ಬೀಳಗಿ,16 : ದೇಶ ಕಂಡ ಅಪ್ರತಿಮ ಪ್ರಧಾನಿಗಳಾದ ನರೇಂದ್ರ ಮೋದಿಜಿ ಅವರ 76 ನೇ ಜನ್ಮದಿನವು 17 ಸೆಪ್ಟೆಂಬರ್ 2026 ರಂದು ಇರುವ ಕಾರಣ ಅವರ ಸಾಧನೆ ಸಾರ್ವಜನಿಕ ಸೇವೆಯ ಸಮರ್ಪಣೆಯ ಸುದೀರ್ಘ 25 ವರ್ಷಗಳು ತುಂಬಿರುವ ಸಲುವಾಗಿ ಬಿಜೆಪಿ ವತಿಯಿಂದ ಸೇವಾ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಈ ಪ್ರಯುಕ್ತ ಬೆಳಿಗ್ಗೆ ವಿವಿಧ ಗ್ರಾಮಗಳ ದೇವಸ್ಥಾನಗಳಲ್ಲಿ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಗುವುದು ಮತ್ತು ಪ್ರಧಾನ ಮಂತ್ರಿಗಳ ಅಭಿಮಾನಿಗಳ ಮನೆಗಳ ಮುಂದೆ ಸಾಯಂಕಾಲ ಜ್ಞಾನದ ಪ್ರತಿಕವಾಗಿರುವಂತಹ ದೀಪಗಳನ್ನು ಬೆಳಗಿಸುವುದರ ಮುಖಾಂತರ ಪ್ರಧಾನಿ ಅವರ ಜನ್ಮದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುವುದು
ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ (ತಿದ್ದುಪಡಿ) ಕಾಯ್ದೆ 2026 ಅನ್ನು ಅನುಮೋದಿಸಿ ವಂದೇ ಮಾತರಂ ನ ಎಲ್ಲಾ ಆರು ಚರಣಗಳನ್ನು ಸಂವಿಧಾನಾತ್ಮಕವಾಗಿ ಕಡ್ಡಾಯಗೊಳಿಸಲಾಗಿದೆ ಈ ಕಾನೂನಿನ ಮೂಲಕ ರಾಷ್ಟ್ರಗೀತೆಗೆ ಇರುವ ಸಮಾನ ಗೌರವ ಮತ್ತು ಸ್ಥಾನಮಾನಗಳನ್ನು ವಂದೇ ಮಾತರಂ ಗೆ ನೀಡಲಾಗಿದೆ
ಒಂದೇ ಮಾತರಂ ಗೀತೆಗೆ ಕತ್ತರಿ ಹಾಕುವ ಓಲೈಕೆ ರಾಜಕಾರಣವನ್ನು ಬಿಜೆಪಿ ಎಂದಿಗೂ ಒಪ್ಪುವುದಿಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ತುಷ್ಟೀಕರಣ ರಾಜಕಾರಣವನ್ನು ತಕ್ಷಣ ಕೈ ಬಿಟ್ಟು ಒಂದೇ ಮಾತರಂ ನ ಆರೂ ಚರಣಗಳನ್ನು ಹಾಡುವಂತೆ ಕೂಡಲೇ ಮರು ಸುತ್ತೋಲೆ ಹೊರಡಿಸಬೇಕು ಇಲ್ಲವಾದರೆ ಈ ನಿರ್ಧಾರದ ವಿರುದ್ಧ ರಾಜ್ಯದ ಜನರ ಆಕ್ರೋಶವನ್ನು ಸರ್ಕಾರ ಎದುರಿಸಬೇಕಾಗುತ್ತದೆ
ದಿನಾಂಕ 18 ಸೆಪ್ಟಂಬರ್ 2026 ರಂದು ಬೆಳಿಗ್ಗೆ 10.30 ಗಂಟೆಗೆ ಬೀಳಗಿಯ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಬಿಜೆಪಿ ಕಾರ್ಯಕರ್ತರು ಪಾದಯಾತ್ರೆಯೊಂದಿಗೆ ತಹಸಿಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು
ಈ ಪಾದಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳಬೇಕೆಂದು ಬಿಜೆಪಿ ಮಂಡಲದ ಅಧ್ಯಕ್ಷರು ತಿಳಿಸಿದರು.