ರಾಯಬಾಗ,ಜೂ,೦೮: ತಾಲೂಕಿನ ಜಲಾಲಪುರ ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಪಾಂಡುರಂಗ ಮಾರುತಿ ಹವಾಲ್ದಾರ ಅವಿರೋಧ ಆಯ್ಕೆಯಾದರು.
ವಿನಾಯಕ ಪವಾರ ಅವರ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಚುನಾವಣಾಧಿಕಾರಿಯಾಗಿ ವಿ.ಆರ್.ಭಜಂತ್ರಿ ಕಾರ್ಯ ನಿರ್ವಹಿಸಿದರು. ಪಿಡಿಒ ದತ್ತಾ ಸಾವಂತ, ಉಪಾಧ್ಯಕ್ಷೆ ಪ್ರಮಿಳಾ ಹಿಡಕಲ, ಸದಸ್ಯರಾದ ನಾಮದೇವ ಕಾಂಬಳೆ, ಅಣ್ಣಾಸಾಹೇಬ ಹೆರವಾಡೆ, ಮೌಲಾನಾ ನದಾಫ, ವಿನಾಯಕ ಪವಾರ, ವಿದ್ಯಾ ಜಗದಾಳೆ, ಮೀನಾಕ್ಷಿ ಮಾನೆ, ಪಾರ್ವತಿ ದಾಸರ ಹಾಗೂ ಬಸಗೌಡ ಪಾಟೀಲ, ಧರೆಪ್ಪ ಮುರಚಿಟ್ಟಿ, ಕೃಷ್ಣಾ ಧನವಾಡೆ, ವಿನಾಯಕ ಜಗದಾಳೆ, ಕಿರಣ ಖನದಾಳೆ, ಮಲ್ಲು ಜಗದಾಳೆ, ಬಾಳಾಸಾಹೇಬ ಹವಾಲ್ದಾರ, ಅಪ್ಪಾಸಾಹೇಬ ಹಿಡಕಲ, ಪುಂಡಲಿಕ ಚೌಗಲಾ, ಆನಂದ ಚೌಗಲಾ, ದೀಲಿಪ ಹವಾಲ್ದಾರ, ಪುಂಡಲಿಕ ಹಿಡಕಲ, ಧೂಳಗೌಡ ಚವ್ಹಾಣ, ವಿಜಯ ಹವಾಲ್ದಾರ, ಬಾಳು ದಾಸರ, ರಾಜು ಹವಾಲ್ದಾರ ಸೇರಿ ಅನೇಕರು ಇದ್ದರು.
