ಇಂಡಿ : ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇಂಡಿ ಘಟಕ ಬೆಂಗಳೂರು ಮತ್ತು ಸಹಕಾರಿ ನೌಕರರ ಬ್ಯಾಂಕಿನ ನಿರ್ದೇಶಕರಾದ ಅಲ್ಲಾಭಕ್ಷ ವಾಲಿಕಾರ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಇವರ ಸಂಯುಕ್ತ ಆಶ್ರಯದಲ್ಲಿ
ಶಾಲೆಗೊಂದು ಸಸಿ ವಿತರಣಾ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎಸ್ ಆರ್ ನಡುಗಡ್ಡಿ ಮಾತನಾಡುತ್ತಾ ಪರಿಸರ ಎಂಬುದು ನಮ್ಮ ಜೀವನದ ಅಡಿಪಾಯ ಗಿಡ ಮರ ಬೆಳೆಸಿ ಪೋಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಮಾನವನ ಬದುಕು ಹಸನಾಗಿ ಇರಬೇಕಾದರೆ ಪರಿಸರವನ್ನು ನಾವು ಪ್ರೀತಿಸಬೇಕು ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಮನುಷ್ಯ ನಿಸರ್ಗ ನಾಶ ಮಾಡುತ್ತಿದ್ದಾನೆ ಸುಂದರ ಪರಿಸರ ನಿರ್ಮಾಣವಾಗಬೇಕಾದರೆ ಶಾಲೆಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ಮರ ಪೋಷಣೆ ಮಾಡುವ ಅರು ಅರಿವು ಮೂಡಿಸಿ ಒಂದು ಮರ ದತ್ತು ನೀಡಬೇಕೆಂದು ಹೇಳಿದರು
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಕಾಂತು ಇಂಡಿ ಮಾತನಾಡುತ್ತಾ ಪರಿಸರ ಇದ್ದರೆ ಸಂಸಾರ ಅದೇ ಸೃಷ್ಟಿಯ ಸಾರ ಪರಿಸರ ಉಳಿಸುವುದೇಂದರೆ ಮಾನವನ ಬದುಕುಳಿದಂತೆ ಪ್ರಕೃತಿ ಕೊಟ್ಟಿರುವ ಗ್ಯಾರಂಟಿಗಳೆಂದರೆ ಗಾಳಿ ನೀರು ಮಣ್ಣು ಬೆಳಕು ಸ್ವಚ್ಛಂದ ಪರಿಸರ ಇವೆಲ್ಲವೂ ಪ್ರೀತಿಸಬೇಕು ಎಂದು ಹೇಳಿದರು
ತಾಲೂಕಿನ ಎಲ್ಲ ಶಾಲೆಗಳಿಗೆ ಸಸಿ ಕೊಟ್ಟಂತಹ ಅಲ್ಲಾಭಕ್ಷ್ ವಾಲಿಕಾರ ಮಾತನಾಡಿ ಹಸಿರು ನಮ್ಮ ಉಸಿರು ಎಂದು ಹೇಳಿದರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ ಚವ್ಹಾಣ ಮಾತನಾಡಿ ಈ ಜಗತ್ತಿನಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ಎರಡು ಜೀವಿಗಳೆಂದರೆ ತಾಯಿ ಮತ್ತು ಪರಿಸರ ಎಂದು ಹೇಳಿದರು
ಈ ಸಂದರ್ಭದಲ್ಲಿ ಎಂ ಎಂ ವಾಲಿಕಾರ್ ವೈ ಟಿ ಪಾಟೀಲ್ ಎಸ್ ವ್ಹಿ ಹರಳಯ್ಯ ಅಲ್ತಾಫ್ ಬೋರಾಮಣಿ ಜಗದೀಶ್ ಚವಡಿಹಾಳ ಆನಂದ್ ಕೆಂಭಾವಿ ಉಮರ್ ಶೇಕ್, ಎ ಎಂ ಹೊಸೂರ್, ಡಿ ಎಸ್ ಕಣ್ಮಸ್, ಎಚ್ ಎಂ ಮುಜಾವರ್, ಎಂ ಡಿ ಕಂಠಿಕಾರ್, ಟಿ ಕೆ ಪೂಜಾರಿ, ಎ ಸಿ ಬಡಿಗೇರ್,
ಎ ಎಸ್ ಬಡಿಗೇರ, ಎಫ್ ಲಮಾಣಿ, ಬಿ ಎಸ್ ಸೋನ್ನದ, ತಾನಾಜಿ ಕಟಕದಂಡ, ಬಂಗಾರಪ್ಪ ಜಮಾದಾರ್, ಪಿಜಿ ಕಲ್ಮನಿ, ಸುರೇಶ್ ಚೌಹಾನ್, ವೇಣು ಚೌಹಾನ್, ಮೋಹನ್ ಕಟಟತದೊಂಡ, ರವಿ ಬಿರಾದಾರ್, ಎಸ್ ಎನ್ ನಾವಿ, ಮಲ್ಲಿಕಾರ್ಜುನ್, ಟೆಂಗಳೆ ತಿಪ್ಪಣ್ಣ ಜಂಬಗಿ, ಎಲ್ಲ ಶಾಲೆಯ ಮುಖ್ಯೋಪಾಧ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
