ಯರಗಟ್ಟಿ: ಪಟ್ಟಣದ ಬಸವೇಶ್ವರ ಪ್ರೌಢಶಾಲಾ ಎನ್.ಸಿ.ಸಿ ವಿದ್ಯಾರ್ಥಿಗಳು ಮಹಾತ್ಮ ಗಾಂಧಿ ಜಯಂತಿ ನಿಮಿತ್ಯ ಶುಕ್ರವಾರ ಸ್ವಚ್ಛ ಕಾರ್ಯದ ಮೂಲಕ ಆಚರಿಸಲಾಯಿತು. ಎಸ್.ಸಿ.ಸಿ ಟ್ರೂಪ್ ಕಮಾಂಡರ್ ಕುಮಾರ ದಾಸರ ಮಾತನಾಡಿದ ಅವರು ಗಾಂಧೀಜಿ ಅವರ ಸ್ವಚ್ಛತೆ ಹಾಗೂ ಸ್ವಚ್ಛ ಸಮಾಜದ ಪರಿಕಲ್ಪನೆ ವಿದ್ಯಾರ್ಥಿಗಳಲ್ಲಿ ಬೆಳೆಸುವ ಉದ್ದೇಶದಿಂದ ಈ ವಿವಿಧ ಸ್ಥಳಗಳಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳು ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಉಪಠಾಣೆ, ಸಂಗೋಳ್ಳಿ ರಾಯಣ್ಣ ವೃತ್ತ, ಮಹಾತ್ಮ ಗಾಂಧೀಜಿ ವೃತ್ತ ಹಾಗೂ ಸುತ್ತಮುತ್ತಲಿನ ದೇವಸ್ಥಾನ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಈ ವೇಳೆ ಮುಖ್ಯ ಶಿಕ್ಷಕ ಬಿ ಎಸ್ ಆಲದಕಟ್ಟಿ, ಎನ್. ಎಸ್. ಕಾಂಬಳೆ, ವ್ಹಿ. ಆರ್. ಅಂತಾಪೂರ, ಡಾ. ರಾಜಶೇಖರ ಯರಝರ್ವಿ, ನಸಿಂಗ್ ಆಫೀಸರ ಸುನೀಲ ಕಾಶಣ್ಣವರ ಸೇರಿದಂತೆ ಎನ್.ಸಿ.ಸಿ. ವಿದ್ಯಾರ್ಥಿಗಳು ಇದ್ದರು.