ನೇಸರಗಿ., ಆ. 29.ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಏರಿಳಿತ ಅನುಭವಿಸಿ ವ್ಯಾಸಂಗ ಸಂದರ್ಭದಲ್ಲಿ ಮುನ್ನಡೆ ಅನುಭವಿಸುತ್ತಾರೆ. ಆದರೆ ಪದವಿ ಪೂರ್ವ ಶಿಕ್ಷಣವು ವಿದ್ಯಾರ್ಥಿಗಳು ಚನ್ನಾಗಿ ಕಲಿತು ಶ್ರಮಪಟ್ಟು ವ್ಯಾಸಂಗ ಮಾಡಿದರೆ ಮುಂದೆ ಉಜ್ವಲ ಭವಿಷ್ಯ ಹಾಗೂ ಶಿಕ್ಷಣದ ಉತ್ತಮ ಅಡಿಪಾಯ ಎಂದು ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ನಾನಾಸಾಹೇಬ ಪಾಟೀಲ ಹೇಳಿದರು.
ಅವರು ಶನಿವಾರದಂದು ಗ್ರಾಮದ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಲೀಲಾಮಠದಲ್ಲಿ ಆಯೋಜಿಸಲಾಗಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಳಗಾವಿ, ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ನೇಸರಗಿ ಇದರ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ಸಾಂಸ್ಕೃತಿಕ, ಕ್ರೀಡಾ, ಎನ್ ಎಸ್ ಎಸ್ ಘಟಕ, ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ನೇಸರಗಿ ಭಾಗದ ವಿದ್ಯಾರ್ಥಿಗಳಿಗೆ ಬಹು ಅನುಕೂಲ ಇರುವ ಕಾಲೇಜು ಇದ್ದು ಜಿಲ್ಲಾ, ತಾಲೂಕಿಗೆ ಹೋಗಿ ಕಲಿಯುವ ಪ್ರಮೇಯು ಇಲ್ಲ, ವ್ಯಾಸಂಗ ಕಲಿಸುವ ಪ್ರಾದ್ಯಾಪಕರು ನುರಿತವರು ಇದ್ದು, ಗುರುವಿಗೆ ಗುಲಾಮರಾಗಿ ಶಿಕ್ಷಣ ಕಲಿತು ಜೀವನದಲ್ಲಿ ಮುಂದೆ ಬಂದು ಪಾಲಕರ ಅಸೆ ಈಡೇರಿಸಿರಿ ಮತ್ತು ರಾಜ್ಯ ಮಟ್ಟ ಮತ್ತು ರಾಷ್ಟ್ರೀಯ ಮಟ್ಟಕ್ಕೆ ಕ್ರೀಡೆಗೆ ಹೋಗುವ ವಿದ್ಯಾರ್ಥಿಗಳಿಗೆ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ವಿದ್ಯಾರ್ಥಿಗಳಿಗೆ ಸ್ವಂತ ಹಣಕಾಸು ನೆರವು ನೀಡುತ್ತಿದ್ದು ಇದರ ಸದುಪಯೋಗ ಪಡೆಯಿರಿ ಎಂದು ನಾನಾಸಾಹೇಬ ಪಾಟೀಲ ಹೇಳಿದರು.

ಕಾರ್ಯಕ್ರಮದ ಅಥಿತಿಗಳಾಗಿ ಆಗಮಿಸಿದ್ದ ನಂದಗಡ ಮಹಾತ್ಮಾ ಗಾಂಧಿ ಕಾಲೇಜಿನ ಪ್ರಾಚಾರ್ಯರಾದ ಎಂ ಕೆ ಭಜಂತ್ರಿ ಮಾತನಾಡಿ ಭವಿಷ್ಯದ ದ್ರಿಷ್ಟಿಯಿಂದ ವಿದ್ಯಾರ್ಥಿಗಳು ಶ್ರದ್ದೆ, ನಿಷ್ಠೆ, ಶ್ರಮದಿಂದ ವ್ಯಾಸಂಗ ಮಾಡಿ, ಓದು, ಕ್ರೀಡೆ, ಸಾಂಸ್ಕೃತಿಕ, ಸಾಹಿತ್ಯ, ಕಲೆ ವಿಷಯಗಳಲ್ಲಿ ತಮ್ಮ ಪ್ರತಿಭೆ ತೋರಿಸಿ ಜೀವನದಲ್ಲಿ ಮುಂದೆ ಬನ್ನಿ ಎಂದರು.
ಕಾಲೇಜು ಪ್ರಾಂಶುಪಾಲರಾದ ಎಸ್ ವ್ಹಿ ದೊಡ್ಡಮನಿ ಮಾತನಾಡಿ ನಮ್ಮ ಕಾಲೇಜು ವಿದ್ಯಾರ್ಥಿನೀಯರು ಜಿಲ್ಲಾ ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದು ಸಂತಸ ತಂದಿದ್ದು. ಅದೇ ರೀತಿ ವಿದ್ಯಾರ್ಥಿಗಳು ಅಭ್ಯಾಸದ ಜೊತೆಗೆ ಕ್ರೀಡೆ, ಎಲ್ಲ ರೀತಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜು ಸುಧಾರಣೆ ಸಮಿತಿ ಉಪಾಧ್ಯಕ್ಷ ಬಸವರಾಜ ಚಿಕ್ಕನಗೌಡ್ರ,ದೈಹಿಕ ಶಿಕ್ಷಕರಾದ ಸುಭಾಷ ಪಾಟೀಲ,ಮುಖಂಡ ಸುರೇಶ ಅಗಸಿಮನಿ,ಪ್ರೊ. ರಾಮಲಿಂಗ ಪಾಟೀಲ, ಬಸವರಾಜ ಉಲ್ಲಾಳ, ಪ್ರೊ. ಎಂ ಕೆ ಬೆಟಗೇರಿ, ಪ್ರೊ. ಕೆ ಎಂ ಗಾಣಿಗೇರ, ಪ್ರೊ. ಪಿ ಎಂ ಬೋಳನ್ನವರ, ಪ್ರೊ. ಸಿ ಬಿ ರೊಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರೆ,ಪ್ರೊ. ರಾಯವ್ವಗೋಳ ಮೇಡಂ ಸ್ವಾಗತಿಸಿದರು. ಸಂದ್ಯಾ ಮೇಡಮ, ವಾಲಿಕಾರ ಸರ್ ವಂದಿಸಿದರು.ಕಾಲೇಜಿನ ಎಲ್ಲ ಪ್ರಾದ್ಯಾಪಕರು, ವಿದ್ಯಾರ್ಥಿ, ವಿದ್ಯಾರ್ಥಿನೀಯರು ಇದ್ದರು.