ಮುದ್ದೇಬಿಹಾಳ,ಜು.೦೭: ಪಟ್ಟಣದ ಹೊರವಲದಲ್ಲಿರುವ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ಸುಮಾರು ರೂ. ೩ ಕೋಟಿ ವೆಚ್ಚದಲ್ಲಿ ಕೆ ಆರ್ ಐ ಡಿ ಎಲ್ ಇಲಾಖೆಯಿಂದ ನಿರ್ಮಾಣವಾಗುತ್ತಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನ( ಟ್ರೀ ಪಾರ್ಕ್) ಕಾಮಗಾರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಪಟ್ಟಣದ ಗಣ್ಯರ ಸಮ್ಮುಖದಲ್ಲಿ ಮಂಗಳವಾರ ಶಾಸಕ ಸಿ ಎಸ್ ನಾಡಗೌಡ(ಅಪ್ಪಾಜಿ) ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ‘ಟ್ರೀ ಪಾರ್ಕ್ ನಿರ್ಮಾಣದಿಂದಾಗಿ ಸ್ಥಳೀಯವಾಗಿ ಹಸಿರು ಆವರಣ ಹೆಚ್ಚಳವಾಗುವುದು. ಜೈವಿಕ ವೈವಿಧ್ಯತೆ ಬೆಳೆದು ಬರುವುದು. ಹಕ್ಕಿಗಳು ಮತ್ತು ಚಿಟ್ಟೆಗಳಿಗೆ ಉತ್ತಮ ವಾಸಸ್ಥಳ ಸಿಗುವುದು ಮತ್ತು ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ. ಪರಿಸರ ಸಂರಕ್ಷಣೆಯ ಜೊತೆಗೆ ಈ ಪ್ರದೇಶದ ಸೌಂದರ್ಯ ಮೌಲ್ಯವೂ ಹೆಚ್ಚಿಳವಾಗುವುದು. ವೀಕ್ಷಕರಿಗಾಗಿ ಬಟರ್‌ಫ್ಲೈ ಗಾರ್ಡನ್, ಕ್ಯಾಕ್ಟಸ್ ತೋಟ, ವಾಟರ್‌ಫ್ರಂಟ್ ಸ್ಟೆಪ್ಸ್, ಪ್ಲೇ ಏರಿಯಾ, ಪರ್ಗೊಲಾ, ಹ್ಯಾಂಗಿಂಗ್ ಬ್ರಿಡ್ಜ್ ಮುಂತಾದ ಸೌಲಭ್ಯಗಳು ನಿರ್ಮಿಸಲಾಗುತ್ತಿದೆ’ ಎಂದು ತಿಳಿಸಿದರು.
ಸಧ್ಯ ಮುದ್ದೇಬಿಹಾಳ ಪಟ್ಟಣ ಹಾಗೂ ತಾಲೂಕಿನ ಜನರಿಗೆ ಒಂದು ಒಳ್ಳೆಯ ಕಾಡು ಜತೆಗೆ ಸುಂದರ ಉದ್ಯಾನವನ ನಿರ್ಮಿಸಬೇಕು ಎಂಬ ಉದ್ದೇಶದಿಂದ ಪಾರ್ಕ್ ಎಂಬುದು ನೈಸರ್ಗಿಕ ಮತ್ತು ನೆಟ್ಟ ಮರಗಳ ಬೆಳವಣಿಗೆ, ಗಿಡಮೂಲಿಕೆಗಳು, ಪೊದೆಗಳು, ಬಳ್ಳಿಗಳು ಇತ್ಯಾದಿಗಳನ್ನು ಹೊಂದಿರುವ ಪ್ರದೇಶವನ್ನಾಗಿ ನಿರ್ಮಾಣ ಮಾಡುವುದು. ಪ್ರದೇಶಗಳಲ್ಲಿ ಅಥವಾ ಅವುಗಳ ಹತ್ತಿರದಲ್ಲಿ ಮರಗಳ ಉದ್ಯಾನವನಗಳನ್ನು ರಚಿಸುವ ಉದ್ದೇಶವು ನಗರವಾಸಿಗಳಿಗೆ ಸುಲಭವಾಗಿ ತಲುಪಬಹುದಾದ ದೂರದಲ್ಲಿ ಪ್ರಕೃತಿಯನ್ನು ಅನುಭವಿಸಲು ಅವಕಾಶವನ್ನು ಒದಗಿಸುವುದು. ಟ್ರೀ ಪಾರ್ಕ್‌ಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ವಾಕಿಂಗ್ ಪಥ, ಪ್ರಕೃತಿ ಹಾದಿಗಳು, ಕುಡಿಯುವ ನೀರಿನ ಸೌಲಭ್ಯಗಳು, ಮಕ್ಕಳ ಆಟದ ಪ್ರದೇಶ, ಶೌಚಾಲಯಗಳು ಮುಂತಾದ ಮೂಲಭೂತ ಸಾರ್ವಜನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಟ್ರೀ ಪಾರ್ಕ್ ಯೋಜನೆಯು ನಗರವಾಸಿಗಳಿಗೆ ನೈಸರ್ಗಿಕ ಪರಿಸರವನ್ನು ಒದಗಿಸಲು ಮತ್ತು ಅವರಲ್ಲಿ ಪ್ರಕೃತಿಯ ಬಗ್ಗೆ ಮೆಚ್ಚುಗೆಯನ್ನು ಹೆಚ್ಚಿಸಲು ಗುರಿಯನ್ನು ಹೊಂದಿದೆ. ಪಟ್ಟಣಗಳ ಬಳಿ ಟ್ರೀ ಪಾರ್ಕ್‌ಗಳನ್ನು ಸ್ಥಾಪಿಸಲಾಗುತ್ತಿದೆ, ಇದರಿಂದಾಗಿ ನಗರವಾಸಿಗಳು ಪ್ರಕೃತಿಯನ್ನು ಅನುಭವಿಸಬಹುದು ಮತ್ತು ವಾಕಿಂಗ್, ಜಾಗಿಂಗ್, ಸೈಕ್ಲಿಂಗ್, ಯೋಗ, ಧ್ಯಾನ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು, ಇದು ಅವರ ಆರೋಗ್ಯ ಮತ್ತು ಸಾಮಾನ್ಯ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಟ್ರೀ ಪಾರ್ಕ್‌ಗಳಲ್ಲಿ ಮಕ್ಕಳ ಆಟದ ಪ್ರದೇಶಗಳನ್ನು ಅವರ ಆನಂದ ಮತ್ತು ದೈಹಿಕ ಚಟುವಟಿಕೆಗಳಿಗಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ಮುರುಡೇಶ್ವರ ಹಾಗೂ ವಿಜಯಪುರ ಸೇರಿದಂತೆ ಅನೇಕಗಳಲ್ಲಿರುವ ಬ್ರಹದಾಕಾರದ ಶಿವನ ಮೂರ್ತಿ ನಿರ್ಮಿಸವುದು ಜತೆಗೆ ಜಂಗಲ್ ಲಾಡ್ಜ್ ಸೇರಿದಂತೆರ ವಿವಿಧ ಪ್ರಾಣಿಗಳನ್ನು ಹಾಗೂ ಪಕ್ಷೀಗಳನ್ನು ಇಲ್ಲಿಗೆ ಕರೆತಂದು ಪ್ರಾಣಿ ಸಂಗ್ರಾಲಯ, ಪಕ್ಷಧಾಮ, ವಿವಿಧ ಬಗೆ ಬಗೆಯ ಹೂವು ಹಣ್ಣುಗಳ, ಜತೆಗೆ ಸೌಂಧರ್ಯ ಗಿಡಗಳನ್ನು ಮತ್ತು ಆಯುರ್ವೇದವೂ ಸೇರಿದಂತೆ ಅನೇಕ ಗಿಡಗಳನ್ನು ನೆಡಲಾಗುವುದು. ಹಾಗೂ ಕೃಷ್ಣಾ ನದಿಯ ನೀರನ್ನು ಹರಿಸಿ ಕೆರೆ ನಿರ್ಮಿಸಿ ಬೋಟಿಂಗ್ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರವಾಸಿಗರನ್ನು ಆಕರ್ಷೀಸುವಂತೆ ಮಾಡಲಾಗುವುದು.
ಕಳೇದ ಸಪ್ಟೇಂಬರ ೧ ರಂದು ಅರಣ್ಯ ಸಚಿವ ಈಶ್ವರ ಖಂಡ್ರೇಯವರು ಹಾಗೂ ಕಾನೂನು ಸಂಸದಿಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲರು ಈ ಟ್ರೀ ಪಾರ್ಕಗೆ ೩ ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸುವ ಮೂಲಕ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಇನ್ನುಷ್ಟು ಅನುದಾನದ ಅವಶ್ಯಕತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು ಈ ಹಿನ್ನೇಲೆ ಸಧ್ಯ ಶಾಸಕರ ನಿಧಿಯಿಂದ ೨೫ ಲಕ್ಷರೂಗಳನ್ನು ನೀಡಲಾಗುವುದು ಜತೆಗೆ ನಮ್ಮ ಸರಕಾರದ ಸಂಪೂರ್ಣ ರಚನೆಗೊಂಡ ನಂತರ ಮುಂಬರುಬ ದಿನಗಳಲ್ಲಿ ಹೆಚ್ಚಿನ ಅನುದಾನ ತುರುವ ಮೂಲಕ ಈ ಟ್ರೀ ಪಾರ್ಕವನ್ನು ಅಭಿವೃದ್ಧಿ ಪಡಿಸುವ ಮೂಲಕ ಅತ್ಯುತ್ತಮವಾದ ಹೈಟೇಕ್ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದರು.
ಗಣ್ಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೋಂದಿಗೆ ನಿರ್ಮಾಣವಾಗುತ್ತಿರುವ ಟ್ರೀ ಪಾರ್ಕ್‌ನೊಳಗೆ ಕಾಲ್ನಡಿಗೆ ಮೂಲಕ ತೆರಳಿ ಕೆಲ ಗಂಟೆಗಳ ಸಂಚಾರ ನಡೆಸಿ ಪಾರ್ಕನ ಎಲ್ಲ ರಸ್ತೆಗಳಲ್ಲಿ ಅಕ್ಕಪಕ್ಕದಲ್ಲಿ ನೆಟ್ಟಿರುವ ಗಿಡಗಳನ್ನು ಮುಟ್ಟಿ ಪರೀಕ್ಷೀಸಿದರಲ್ಲದೇ ಕಾಮಗಾರಿ ನಡೆಸಿದ ಮತ್ತು ಅರಣ್ಯಿಕರಣದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳ ಪ್ರಾಮಾಣಿಕ ಕರ್ತವ್ಯವನ್ನು ಶ್ಲಾಘಿಸಿದರು. ಚಹಾ ಬಿಸ್ಕೇಟ್ ಸವಿದರು.
ಈ ವೇಳೆ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿ ಬಸನಗೌಡ ಬಿರಾದಾರ, ಗಣ್ಯ ಉದ್ಯಮಿ ಶರಣು ಸಜ್ಜನ, ವೆಂಕನಗೌಡ ಪಾಟೀಲ, ಡಾ, ವಿರೇಶ ಪಾಟೀಲ, ಸಂಗನಗೌಡ ಬಿರಾದಾರ(ಜಿಟಿಸಿ) ಬಾಪುಗೌಡ ಪಿರಾಪೂರ, ಸಂಗಮೇಶ ನಾವದಗಿ, ಮುರಳಿಕೃಷ್ಣ ಬುಡ್ಡೋಡಗಿ, ಸುರೇಶ ನಾಡಗೌಡ, ಮೈಬೂಬ ಗೊಳಸಂಗಿ, ಮಹಾಬಳೇಶ ಗಡೇದ, ವಿರುಪಾಕ್ಷೀ ಪತ್ತಾರ, ಬಿ ಎಸ್ ಮೇಟಿ, ನಿಂಗಣ್ಣ ಚೇಟ್ಟೇರ, ಗೋಪಿ ಮಡಿವಾಳರ, ಸುರೇಶ ಕಲಾಲ, ರವಿ ಗೂಳಿ, ಅಮರೇಶ ಗೂಳಿ, ಅರಣ್ಯಾಇಲಾಖೆ ಅಧಿಕಾರಿಗಳಾದ ಗಿರೀಶ ಹಲಕುಡೆ, ಯಲಾರಗುರಪ್ಪ ಗುಬ್ಬಿ, ವಿನಾಯಕ ಬೊಂಬಾಳೆ, ಸೇರಿದಂತೆ ಅನೇಕ ಗಣ್ಯರು ಸಿಬ್ಬಂದಿಗಳು ಇದ್ದರು.
