ಜಮಖಂಡಿ,17 : ತಾಲುಕಿನ ಕನ್ನೊಳಿಗ್ರಾಮದ ಅರ್ಜುನ್ ಅಪ್ಪಾಸಾಬ ಕೊಕರೆ ಎಂಬ ವಿದ್ಯಾರ್ಥಿ ಉತ್ತಮ ಸಾಧನೆ ಮಾಡಿದ್ದು ಸರ್ಕಾರಿ ಕೋಟಾ ದಲ್ಲಿ ಎಂಬಿಬಿಸ್ ಸೀಟ್ ಪಡೆದು ಕೊಂಡಿದ್ದಾನೆ ವಿದ್ಯಾರ್ಥಿಯ ಸಾಧನೆಗೆ ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದ್ದು ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ, ಬಡತನದ ನಡುವೆ ಸಾಧನೆ ಮಾಡಿರುವ ವಿದ್ಯಾರ್ಥಿ ಕನ್ನೊಳ್ಳಿ ಗ್ರಾಮದ ಅಪ್ಪಾಸಾಬ ಕೊಕರೆ ಅವರ ಪುತ್ರ ನಿರಂತರ ಶ್ರಮ ವಹಿಸಿ ಅಭ್ಯಾಸ ಮಾಡಿ ಬೆಂಗಳೂರಿನ ಎಂವಿಜೆ ಮೆಡಿಕಲ್ ಕಾಲೇಜ್ ಮತ್ತು ರಿಸರ್ಚ ಸೆಂಟರ್‌ನಲ್ಲಿ ಎಂಬಿಬಿಎಸ್ ಸೀಟ್ ತನ್ನದಾಗಿಸಿಕೊಂಡಿದ್ದಾನೆ, ಅಣಪ್ಪ ಮೋಹಿತೆ, ರಾಜು ಮೋಹಿತೆ, ಅಶೋಕ ಬಿರಾದಾರ, ಸಂತೋಷ ಕೊಕರೆ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಅರ್ಜುನ ಅವರ ಮುಂದಿನ ವೈದ್ಯಕೀಯ ಶಿಕ್ಷಣಕ್ಕೆ ಶುಭ ಹಾರೈಸಿದರು.