ಯರಗಟ್ಟಿ: ಪುರಾತನ ಪರಂಪರೆ ಧಾರ್ಮಿಕ ಆಚರಣೆಗಳು ಜನರಿಗೆ ಆದ್ಯಾತ್ಮಿಕ ಶಕ್ತಿ ನೀಡುವ ಜತೆಗೆ ಸದ್ಗುಣವಂತರಾಗಲು ಪ್ರೇರಣೆ ನೀಡುತ್ತವೆ ಎಂದು ಕಟಕೋಳ ವಿರಕ್ತಮಠದ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.
ಸಮೀಪದ ಯರಝರ್ವಿ ಗ್ರಾಮದ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಹಬ್ಬದ ನಿಮಿತ್ಯ ಹಮ್ಮಿಕೊಂಡಿದ್ದ ೨೫ನೇ ವ?ದ ಬೆಳ್ಳಿ ಹಬ್ಬದ ಮಹೋತ್ಸವ ಹಾಗೂ ದೇವಿಯ ಪುರಾಣ ಪ್ರವಚನ ಕಾರ್ಯಕ್ರಮದ ಸಾನ್ನಿದ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶರನ್ನವರಾತ್ರಿಯ ಒಂಬತ್ತು ದಿನಗಳ ಪಯಂತ ಉಪವಾಸ ಸ್ವಾಧ್ಯಾಯದಲ್ಲಿ ತೊಡಗಿಸಿಕೊಂಡರೆ ಶಾಂತಿ ನೆಮ್ಮದಿ ಲಭಿಸುತ್ತದೆ ಎಂದರು.
ಯರಗಟ್ಟಿಯ ಸರಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಅವರು ನವರಾತ್ರಿ ಆಚರಣೆಯನ್ನು ವಿಶೇ?ತೆ ಕುರಿತು ಉಪನ್ಯಾಸ ನೀಡಿದರು. ಹಿಂದೂ ಧರ್ಮದಲ್ಲಿ ನವರಾತ್ರಿಯ ಒಂಬತ್ತು ದಿನಗಳಲ್ಲಿ ದುರ್ಗಾ ದೇವಿಯ ಒಂಬತ್ತು ವಿವಿಧ ರೂಪಗಳನ್ನು (ನವದುರ್ಗೆಯರು) ವಿಶೇ?ವಾಗಿ ಪೂಜಿಸಲಾಗುತ್ತದೆ. ೧. ಶೈಲಪುತ್ರಿ (ಮೊದಲನೇ ದಿನ): ಪರ್ವತರಾಜನಾದ ಹಿಮಾಲಯನ ಮಗಳು. ’ಶೈಲ’ ಎಂದರೆ ಶಿಖರ ಅಥವಾ ಪರ್ವತ. ಈಕೆ ಶಿವನ ಪತ್ನಿಯೂ ಹೌದು, ೨. ಬ್ರಹ್ಮಚಾರಿಣಿ (ಎರಡನೇ ದಿನ): ತಪಸ್ಸು ಮತ್ತು ತ್ಯಾಗದ ಸಂಕೇತವಾಗಿರುವ ದೇವಿ. ಬ್ರಹ್ಮಚರ್ಯದ ನಿ?ಯನ್ನು ಪಾಲಿಸುವವಳು, ೩. ಚಂದ್ರಘಂಟಾ (ಮೂರನೇ ದಿನ): ಇವಳ ತಲೆಯ ಮೇಲೆ ಅರ್ಧಚಂದ್ರಾಕಾರದ (ತಿಂಗಳಿನಂತಹ) ಗಂಟೆಯಿದೆ. ಇವಳು ದು?ರ ಸಂಹಾರಕಿ ಮತ್ತು ಶಾಂತಿಯ ಸ್ಥಾಪಕಿ, ೪. ಕೂ?ಂಡಾ (ನಾಲಕನೇ ದಿನ): ತನ್ನ ಮಂದಹಾಸದಿಂದಲೇ ಬ್ರಹ್ಮಾಂಡವನ್ನು ಸೃಷ್ಟಿಸಿದ ದೇವಿ. ಇವಳಿಗೆ ಎಂಟು ಕೈಗಳಿರುವ ಕಾರಣ ’ಅ?ಭುಜಾದೇವಿ’ ಎಂದೂ ಕರೆಯುತ್ತಾರೆ, ೫. ಸ್ಕಂದಮಾತಾ (ಐದನೇ ದಿನ): ಕಾರ್ತಿಕೇಯ (ಸ್ಕಂದ) ದೇವರ ತಾಯಿ. ಭಕ್ತರಿಗೆ ರಕ್ಷಣೆ ಮತ್ತು ಮಾತೃತ್ವದ ಕೃಪೆ ತೋರುವವಳು, ೬. ಕಾತ್ಯಾಯನಿ (ಆರನೇ ದಿನ): ಮಹಾಲಕ್ಷ್ಮಿಯ ಸ್ವರೂಪವೂ ಹೌದು. ಮಹರ್ಷಿ ಕಾತ್ಯಾಯನರ ಮಗಳಾಗಿ ಜನಿಸಿದ ಉಗ್ರ ಮತ್ತು ವೀರ ಯೋಧೆಯ ರೂಪ, ೭. ಕಾಳರಾತ್ರಿ (ಏಳನೇ ದಿನ): ಅತ್ಯಂತ ಉಗ್ರವಾದ ಕಪ್ಪು ವರ್ಣದ ರೂಪ. ಭಕ್ತರ ಭಯವನ್ನು ಹೋಗಲಾಡಿಸಿ ಧೈರ್ಯವನ್ನು ನೀಡುವ ದೇವಿ, ೮. ಮಹಾಗೌರಿ (ಎಂಟನೇ ದಿನ): ಅತ್ಯಂತ ಶಾಂತ ಮತ್ತು ಶುಭ್ರವಾದ ರೂಪ. ಇವಳು ಸೌಂದರ್ಯ ಹಾಗೂ ಪರಿಶುದ್ಧತೆಯ ಸಂಕೇತ, ೯. ಸಿದ್ಧಿಧಾತ್ರಿ (ಒಂಬತ್ತನೇ ದಿನ): ಎಲ್ಲಾ ರೀತಿಯ ಅಲೌಕಿಕ ಶಕ್ತಿಗಳನ್ನು (ಸಿದ್ಧಿಗಳನ್ನು) ಮತ್ತು ಬುದ್ಧಿವಂತಿಕೆಯನ್ನು ತನ್ನ ಭಕ್ತರಿಗೆ ಅನುಗ್ರಹಿಸುವ ತಾಯಿ ಎಂದು ನವದುರ್ಗೆಯರ ಒಂಬತ್ತು ಅವತಾರಗಳಲ್ಲಿ ಪೂಜಿಸಲಾಗುತ್ತದೆ ಎಂದು ಹೇಳಿದರು.
ಪ್ರವಚನಕಾರ ಗುರುನಾಥ ಶಾಸ್ತ್ರಿ ಮಾತನಾಡಿ, ದೇವಿ ಪುರಾಣಗಳು ಧಾರ್ಮಿಕ ಜಾಗೃತಿ ಮೂಡಿಸುವದರ ಜತೆಗೆ ಹಿಂದೂ ಧರ್ಮದ ಸಂಪ್ರದಾಯ, ಸಂಸ್ಕೃತಿ ಮತ್ತು ಮೌಲ್ಯಗಳ ಸಂರಕ್ಷಣೆಗೆ ಸಹಕಾರಿ ಯಾಗಿವೆ ಎಂದರು.
ಮುರಗಯ್ಯ ಹಿರೇಮಠ ಸ್ವಾಮಿಗಳು ಸನ್ನಿಧ್ಯ ವಹಿಸಿದ್ದರು, ಕಸಾಪ ಅಧ್ಯಕ್ಷ ತಮ್ಮಣ್ಣ ಕಾಮಣ್ಣವರ, ಪರಶುರಾಮ ಸಿಂಗನವರ, ಬಿ. ಕೆ. ಹೂಗಾರ, ಚಾಯಪ್ಪ ಸಿಂಗನವರ, ಗೋವಿಂದಪ್ಪ ಪತ್ತಾರ, ಸಿದ್ದಪ್ಪ ಭೂಶಿ, ಬಸವರಾಜ ಹೂಗಾರ, ಎನ್. ಬಿ. ತೋರಣಗಟ್ಟಿ, ಚಿದಾನಂದ ಬಡಿಗೇರ, ಶಿವಾನಂದ ತಟಪಟಿ, ಈರಣ್ಣಾ ಹುಲ್ಲೂರ ಸೇರಿದಂತೆ ಇತರರಿದ್ದರು.