LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Hubballi

·      ಉತ್ತರ ಕರ್ನಾಟಕದ ಗ್ರಾಹಕರ ಜೊತೆಗಿನ ತನ್ನ ಒಡನಾಟವನ್ನು ಮತ್ತಷ್ಟು ಗಟ್ಟಿಗೊಳಿಸಲು ಬದ್ಧತೆ ತೋರಿದ ಎಂ.ಟಿ.ಆರ್. 

   ಉತ್ತರ ಕರ್ನಾಟಕದ ಶ್ರೀಮಂತ ಆಹಾರ ಪರಂಪರೆಯಿಂದ ಪ್ರೇರಣೆ ಪಡೆದು ಶೇಂಗಾ ಚಟ್ನಿ ಪುಡಿ, ಗುರೆಳ್ಳು ಚಟ್ನಿ ಪುಡಿ, ಅಗಸಿ ಚಟ್ನಿ ಪುಡಿ ಮತ್ತು ಮಸಾಲಾ ಖಾರ ಪರಿಚಯ

·   

ಹುಬ್ಬಳ್ಳಿ, ಆಗಸ್ಟ್ 17, 2026: ನೂರು ವರ್ಷಕ್ಕೂ ಹೆಚ್ಚು ಸಮಯದಿಂದ ದೇಶದ ಅತ್ಯಂತ ವಿಶ್ವಾಸಾರ್ಹ ಹಾಗೂ ಜನಪ್ರಿಯ ಆಹಾರ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಎಂ.ಟಿ.ಆರ್. ಇದೀಗ ಉತ್ತರ ಕರ್ನಾಟಕದ ಗ್ರಾಹಕರಿಗಾಗಿ ಹೊಸ ಉತ್ಪನ್ನಗಳಾದ ಶೇಂಗಾ ಚಟ್ನಿ ಪುಡಿ, ಗುರೆಳ್ಳು ಚಟ್ನಿ ಪುಡಿ, ಅಗಸಿ ಚಟ್ನಿ ಪುಡಿ ಮತ್ತು ಮಸಾಲಾ ಖಾರ  ಬಿಡುಗಡೆ ಮಾಡಿದೆ.

ಸೋಮವಾರ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. Aಟಿಆರ್ ಸೇಲ್ಸ್ ಮುಖ್ಯಸ್ಥ ಆರ್. ಮೂರ್ತಿ ಮಾತನಾಡಿಈ ಹೊಸ ಉತ್ಪನ್ನಗಳು ಸಾಮಾನ್ಯ ಮಳಿಗೆಗಳುಆಧುನಿಕ ಮಳಿಗೆಗಳುಎಂಟಿಆರ್ ಮಳಿಗೆಗಳು ಮತ್ತು ಪ್ರಮುಖ ಆನಲೈನ್ ಮಾರಾಟ ವೇದಿಕೆಗಳಲ್ಲಿ ದೊರೆಯಲಿವೆ.

೧೦೦ ಗ್ರಾಂ ಶೇಂಗಾ ಚಟ್ನಿ ಪುಡಿ ದರ ೪೯ ರೂ.ಗುರೆಳ್ಳು ಚಟ್ನಿ ಪುಡಿ ದರ ೫೫ ರೂ.ಅಗಸಿ ಚಟ್ನಿ ಪುಡಿ ದರ ೪೯ ರೂ.ಮಸಾಲಾ ಖಾರ ದರ ೬೫ ರೂ. ನಿಗದಿಪಡಿಸಲಾಗಿದೆ. ಸ್ಥಳೀಯ ಮಟ್ಟದ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಲಾಗಿದ್ದುಡಿಜಿಟಲ್ ಮಾಹಿತಿಮಳಿಗೆಗಳಲ್ಲಿ ಪ್ರಚಾರವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದ ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ವಿಶೇಷವಾಗಿ ಸಿದ್ಧಪಡಿಸಿರುವ ಈ ಉತ್ಪನ್ನಗಳು, ಈ ಭಾಗದ ಜನಪ್ರಿಯ ಸಾಂಪ್ರದಾಯಿಕ ರುಚಿಗಳನ್ನು ಉತ್ತಮ ಗುಣಮಟ್ಟದ ಪ್ಯಾಕೇಜ್ ರೂಪದಲ್ಲಿ ಗ್ರಾಹಕರಿಗೆ ತಲುಪಿಸಲಿವೆ.

ಉತ್ತರ ಕರ್ನಾಟಕದ ಬಹುತೇಕ ಮನೆಗಳಲ್ಲಿ ಪ್ರತಿದಿನ ಬಳಕೆಯಾಗುವ ಶೇಂಗಾ, ಗುರೆಳ್ಳು, ಅಗಸಿ ಚಟ್ನಿ ಪುಡಿ ಮತ್ತು ಮಸಾಲಾ ಖಾರ ಇಲ್ಲಿನ ವಿಶಿಷ್ಟ ಆಹಾರ ಸಂಸ್ಕೃತಿಯ ಪ್ರಮುಖ ಭಾಗಗಳಾಗಿವೆ. ಈ ಚಟ್ನಿ ಪುಡಿಗಳನ್ನು ಸಾಮಾನ್ಯವಾಗಿ ಜೋಳದ ರೊಟ್ಟಿ ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಹಾರಗಳ ಜೊತೆಗೆ ಸೇವಿಸಲಾಗುತ್ತದೆ.  10 ಮನೆಗಳ ಪೈಕಿ 8 ಮನೆಗಳಲ್ಲಿ ಇವುಗಳು ವ್ಯಾಪಕವಾಗಿ ಬಳಕೆಯಾಗುತ್ತಿದ್ದು, ಹಲವು ತಲೆಮಾರುಗಳಿಂದ ಜನರ ದೈನಂದಿನ ಊಟದ ಅವಿಭಾಜ್ಯ ಭಾಗವಾಗಿ ಉಳಿದುಕೊಂಡು ಬಂದಿವೆ.

ಸ್ಥಳೀಯ ಆಹಾರ ಪದ್ಧತಿಗಳಿಂದ ಪ್ರೇರಣೆ ಪಡೆದಿರುವ ಎಂ.ಟಿ.ಆರ್., ʼಉತ್ತರ ಕರ್ನಾಟಕದ ಅಡುಗೆ ಮನೆಗಳಿಂದ ಪ್ರೇರಣೆʼ ಎಂಬ ಆಶಯದೊಂದಿಗೆ ಈ ಹೊಸ ಉತ್ಪನ್ನಗಳನ್ನು ಪರಿಚಯಿಸಿದೆ. ಈ ಮೂಲಕ ಉತ್ತರ ಕರ್ನಾಟಕದ ಅಸಲಿ ರುಚಿಯನ್ನು ಉಳಿಸಿಕೊಂಡು, ಗ್ರಾಹಕರಿಗೆ ವಿಶ್ವಾಸಾರ್ಹ ಗುಣಮಟ್ಟದ ಉತ್ಪನ್ನಗಳನ್ನು ನೀಡಲು ಮುಂದಾಗಿದೆ.

ಶತಮಾನಕ್ಕೂ ಹೆಚ್ಚು ಸಮಯದಿಂದ ಕರ್ನಾಟಕದ ಅಪ್ಪಟ ಸಾಂಪ್ರದಾಯಿಕ ರುಚಿಗಳನ್ನು ಗ್ರಾಹಕರಿಗೆ ತಲುಪಿಸುವ ಮೂಲಕ ಬಳಕೆದಾರರ ಮನದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಎಂ.ಟಿ.ಆರ್. ತನ್ನದೇ ವಿಶೇ಼ಷ ಸ್ಥಾನ  ಗಳಿಸಿದೆ. ರಾಜ್ಯದ ವಿವಿಧ ಭಾಗಗಳ ಆಹಾರ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ರುಚಿಗಳನ್ನು ವೈವಿಧ್ಯಮಯ ಉತ್ಪನ್ನಗಳ ಮೂಲಕ ಪರಿಚಯಿಸುತ್ತಾ ಬಂದಿದೆ.

ಉತ್ತರ ಕರ್ನಾಟಕದ ಆಹಾರ ಪರಂಪರೆ ಜೊತೆಗಿನ ತನ್ನ ಬದ್ಧತೆಯನ್ನು ಮತ್ತಷ್ಟು ಬಲಪಡಿಸುವ ಭಾಗವಾಗಿ ಈ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಎಂ.ಟಿ.ಆರ್. ಬ್ಯಾಡಗಿ ಮೆಣಸಿನಕಾಯಿ ಮತ್ತು ಎಂ.ಟಿ.ಆರ್. ಧಾರವಾಡ ಪೇಡಾ ಪರಿಚಯಿಸಿತ್ತು. ಇದೀಗ ಚಟ್ನಿ ಪುಡಿ ಮತ್ತು ಮಸಾಲಾ ಖಾರದ ಸೇರ್ಪಡೆಯಿಂದ ಉತ್ತರ ಕರ್ನಾಟಕದ ವಿಶಿಷ್ಟ ರುಚಿ, ಪದಾರ್ಥಗಳು ಮತ್ತು ಆಹಾರ ಪರಂಪರೆಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ  ಪ್ರಯತ್ನ ಮಾಡಲಾಗಿದೆ.

ಈ ಹೊಸ ಉತ್ಪನ್ನಗಳ ಕುರಿತು ಎಂ.ಟಿ.ಆರ್. ಫುಡ್ಸ್‌ನ ಮುಖ್ಯ ಮಾರುಕಟ್ಟೆ ಮತ್ತು ಬೆಳವಣಿಗೆ ಅಧಿಕಾರಿ ಅನುಪಮ್ ನಾಯರ್ ಮಾತನಾಡಿ, “ಎಂ.ಟಿ.ಆರ್.ನಲ್ಲಿ ಹೊಸತನವು ಗ್ರಾಹಕರ ಅಗತ್ಯಗಳಿಂದಲೇ ಆರಂಭವಾಗುತ್ತದೆ. ಉತ್ತರ ಕರ್ನಾಟಕದ ಆಹಾರ ಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ಮಾಡಿದಾಗ, ಇಲ್ಲಿನ ಜನರಿಗೆ ಚಟ್ನಿ ಪುಡಿಗಳ ಜೊತೆಗೆ  ಇರುವ ಅವಿನಾಭಾವ ಸಂಬಂಧ ಮತ್ತು ದೈನಂದಿನ ಊಟದಲ್ಲಿ ಅವುಗಳ ಮಹತ್ವವನ್ನು ನಾವು ಮನವರಿಕೆ ಮಾಡಿಕೊಂಡಿದ್ದೇವೆ.  ಈ ಚಟ್ನಿಗಳ ಮೂಲ ರುಚಿ, ಗುಣಮಟ್ಟ ಕಾಯ್ದುಕೊಳ್ಳಲು ಸ್ಥಳೀಯ ಗೃಹಿಣಿಯರ ಜೊತೆಗೆ ನಿಕಟವಾಗಿ ಕೆಲಸ ಮಾಡಿ ಅವರಿಂದ ಅಮೂಲ್ಯ ಸಲಹೆಗಳನ್ನು ಪಡೆದು ಅಳವಡಿಸಿಕೊಂಡಿದ್ದೇವೆ. ಗ್ರಾಹಕರ ಜೊತೆಗೆ ಹಲವು ಬಾರಿ ಉತ್ಪನ್ನಗಳನ್ನು ಪರೀಕ್ಷಿಸಿ, ಸ್ಥಳೀಯ ರುಚಿ ಮತ್ತು ಪದಾರ್ಥಗಳಿಗೆ ಸೂಕ್ತವಾಗುವಂತೆ ಅವುಗಳನ್ನು ರೂಪಿಸಿದ್ದೇವೆ. ಇಂತಹ ಪ್ರಯತ್ನಗಳ ಫಲವಾಗಿ, ಉತ್ತರ ಕರ್ನಾಟಕದ ಜನರಿಗೆ ಚಿರಪರಿಚಿತವಾಗಿರುವ ಮತ್ತು ಇಷ್ಟವಾಗುವ ರುಚಿಯನ್ನೇ ನೀಡುವ ಉತ್ಪನ್ನಗಳನ್ನು ಸಿದ್ಧಪಡಿಸಿದ್ದೇವೆ. ಅದೇ ವೇಳೆ, ಚಟ್ನಿ ಪುಡಿಗಳ ಅಸಲಿ ರುಚಿ  ಉಳಿಸುವ ನಮ್ಮ ಬದ್ಧತೆಯನ್ನೂ ಮುಂದುವರಿಸಿದ್ದೇವೆ” ಎಂದು ಹೇಳಿದ್ದಾರೆ.

ಈ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕುರಿತು    ಎಂ.ಟಿ.ಆರ್. ಫುಡ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನಯ್‌ ಭಾಸಿನ್ ಮಾತನಾಡಿ, ʼಕರ್ನಾಟಕದ ವಿವಿಧ ಪ್ರದೇಶಗಳ ಆಹಾರ ಪರಂಪರೆಯನ್ನು ಸಂಭ್ರಮಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಾವು ನಮ್ಮನ್ನು ಕೇವಲ ಆಹಾರ ಉತ್ಪನ್ನಗಳ ಬ್ರ್ಯಾಂಡ್ ಎಂದು ಮಾತ್ರ ಪರಿಗಣಿಸುತ್ತಿಲ್ಲ. ಕರ್ನಾಟಕದ ಆಹಾರ ಪರಂಪರೆಯ ಸಂರಕ್ಷಕರಾಗಿಯೂ ನಮ್ಮನ್ನು ನೋಡುತ್ತೇವೆ. ಈ ಸಾಂಪ್ರದಾಯಿಕ ರುಚಿಗಳನ್ನು ಉಳಿಸುವುದರ ಜೊತೆಗೆ, ಗ್ರಾಹಕರು ನಮ್ಮಿಂದ ನಿರೀಕ್ಷಿಸುವ ಗುಣಮಟ್ಟ, ಸ್ವಚ್ಛತೆ ಮತ್ತು ಸ್ಥಿರತೆಯನ್ನು ನೀಡಲು ನಾವು ಬದ್ಧರಾಗಿದ್ದೇವೆ” ಎಂದೂ ಅವರು ಹೇಳಿದ್ದಾರೆ.

ಈ ಹೊಸ ಉತ್ಪನ್ನಗಳು ಸಾಮಾನ್ಯ ಮಳಿಗೆಗಳು, ಆಧುನಿಕ ಮಳಿಗೆಗಳು, ʼನಮ್ಮ ಎಂ.ಟಿ.ಆರ್ʼ ಮಳಿಗೆಗಳು ಮತ್ತು ಪ್ರಮುಖ ಆನ್‌ಲೈನ್ ಮಾರಾಟ ವೇದಿಕೆಗಳಲ್ಲಿ ದೊರೆಯಲಿವೆ.

ಈ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ  ಮೂಲಕ ಉತ್ತರ ಕರ್ನಾಟಕದ ಗ್ರಾಹಕರ ಜೊತೆಗಿನ  ತನ್ನ ಒಡನಾಟವನ್ನು ಮತ್ತಷ್ಟು ಗಟ್ಟಿಗೊಳಿಸಲು ಎಂ.ಟಿ.ಆರ್. ಮುಂದಾಗಿದೆ. ಸ್ಥಳೀಯ ಮಟ್ಟದ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಡಿಜಿಟಲ್ ಮಾಹಿತಿ, ಮಳಿಗೆಗಳಲ್ಲಿನ ಪ್ರಚಾರ, ಹೊರಾಂಗಣ ಪ್ರಚಾರ, ಪ್ರಭಾವಿ ವ್ಯಕ್ತಿಗಳ ಮೂಲಕ ಪ್ರಚಾರ ಹಾಗೂ ನೇರ ಗ್ರಾಹಕ ಸಂಪರ್ಕ ಕಾರ್ಯಕ್ರಮಗಳನ್ನು ಬಳಸಿಕೊಳ್ಳಲಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್