ಬಳ್ಳಾರಿ. ಸೆ. 10:: ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕೀಹೊಳಿ ಅವರ ನಿವಾಸದ ಮೇಲೆ ಇಂದು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿರುವುದು ಬಿಜೆಪಿಯ ಕುತಂತ್ರ ಮತ್ತು ರಾಜಕೀಯ ಪ್ರೇರಿತವಾಗಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಕೆ.ಬಸಪ್ಪ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ವಿಕೆ ಬಸಪ್ಪ, ಬಿಜೆಪಿಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೇರವಾಗಿ ಚುನಾವಣೆ ಎದುರಿಸದೆ ಹೀಗೆ ಅಡ್ಡ ದಾರಿ ಹಿಡಿದು ಕರ್ನಾಟಕದಲ್ಲಿ ಕೇವಲ ಎಸ್ಸಿ, ಎಸ್ಟಿ ನಾಯಕರನ್ನು ಟಾರ್ಗೆಟ್ ಮಾಡಿ ಇಡಿ, ಸಿಬಿಐ ಛೂ ಬಿಡುತ್ತಿದ್ದಾರೆ, ರಾಜ್ಯದಲ್ಲಿ ಜೋಡೆತ್ತುಗಳಂತೆ ಇರುವ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸತೀಶ್ ಜಾರಕೀಹೊಳಿ ಅವರ ನೇತೃತ್ವದಲ್ಲಿ 2028 ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಬರುತ್ತೆ ಅಂತಾ ಅಧಿಕಾರ ದುರ್ಧಾಬಳಕೆ ಮಾಡಿಕೊಂಡು ಬಿಜೆಪಿ ದಾಳಿ ನಡೆಸುತ್ತಿದೆ ಇದು ಸರಿಯಲ್ಲ.
ಬಿ. ಜೆ. ಪಿ ಯ ಷಡ್ಯಂತ್ರ ಹೀಗೆ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ನಮ್ಮ ವಾಲ್ಮೀಕಿ ಸಮುದಾಯ ಬಿಜೆಪಿಗೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ವಾಲ್ಮೀಕಿ ಜನಾಂಗದ ನಾಯಕರಾದ ನಾಗೇಂದ್ರ, ಕೆ ಏನ್ ರಾಜಣ್ಣ, ಈಗ ಸತೀಶ್ ಅಣ್ಣಾ
ಅಲ್ಲದೆ ಬಿಜೆಪಿ ಪಕ್ಷದ ನಾಯಕರಾದ ರಾಮುಲು, ಸಣ್ಣ ಪಕ್ಕೀರಪ್ಪ,ಟಿ ಎಚ್ ಸುರೇಶ ಬಾಬು, ರಾಜು ಗೌಡ ಇನ್ನು ಅನೇಕ ನಾಯಕರು ಬಿಜೆಪಿ ಕುತಂತ್ರದಿಂದ ಸೋಲಬೇಕಾಯಿತು ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.