LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ 

ಬೀಳಗಿ- ತಾಲೂಕಿನ ಬಾವಲತ್ತಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಸನ್ ೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ (ಸಿಎಂಐಡಿಪಿ) ೧೦ ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಶ್ರೀ ಪೂರ್ಣಾನಂದ ಮಠ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕರು, ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರಾದ ಜೆ. ಟಿ. ಪಾಟೀಲ ಭೂಮಿ ಪೂಜೆ ನೆರವೇರಿಸಿದರು.
 ಬಾವಲತ್ತಿ ಗ್ರಾಮದಿಂದ ಕುಂದರಗಿ ಅಡ್ಡ ರಸ್ತೆ ಸಂಪರ್ಕಿಸುವ ಮುಖ್ಯರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆಯ ನಂತರ ಗುತ್ತಿಗೆದಾರರು ರಸ್ತೆ ಅಗೆದು ಕಡಿ ಹಾಕಿ ಹಾಗೆಯೇ ಬಿಟ್ಟಿದ್ದು, ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿದೆ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಾಗ, ಶಾಸಕ ಜೆ. ಟಿ. ಪಾಟೀಲ ವರು ಗುತ್ತಿಗೆದಾರರಿಗೆ ಕರೆ ಮಾಡಿ ಎರಡ್ಮೂರು ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸುವಂತೆ ತಾಕೀತು ಮಾಡಿದರು.  
 ಈ ಸಂದರ್ಭದಲ್ಲಿ ಶ್ರೀಮಠದ ವಿಜಯವೇದಾಂಗ ಸ್ವಾಮಿಗಳು, ಕುಂದರಗಿ ರಾಮಲಿಂಗೇಶ್ವರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಆರ್. ಆರ್. ಪೂಜಾರ, ಬೂದಿಹಾಳ (ಎಸ್.ಎ.) ಪಿಕೆಪಿಎಸ್ ಅಧ್ಯಕ್ಷ  ಎ. ಎಲ್. ಪೂಜಾರ, ಮುಖಂಡರಾದ ವಿ. ಆರ್. ಪೂಜಾರ, ಬಿ. ಎ. ಪಾಟೀಲ, ಹನಮಂತ ಕನಸಗೇರಿ, ಪುಂಡಲೀಕಪ್ಪ ಮರೆಮ್ಮನವರ, ರಸೂಲ ಮುಜಾವರ, ಗೋವಿಂದಗೌಡ ಪಾಟೀಲ, ಕೃಷ್ಣಾ ನಜರದ, ಗಿರೀಶ ಮಡಿವಾಳರ, ಸಂಗಣ್ಣ ಮುರಕಾಳಚಿಟ್ಟಿ ಮತ್ತಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೀಟ್ ಹಾಗೂ ಸಿಇಟಿ ವಿಶೇಷ ಮಾರ್ಗದರ್ಶನ ಕಾರ್ಯಾಗಾರಸಣ್ಣ ನೀರಾವರಿ ಇಲಾಖೆ ಕಛೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಸಚಿವ ಲಕ್ಷ್ಮಣ ಸವದಿ ಭೂಮಿ ಪೂಜೆ.೧೨೫ ದಿನಗಳ ಉದ್ಯೋಗ ಖಾತರಿ: ರಾಮದುರ್ಗ ತಾಲೂಕಿನಲ್ಲಿ ಜಾಬ್ ಕಾರ್ಡ್ ಮೇಳಕ್ಕೆ ಚಾಲನೆಮಹಾದೇವಪ್ಪ ಯಾದವಾಡ ಅಭಿಮಾನಿ ಬಳಗದಿಂದ ಉಚಿತ ಹೆಲ್ಮೆಟ್ ವಿತರಣೆರಾಮದುರ್ಗದಲ್ಲಿ ಉಚಿತ ಉಚಿತ ಹೃದಯ ಹಾಗೂ ಆರೋಗ್ಯ ತಪಾಸಣಾ ಶಿಬಿರಚಚಡಿ ಏತ ನೀರಾವರಿ ಶೀಘ್ರ  ಯೋಜನೆ ಅನುಷ್ಠಾನಕ್ಕೆ ಅಗ್ರಹಿಸಿ ರೈತರಿಂದ ದಿ. 24 ರಂದು ರಸ್ತಾರೋಖೊ.ಮಲ್ಲಿಕಾರ್ಜುನ ಖರ್ಗೆ ಭಾಷಣದ ಸ್ಥಳ ಶುದ್ಧೀಕರಣಕ್ಕೆ ಖಂಡನೆ: ಕಾಗವಾಡದಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ಶೆಲ್ ನೆಕ್ಸ್ ಪ್ಲೋರರ್ಸ್ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ತರಬೇತಿ ರಿಫ್ರೆಶರ್ ತರಬೇತಿ-೭  ಕಂಚವೀರ ನಗರ ನಿವಾಸಿಗಳ ಗ್ರಾಮ ಪಂ ವಿರುದ್ದ ಆಕ್ರೋಶ