ಬೆಳಗಾವಿ.*ರಾಣಿ ಚೆನ್ನಮ್ಮ ವೃತ್ತದಿಂದ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ರವರಿಗೆ ಶುಕ್ರವಾರದಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸುವ ವೇಳೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪೂರ್ಣ 6 ಚರಣ ವಂದೇ ಮಾತರಂ ಗೀತೆ ಹಾಡಿದರು. ರಾಜ್ಯಸಭಾ ಸಂಸದ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾದ ಪ್ರೊಫೆಸರ್ ಎಂ.ನಾಗರಾಜ್ ಮಾತನಾಡಿ ವಂದೇ ಮಾತರಂನ 150 ವರ್ಷಾಚರಣೆ ಸಂದರ್ಭದಲ್ಲಿ ಕೈಗೊಂಡಿರುವ ಈ ತೀರ್ಮಾನ ಸರ್ಕಾರದ ನಿರ್ಧಾರ ದುರದೃಷ್ಟಕರವಾಗಿದ್ದು, ಇದು ವಂದೇ ಮಾತರಂ ಗೀತೆಗೆ ಮಾತ್ರವದಲ್ಲದೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿರುವ ಘೋರ ಅವಮಾನವಾಗಿದೆ. ವಂದೇ ಮಾತರಂ ಕೇವಲ ಒಂದು ಗೀತೆಯಲ್ಲ; ಅದು ಭಾರತದ ಸ್ವಾತಂತ್ರ್ಯ ಹೋರಾಟದ ಚೈತನ್ಯ, ತ್ಯಾಗ ಮತ್ತು ರಾಷ್ಟ್ರಭಕ್ತಿಯ ಪ್ರತೀಕ. ಅಂತಹ ಐತಿಹಾಸಿಕ ಗೀತೆಯನ್ನು ಎರಡು ಚರಣಗಳಿಗೆ ಸೀಮಿತಗೊಳಿಸುವುದು, ಅದರ ಪರಂಪರೆ ಮತ್ತು ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನೇ ಕುಗ್ಗಿಸುವ ಪ್ರಯತ್ನವಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಹಾಗೂ ಮುಖಂಡ ಎಂ.ಬಿ.ಜಿರಲಿ ಮಾತನಾಡಿ
ವಂದೇ ಮಾತರಂಗೆ ರಾಜ್ಯ ಸರ್ಕಾರ ಮಾಡುತ್ತಿರುವ ಅಪಮಾನದ ವಿರುದ್ಧ ಬಿಜೆಪಿ ಜಿಲ್ಲಾದ್ಯಂತ ತೀವ್ರ ಪ್ರತಿಭಟನೆ ನಡೆಸಲಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ರೀತಿಯ ಭಂಗ ಉಂಟಾದರೆ, ಅದಕ್ಕೆ ಸಂಪೂರ್ಣ ಹೊಣೆ ರಾಜ್ಯ ಸರ್ಕಾರವೇ ಹೊರಬೇಕಾಗುತ್ತದೆ. ವಂದೇ ಮಾತರಂಗೆ ಕತ್ತರಿ ಹಾಕುವ ಓಲೈಕೆ ರಾಜಕಾರಣವನ್ನು ಬಿಜೆಪಿ ಎಂದಿಗೂ ಒಪ್ಪುವುದಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ತುಷ್ಟಿಕರಣ ರಾಜಕಾರಣವನ್ನು ತಕ್ಷಣ ಕೈಬಿಟ್ಟು, ವಂದೇ ಮಾತರಂನ ಆರು ಚರಣಗಳನ್ನು ಹಾಡುವಂತೆ ಕೂಡಲೇ ಮರುಸುತ್ತೋಲೆ ಹೊರಡಿಸಬೇಕು.ನಮ್ಮ ಸಂಸದ, ಶಾಸಕರು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಪೂರ್ಣ ಒಂದೇ ಮಾತರಂ ಗೀತೆ ಹಾಡಲಾಗುವದು, ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರಿಗೆ ಅನ್ಯಾಯ ಮಾಡಿದೆ, ಹೀಗೆ ಮುಂದುವರಿದರೆ ಈ ನಿರ್ಧಾರದ ವಿರುದ್ಧ ರಾಜ್ಯದ ಜನರ ಆಕ್ರೋಶವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದರು.
ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ಒಂದು ಸಮುದಾಯದ ಓಲೈಕೆಗಾಗಿ ಈ ರೀತಿ 2 ಚರಣ್ ಮಾತ್ರ ಒಂದೇ ಮಾತರಂ ಸ್ವಾತಂತ್ರ್ಯ ಗೀತೆ ಹಾಡುವದನ್ನು ಕಾಂಗ್ರಸ್ ಸರ್ಕಾರ ಮಾಡಿದ್ದು ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅನ್ಯಾಯ ಎಂದರು. ಈ ಸಂದರ್ಭದಲ್ಲಿ ಮಹಾನಗರ ಜಿಲ್ಲಾಧ್ಯಕ್ಷರಾದ ಗೀತಾ ಸುತಾರ, ಅರವಿಂದ ಪಾಟೀಲ, ಮುಖಂಡರಾದ ಎಂ ಬಿ ಜಿರಲಿ, ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ ದೇಶಪಾಂಡೆ, ಮಲ್ಲಿಕಾರ್ಜುನ ಮಾದಮ್ಮನವರ, ಧನಶ್ರೀ ದೇಸಾಯಿ, ಡಾ. ಸೋನಾಲಿ ಸರ್ನೊಬತ್ ,ಈರಣ್ಣ ಅಂಗಡಿ, ಸಚಿನ್ ಕಡಿ,ಯಲ್ಲೇಶ ಕೋಲಕಾರ, ಸಂತೋಷ ದೇಶನೂರ,ಮಹಾಂತೇಶ ಚಿನ್ನಪಗೌಡ್ರ, ಯುವರಾಜ ಜಾಧವ,ರಾಜಕುವರ ಪಾವಲೆ,ಮಹಾದೇವ ಶೆಕ್ಕಿ, ಆನಂದ ಅತ್ತುಗೋಳ,ವಿಜಯಕುಮಾರ ಕೊಡಗುನೂರ, ಮಾರುತಿ ಕೊಪ್ಪದ, ಮನೋಜ ಪಾಟೀಲ,ಬಾಳೇಶ ಚವ್ವನ್ನವರ್,ಈರನಗೌಡ ಹೊಸಗೌಡ್ರ,ಮಹಾದೇವ ಮುರಗೋಡ, ಸುರೇಶ ಪಾಟೀಲ, ಬಸವರಾಜ ಸೋಮಗೊಂಡ,ಗುಂಡು ತೋಪಿನಕಟ್ಟಿ, ಪ್ರವೀಣ ಮಾಳೆದವರ, ಸಂಜಯ ಕುಬಲ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.