ಹುನಗುಂದ; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪಿ.ಬಿ. ಧುತ್ತರಗಿ ಟ್ರಸ್ಟ್ (ಸೂಳೇಭಾವಿ) ಬಾಗಲಕೋಟ ಸಹಯೋಗದಲ್ಲಿ ನ.೪ರಂದು ಸಾಯಂಕಾಲ ೫ಕ್ಕೆ ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ೩ವರುಷಗಳ ಜೀವಮಾನ ವಾರ್ಷಿಕ ಪ್ರಶಸ್ತಿ ಹಾಗೂ ರಂಗಗೌರವ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಸ್ಕೆ ಕೊನೆಸಾಗರ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಕಾರ್‍ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಳೆದ ಎರಡು ವರುಷಗಲ್ಲಿ ಟ್ರಸ್ಟ್‌ದಿಂದ ಮಾಡಿದಂತ ಚಟುವಟಿಕೆಗಳ ಹಾಗೂ ಪ್ರಶಸ್ತಿ ಪುರಸ್ಕೃತರ ಕಿರುಪರಿಚಯದ ಪ್ರತಿಬಿಂಬ ಕೈಪಿಡಿಯನ್ನು ಹಿಂದುಳಿದ ವರ್ಗದ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅನಾವರಣಗೊಳಿಸುವರು. ಹಿರಿಯ ಸಾಹಿತಿ ಡಾ. ನಾಗರಾಜ ನಾಡಗೌಡ ಬರೆದ ಧುತ್ತರಗಿ ಪರಿಚಯ ಪುಸ್ತಿಕೆಯನ್ನು ವಿಧಾನ ಪರಿಷತ್ ಉಪ ಸಭಾಪತಿಗಳಾದ ಶ್ರೀಮತಿ ಡಾ. ಉಮಾಶ್ರೀ ಬಿಡುಗಡೆ ಮಾಡಲಿದ್ದಾರೆ. ಬಾಗಲಕೋಟ ಶಾಸಕ ಉಮೇಶ ಮೇಟಿ, ಸಂಸದ ಪಿ.ಸಿ ಗದ್ದಿಗೌಡರ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಜೀವಮಾನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು; ೨೦೨೨-೨೩ನೇ ಸಾಲಿನ ಹನಮಸಾಗರದ ವಿರುಪಾಕ್ಷಪ್ಪ ಗಾಯದ, ೨೦೨೩-೨೪ನೇ ಸಾಲಿನ ಇಲಕಲ್ಲಿನ ಶ್ರೀಮತಿ ಬೀಬಿಜಾನ್ ಕಂದಗಲ್, ೨೦೨೪-೨೫ನೇ ಸಾಲಿನ ಹುನಗುಂದದ ಅನಂತ ಬಬಲೇಶ್ವರ ಪ್ರಶಸ್ತಿ ಪಡೆಯಲಿದ್ದಾರೆ. ರಂಗಗೌರವ ಪ್ರಶಸ್ತಿ ಪುರಸ್ಕೃತರು; ೨೦೨೨-೨೩ನೇ ಸಾಲಿನ ಇಳಕಲ್ಲದ ಶ್ರೀಮತಿ ಕುಸುಮಾ ಕಂದಗಲ್, ಗಲಗಲಿಯ ಅರುಣ ಕೃಷ್ಣಾಜಿ ಥೋರಲ್, ೨೦೨೩-೨೪ನೇ ಸಾಲಿನ ದೇವರಗುಡ್ಡದ ಭೀಮರಾಯ ಭಂಡಾರಿ, ಗದುಗಿನ ವೀರಭದ್ರಪ್ಪ ಬಡಿಗೇರ, ೨೦೨೪-೨೫ನೇ ಸಾಲಿನ ಬಾಗಲಕೋಟದ ಬಸವರಾಜ ಮಠ, ಹಂಸನೂರಿನ ಶ್ರೀಮತಿ ಬಂಗಾರೆವ್ವ ಚಿಮ್ಮಲ ರಂಗಗೌರವ ಪ್ರಶಸ್ತಿ ಪಡೆಯಲಿದ್ದಾರೆಂದು ಟ್ರಸ್ಟ್ಟ್ ಅಧ್ಯಕ್ಷ ಎಸ್ಕೆ ಕೊನೆಸಾಗರ ಹೇಳಿದರು. ಟ್ರಸ್ಟಿನ ಸದಸ್ಯರಾದ ಚಿದಾನಂದ ಧೂಪದ, ಡಾ. ನಾಗರಾಜ ನಾಡಗೌಡ, ಡಾ. ಸಿತಿಮಾ ವಜ್ಜಲ, ಸುನಂದಾ ಕಂದಗಲ್, ಸಿದ್ದಲಿಂಗಪ್ಪ ಬೀಳಗಿ ಗೋಷ್ಠಿಯಲ್ಲಿದ್ದರು.
೨;ಎಚ್‌ಎನ್‌ಡಿ;೨; ಹುನಗುಂದ ಪಿಬಿ ಧುತ್ತರಗಿ ಟ್ರಸ್ಟ್‌ದಿಂದ ಜೀವಮಾನ ಪ್ರಶಸ್ತಿ ಪ್ರಧಾನ ಸಮಾರಂಭ ಕುರಿತು ಎಸ್ಕೆ ಕೊನೆಸಾಗರ ನಡೆಸಿದ ಸುದ್ದಿಗೋಷ್ಟಿ