ಮಹಾಲಿಂಗಪುರ,ಸೆ,೧೦: ಗಣೇಶೋತ್ಸವ ಕೇವಲ ವಿಜೃಂಭಣೆಯ ಆಚರಣೆಯಾಗದೆ, ಶಾಂತಿ, ಸೌಹಾರ್ದತೆ, ಭಕ್ತಿಭಾವ ಹಾಗೂ ನಮ್ಮ ನಾಡಿನ ಸಾಂಪ್ರದಾಯಿಕ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬವಾಗಬೇಕು. ಆಧುನಿಕತೆಯ ಹೆಸರಿನಲ್ಲಿ ಡಿಜೆ ಸಂಸ್ಕೃತಿಗೆ ಮಾರುಹೋಗುವ ಬದಲು ಕರಡಿ ಮಜಲು, ಡೋಲು ಕುಣಿತ, ದೋಲ್ ತಾ? ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲಾ ಪ್ರಕಾರಗಳಿಗೆ ಆದ್ಯತೆ ನೀಡುವ ಮೂಲಕ ಹಳೆ ಸಂಸ್ಕೃತಿಗೆ ಮರುಜೀವ ನೀಡಬೇಕು ಎಂದು ಮಹಾಲಿಂಗಪುರ ಪೊಲೀಸ್ ಠಾಣೆಯ ನೂತನ ಪಿಎಸ್‌ಐ ಪ್ರೀತಮ್ ನಾಯಕ ಹೇಳಿದರು.
ಗಣೇಶೋತ್ಸವದ ಹಿನ್ನೆಲೆಯಲ್ಲಿ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಕಾಲಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ. ಆದರೆ ಬದಲಾವಣೆಯ ಭರದಲ್ಲಿ ನಮ್ಮ ಮೂಲ ಸಂಸ್ಕೃತಿ, ಪರಂಪರೆ ಹಾಗೂ ಸಾಂಪ್ರದಾಯಿಕ ಆಚರಣೆಗಳನ್ನು ಮರೆಯಬಾರದು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಡಿಜೆ ಮೂಲಕ ಶಬ್ದ ಮಾಲಿನ್ಯ ಉಂಟು ಮಾಡುವ ಬದಲು ಸಾಂಪ್ರದಾಯಿಕ ಕಲಾ ತಂಡಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಕರಡಿ ಮಜಲು, ಡೋಲು ಕುಣಿತ ಹಾಗೂ ದೋಲ್ ತಾ?ದಂತಹ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿದರೆ ಗಣೇಶೋತ್ಸವಕ್ಕೆ ಮತ್ತ? ಮೆರುಗು ಬರಲಿದೆ. ಇಂತಹ ಕಲಾ ಪ್ರದರ್ಶನಗಳನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳ ಜನರು ಮಹಾಲಿಂಗಪುರಕ್ಕೆ ಆಗಮಿಸುವಂತಾಗಬೇಕು. ಇದರಿಂದ ನಗರದ ಗಣೇಶೋತ್ಸವಕ್ಕೆ ವಿಶಿಷ ಹೆಗ್ಗಳಿಕೆ ದೊರೆಯುವುದರ ಜೊತೆಗೆ ನಮ್ಮ ಸಂಸ್ಕೃತಿ ಮುಂದಿನ ಪೀಳಿಗೆಗೂ ಪರಿಚಯವಾಗಲಿದೆ ಎಂದು ಹೇಳಿದರು.
ಅಹಿತಕರ ಘಟನೆಗೆ ಅವಕಾಶ ನೀಡದಿರಿ : ಗಣೇಶೋತ್ಸವವನ್ನು ಪ್ರತಿಯೊಬ್ಬರೂ ಶಾಂತಿಯುತವಾಗಿ ಹಾಗೂ ಭಾವೈಕ್ಯತೆಯಿಂದ ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗಣೇಶೋತ್ಸವ ಸಮಿತಿಗಳು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು. ಸಣ್ಣಪುಟ್ಟ ಘಟನೆಗಳನ್ನೂ ನಿರ್ಲಕ್ಷಿಸದೆ ತಕ್ಷಣ ಪೊಲೀಸರ ಗಮನಕ್ಕೆ ತರಬೇಕು. ತುರ್ತು ಪರಿಸ್ಥಿತಿ ಎದುರಾದಲ್ಲಿ ಕೂಡಲೇ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಬೇಕು. ಎಲ್ಲರೂ ಪರಸ್ಪರ ಸಹಕಾರದಿಂದ ಹಬ್ಬ ಆಚರಿಸುವ ಮೂಲಕ ಮಹಾಲಿಂಗಪುರದ ಶಾಂತಿ ಮತ್ತು ಸೌಹಾರ್ದತೆಯ ಪರಂಪರೆಯನ್ನು ಮತ್ತಷ ಬಲಪಡಿಸಬೇಕು ಎಂದು ಪಿಎಸ್‌ಐ ಪ್ರೀತಮ್ ನಾಯಕ ಮನವಿ ಮಾಡಿದರು.
ಮನೆ ಮನೆಗೆ ವಿಸರ್ಜನೆ ವಾಹನ: ಪಾಟೀಲ : ಸಿಪಿಐ ಆರ್. ಪಾಟೀಲ ಮಾತನಾಡಿ, ಗಣೇಶ ಮೂರ್ತಿಗಳ ವಿಸರ್ಜನೆಗೆ ಪುರಸಭೆಯಿಂದ ಸಂಚಾರಿ ವಾಹನದ ವ್ಯವಸ್ಥೆ ಮಾಡಿ ಮನೆ ಮನೆಗೆ ತೆರಳಿ ವಿಸರ್ಜನೆಗೆ ಅನುಕೂಲ ಕಲ್ಪಿಸುವಂತೆ ಕ್ರಮ ಕೈಗೊಳ್ಳಬೇಕು. ಗಣೇಶೋತ್ಸವ ಭಕ್ತಿಪೂರ್ವಕವಾಗಿ ನಡೆಯಬೇಕು. ಡಿಜೆ ಬಳಕೆಯಿಂದ ಶಬ್ದ ಮಾಲಿನ್ಯ ಉಂಟಾಗುವುದರಿಂದ ಸಾಂಪ್ರದಾಯಿಕ ಆಚರಣೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಮಹಾಲಿಂಗಪುರ ಭಾವೈಕ್ಯತೆಯ ನಗರವಾಗಿದ್ದು, ಹಿಂದಿನಿಂದಲೂ ಎಲ್ಲ ಸಮುದಾಯದವರು ಪರಸ್ಪರ ಬಾಂಧವ್ಯದಿಂದ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ವಿಜೃಂಭಣೆಯೊಂದಿಗೆ, ಆದರೆ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಗಣೇಶೋತ್ಸವ ಆಚರಿಸಬೇಕು ಎಂದು ಹೇಳಿದರು.
ವಿದ್ಯುತ್ ಸುರಕ್ಷತೆಗೆ ಆದ್ಯತೆ : ಹೆಸ್ಕಾಂ ಅಧಿಕಾರಿ ರಾಜೇಶ ಬಾಗೋಜಿ ಮಾತನಾಡಿ, ಗಣೇಶ ಮಂಟಪ ನಿರ್ಮಿಸುವ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ತಂತಿಗಳ ಬಗ್ಗೆ ವಿಶೇ? ಗಮನಹರಿಸಬೇಕು. ಯಾವುದೇ ವಿದ್ಯುತ್ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪ್ರತಿ ಗಣೇಶೋತ್ಸವ ಸಮಿತಿಯಲ್ಲೂ ವಿದ್ಯುತ್ ಸುರಕ್ಷತೆ ನೋಡಿಕೊಳ್ಳಲು ಒಬ್ಬರನ್ನು ಜವಾಬ್ದಾರರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧಿಕಾರಿ ಚಿದಾನಂದ ಮಠಪತಿ ಮಾತನಾಡಿ, ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ನೀಡುವ ರೀತಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿ?ಪಿಸಿ ಹಬ್ಬ ಆಚರಿಸಬೇಕು. ಪರಿಸರ ಸ್ನೇಹಿ ಆಚರಣೆಯಿಂದ ಪರಿಸರ ಸಂರಕ್ಷಣೆಯ ಜೊತೆಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೂ ಸಹಕಾರಿಯಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ಸಿದ್ದಪ್ಪ ಶಿರೋಳ, ಸಂಗಪ್ಪ ಹಲ್ಲಿ ಹಾಗೂ ಪತ್ರಕರ್ತ ಜಯರಾಮ ಶೆಟ್ಟಿ ಮಾತನಾಡಿದರು.
ಸಭೆಯಲ್ಲಿ ವೀರೇಶ ಆಸಂಗಿ, ಮಲ್ಲಪ್ಪ ಮಿರ್ಜಿ, ರಾಮಣ್ಣ ಹಟ್ಟಿ, ಸಿದಗಿರೆಪ್ಪ ಉಳ್ಳಾಗಡ್ಡಿ, ಸಂಗನಗೌಡ ಪಾಟೀಲ, ಗಜಾನನ ಬೆಳಗಾವಂಕರ, ತಿಪ್ಪಣ್ಣ ಬಂಡಿವಡ್ಡರ, ವಿರುಪಾಕ್ಷ ಮುಂಗರವಾಡಿ, ಪಾರುಕ ಪಕಾಲಿ, ಮಹಾದೇವ ಸಾವಂತ, ಜಮೀರ್ ಯಕ್ಸಂಬಿ, ಜಬಿವುಲ್ಲಾ ಮುಲ್ಲಾ, ಅರ್ಜುನ ಪವಾರ, ಬಸು ಮುರಾರಿ, ಸುರೇಶ ನಾವಿ, ಪ್ರಹ್ಲಾದ ನುಲಿ, ರಫೀಕ್ ಮಾಲ್ದಾರ್, ಪರಶುರಾಮ ಅಮರಾವತಿ ಸೇರಿದಂತೆ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅನೇಕ ಮುಖಂಡರು ಉಪಸ್ಥಿತರಿದ್ದರು.