾಡುಗಳು ಎಂದರೆ ಎಲ್ಲರ ಮೈ ಮನ ಪುಳಕಗೊಳ್ಳುತ್ತದೆ, ನಾದಬೇಕು, ನಾದಬೇಕು, ನಾದಬೇಕು ನಾ ಹದ ಇಲ್ಲದ ಮೇಲೆ ನಾದ ಏಕೆ ಬೇಕು ಎಂಬ ಅರ್ಥವನ್ನು ಅತ್ಯಂತ ಅರ್ಥಗರ್ಭಿತವಾಗಿ ವಿವರಿಸುತ್ತಾ ಅವರ ತತ್ವಪದಗಳಲ್ಲಿ ಜೀವನದ ಮೌಲ್ಯವಿದೆ  ಎಂದು ಗದುಗಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಶ್ರೀ ಸಿದ್ದಲಿಂಗೇಶ ಸಜ್ಜನ್ ಶೆಟ್ಟರರವರು ಮಾತನಾಡಿದರು.
ಗದಗ ನಗರದ ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಹಾಗೂ ಜೇನುಗೂಡು ಜಾನಪದ ಕಲಾತಂಡ ಹುಯಿಲಗೋಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ’ಈ ತಿಂಗ್ಳು ಸುನಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜನಪದ ಕಲಾವಿದರು ಹಾಗೂ ಸಾಮಾಜಿಕ ಚಿಂತಕರಾದ ಬಸವರಾಜ ಈರಣ್ಣವರ ಸಂತ ಶಿಶುನಾಳ ಶರೀಫ ಸಾಹೇಬರ ತತ್ವಪದಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿ ಅದರ ಒಳಾರ್ಥ ಮತ್ತು ಆ ಸಾಹಿತ್ಯದ ದ್ವಿ ಗುಣ ಅರ್ಥಗಳನ್ನು ಬಿಡಿ ಬಿಡಿಯಾಗಿ ಹಾಡಿನ ಮುಖಾಂತರ ನೆರೆದಿದ್ದ ಸಭಿಕರ ಮುಂದೆ ಪ್ರಸ್ತುತಪಡಿಸಿದ್ದರು.
 ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಗದಗ ನಗರದ ವೇಲ್ ಪೆರ್ ಟೌನ್ ಶಿಪ್‌ನ ಸಂಘದ ಅಧ್ಯಕ್ಷರಾದ ಜನಾಬ್ ಆರ್ ವೈ ನದಾಫ್ ಅವರು ಮಾತನಾಡುತ್ತಾ ಸಂತ ಶಿಶುನಾಳ ಶರೀಫ ಸಾಹೇಬರು ಜಾತಿ ಮತ ಪಂಥವನ್ನು ಮೀರಿ ಬೆಳೆದ ವ್ಯಕ್ತಿ ಅದರಂತೆ ಅವರ ಸಾಹಿತ್ಯ ಮತ್ತು ಅವರ ವಿಚಾರಗಳು ಸೂರ್ಯ ಚಂದ್ರ ಇರುವವರೆಗೂ ಅಜರಾಮರ ಅವರ ಸಾಹಿತ್ಯವನ್ನು ಎಲ್ಲಾ ವರ್ಗದ ಜನರ ಗೌರವಿಸುತ್ತಾರೆ ಎಂದು ಮಾತನಾಡಿದರು
ಸಾಗೀತ ಕಾರ್ಯಕ್ರಮದ ತಬಲಾ ಸಾಥಿದಾರರಾಗಿ ಶರಣಪ್ಪ ಯಡಿಪೂರ ರವರು ಭಾಗವಹಿಸಿದ್ದರು. ಡಾ. ಶಾಂತಕುಮಾರ್ ಭಜಂತ್ರಿ , ಎಂ.ಬಿ. ಮಡಿವಾಳರ ಎ,ಎ, ನಧಾಪ್, ಅಶೋಕ ಅಗಸಿಮನಿ, ವಿ. ಎಲ್. ತಮ್ಮನಗೌಡ್ರ, ವಿಜಯ ಕಿರೇಸೂರ. ಶ್ರೀಮತಿ ಭಾರತಿ ಕಿರೇಸೂರ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಹೇಶ ಶಟವಾಜಿ ನಿರೂಪಿಸಿದರು,  ಟಿ, ಆರ್, ಬೇವಿನಮರದ ವಂದಿಸಿದರು, 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿದ್ಯುತ್ ಖಾಸಗೀಕರಣ ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ರೈತರ ಮನವಿವಿದ್ಯುತ್ ವಿತರಣೆ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ : ಸರಕಾರದ ನೀತಿಗೆ ರೈತರ ಆಕ್ರೋಶದೇಶ ಸೇವೆ ಮಾಡೋದು ಪವಿತ್ರವಾದ ಕಾರ್ಯ : ಜಟ್ಟೆಪ್ಪ ರವಳಿಜೂ. ೨೪ ರಂದು ಮೊಹರಮ್ ಹಬ್ಬದ ಪ್ರಸಿದ್ದ ಆಟವಿ ಖತಾಲ ಆಚರಣೆಜೂ.28 ರಂದು ಲಯನ್ಸ್‌ ಅಧಿಕಾರ ಹಸ್ತಾಂತರ26 ರಂದು  ಪ್ರತಿಭಾ ಪುರಸ್ಕಾರ  ಸಮಾರಂಭ "ಗಾವಠಾಣ ಜಾಗ ಅತಿಕ್ರಮಣ ತೆರವಿಗೆ ಆಗ್ರಹಿಸಿ ಧರಣಿ"ಮಹಾರಾಷ್ಟ್ರದಲ್ಲಿಯೂ ನೀರಿನ ಅಭಾವವಿದ್ದು, ರಾಜ್ಯಕ್ಕೆ ನೀರು ಬಿಡುವುದು ಕಷ್ಟಕರ: ಸಚಿವ ಸತೀಶ್‌ ಜಾರಕಿಹೊಳಿಸಿಂದಗಿ ಮತ್ತು ಆಲಮೇಲ ತಾಲೂಕುಗಳ ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಿಷಿ ಆನಂದ ಅಧಿಕಾರಿಗಳಿಗೆ ಸೂಚನೆನಗರದ ಕೇಂದ್ರ ಕಾರಾಗೃಹದಲ್ಲಿ  ಅಂತರಾಷ್ಟ್ರೀಯ ಯೋಗ ದಿನಾಚರಣೆ :