ಬಳ್ಳಾರಿ,ಜೂ.12
ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗದ ಸಂಶೋಧನಾರ್ಥಿ ಹೊನ್ನುರಪ್ಪ.ಎಸ್ ಅವರಿಗೆ ಪಿಎಚ್‌ಡಿ ಪದವಿ ಲಭಿಸಿದೆ.
ವಿವಿಯ ಸಮಾಜವಿಜ್ಞಾನ ನಿಕಾಯದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ಗೌರಿ ಮಾಣಿಕ ಮಾನಸ ಅವರ ಮಾರ್ಗದರ್ಶನದಲ್ಲಿ “ಎ ಸ್ಟಡಿ ಆನ್ ನ್ಯೂಟ್ರೀಷಿಯನ್ ಸ್ಟೇಟಸ್ ಆಫ್ ಪ್ರೀ-ಸ್ಕೂಲ್ ಚೀಲ್ಡರ್ನ್ ಇನ್ ಆರ್ಬನ್ ಸ್ಮಮ್ಸ್ : ವಿತ್ ಸ್ಪೇಷನ್ ರೇಫೆರೇನ್ಸ್ ಟು ಬಳ್ಳಾರಿ ಡಿಸ್ಟೀಕ್” ಎಂಬ ವಿಷಯದ ಮೇಲೆ ಮಹಾ ಪ್ರಬಂಧ ಮಂಡಿಸಿದ ಹಿನ್ನೆಲೆಯಲ್ಲಿ ಪಿಎಚ್‌ಡಿ ಪದವಿ ನೀಡಲಾಗಿದೆ ಎಂದು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
