ಕೊಪ್ಪಳ ಜೂನ್ ೧೦ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಶ್ರೀ ಕ್ಷೇತ್ರ ಹುಲಿಗೆಮ್ಮ ದೇವಿ ದೇವಸ್ಥಾನದ ಸಹಯೋಗದಲ್ಲಿ ಮಂಗಳವಾರ (ಜೂ. ೯ರಂದು) ಹುಲಿಗಿ ಗ್ರಾಮದಲ್ಲಿ ಹಮ್ಮಿಕೊಂಡ ಕಲಾ ನಡಿಗೆ ಜನರ ಬಳಿಗೆ ವಿನೂತನ ಕಾರ್ಯಕ್ರಮದಲ್ಲಿ ತೊಗಲು ಗೊಂಬೆಯಾಟ ಮತ್ತು ಜನಪದ ಸಂಗೀತವು ಜನರ ಮನ ರಂಜಿಸಿತು.
ಕಲಾ ನಡಿಗೆ ಜನರ ಬಳಿಗೆ ವಿನೂತನ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವೀರೇಶ ಶಿಲ್ಪಿ, ಗುರುನಾಥ ಪಾಯಸದವರು ಹಾಗೂ ರವಿ ಇನ್ನಿತರು ಉಪಸ್ಥಿತರಿದ್ದರು. ಕೇಶಪ್ಪ ಶಿಳ್ಳೆಖ್ಯಾತ ಅವರು ವಿರಾಟ ಪರ್ವ ಪ್ರಸಂಗ ತೊಗಲು ಗೊಂಬೆಯಾಟ ಹಾಗೂ ಫಕೀರಸಿದ್ಧಪ್ಪ ಹಾಗೂ ಸಂಗಡಿಗರು ಚೌಡಕಿ ಪದಗಳ ಗಾಯನ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.
