ಬಳ್ಳಾರಿ25;: ತಾಲೂಕಿನ ಚಾಗನೂರು ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಕರ್ಣಾರ್ಜುನ ಕಾಳಗ ಬಯಲಾಟ ಪ್ರದರ್ಶನ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಮಾತನಾಡಿ, ಬಳ್ಳಾರಿಯ ಗಂಡುಮೆಟ್ಟಿನ ಕಲೆ ಬಯಲಾಟ. ಇದನ್ನು ಜೀವಂತವಾಗಿ ಉಳಿಸಲು ಪ್ರತಿಯೊಬ್ಬರೂ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ, ಸಹಾಯ ಮತ್ತು ಸಹಕಾರ ನೀಡಬೇಕು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಜನತೆ ಬಯಲಾಟ ಪ್ರದರ್ಶನ ಮಾಡುವುದರಿಂದ ಪ್ರಸ್ತುತ ಮೊಬೈಲ್ ಮತ್ತು ಟೀವಿಗಳ ಹಾವಳಿಯಲ್ಲೂ ಬಯಲಾಟ ಉಳಿದಿದೆ. ಈ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಎಸ್. ಗುರುಲಿಂಗನಗೌಡ, ಬಯಲಾಟದ ವ್ಯವಸ್ಥಾಪಕರಾದ ರಾಜಶೇಖರ, ರವಿ, ಶ್ರೀ ವೀರಭದ್ರೇಶ್ವರ ಸಾಂಸ್ಕೃತಿಕ ಜಲಾ ಟ್ರಸ್ಟ್ ಅಧ್ಯಕ್ಷ ಹೆಚ್. ವೀರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹಾರ್ಮೋನಿಯಂ ಮಾಸ್ಟರ್ ತೊಲಮಾಮಿಡಿ ಚಿಕ್ಕಣ್ಣ, ತಬಲಾ ಮಾಸ್ಟರ್ ಹೆಚ್. ವೀರೇಶ್ ಹಾರ್ಮೋನಿಯಂ ಮತ್ತು ತಬಲಾ ಸಾಥ್ ನೀಡಿದರು.
ಕರ್ಣಾರ್ಜುನ ಬಯಲಾಟ ಪ್ರದರ್ಶನ ನಡೆದಿದ್ದ ಜನಮನ ಸೂರೆಗೊಂಡಿತು.