ಬಳ್ಳಾರಿ ಜೂನ್ 10 : ಬಳ್ಳಾರಿ ನಗರದ 18ನೇ ವಾರ್ಡಿನ ರಾಘವೇಂದ್ರ ಕಾಲೋನಿ ಎರಡನೇ ಹಂತದ ಮುಖ್ಯ ರಸ್ತೆಗೆ ಮಹಾನಗರ ಪಾಲಿಕೆ ಸದಸ್ಯ ಪ್ರಬಂಜನ್ ಅವರ ತಾತ ದಿವಂಗತ ಮುಂಡ್ಲೂರು ನರಸಿಂಹಪ್ಪ ರಸ್ತೆ ಎಂದು ನಾಮಕರಣ ಮಾಡಲಾಯಿತು.
ರಸ್ತೆಯ ನಾಮ ಫಲಕವನ್ನು ನಗರ ಶಾಸಕ ನಾರಾ ಭರತ್ ರೆಡ್ಡಿ , ಉದ್ಘಾಟಿಸಿ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಮುಂಡ್ಲೂರು ಕುಟುಂಬದ ಸೇವೆ ಅನನ್ಯವಾದದು ಅದೇ ರೀತಿಯಲ್ಲಿ ಮುಂಡ್ಲೂರು ರಾಮಪ್ಪನವರು ಸಹ ಮಂತ್ರಿಯಾಗಿ ಶಾಸಕರಾಗಿ ನಗರಕ್ಕೆ ಸೇವೆ ಸಲ್ಲಿಸಿದ್ದಾರೆ ಅವರ ಸಂಬಂಧಿಕರಾದ ಮುಂಡ್ಲೂರು ನರಸಿಂಹಪ್ಪ ಅವರು ಸಹ ಬಳ್ಳಾರಿ ನಗರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ, ಹಾಗೂ ಅವರ ಮಗ ನಾರಾಯಣರಾವ್ ಅವರು ಸಹ ನಗರಸಭೆಯಲ್ಲಿ ವಸತಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಈಗ ನರಸಿಂಹಪ್ಪನವರ ಮೊಮ್ಮಗ ಪ್ರಬಂಜನ್ ಕುಮಾರ್ ಸಹ ಪಾಲಿಕೆಯ ಸದಸ್ಯರಾಗಿ ನಗರಕ್ಕೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ ಅಂತ ಕುಟುಂಬದ ಹಿರಿಯರ ಹೆಸರನ್ನು ಈ ರಸ್ತೆಗೆ ನಾಮಕರಣ ಮಾಡುತ್ತಿರುವುದು ಸಂತಸದ ವಿಷಯ ಎಂದರು.
ಈ ಸಂದರ್ಭದಲ್ಲಿ ನಾರಾಯಣರಾವ್ ಪಾಲಿಕೆ ಸದಸ್ಯರಾದ ರಾಮಾಂಜನಿ ಆಸಿಫ್ ಅಯಾಜ್ ಅಹಮದ್ ರಾಜೇಶ್ವರಿ ಸುಬ್ಬರಾಯ್ಡು , ಪ್ರಭಂಜನ್ ಕುಮಾರ್ ಮತ್ತು ಅವರ ಸೇರಿದಂತೆ ಹಲವಾರು ಜನ ಕಾಂಗ್ರೆಸ್ ಮುಖಂಡರಿದ್ದರು.
