LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಬ್ರಿಟಿಷರಿಗೆ ತಕ್ಕ ಪ್ರತ್ಯುತ್ತರ ನೀಡಿದ ಕಿತ್ತೂರು ರಾಣಿ ಚೆನ್ನಮ್ಮ-ಹಿಪ್ಪರಗಿ

ತಾಲೂಕಾಡಳಿತ ನೇತೃತ್ವದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ



ತಾಳಿಕೋಟೆ,  ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿ, ನಾಡಿನ ಸ್ವಾತಂತ್ರ್ಯ ಮತ್ತು ಸ್ವಾಭಿಮಾನಕ್ಕಾಗಿ ಶ್ರಮಿಸಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮನವರಾಗಿದ್ದಾರೆಂದು ಬಾಲಭಾರತಿ ವಿದ್ಯಾಮಂದಿರದ ನಿವೃತ್ತ ಪ್ರಾಚಾರ್ಯ ಮಲ್ಲಿಕಾರ್ಜುನ ಹಿಪ್ಪರಗಿ ಹೇಳಿದರು.
       ಶುಕ್ರವಾರ ಸ್ಥಳೀಯ ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ೧೭೭೮ರ ಅಕ್ಟೋಬರ್ ೨೩ರಂದು ಕಾಕತಿ ಗ್ರಾಮದಲ್ಲಿ ಪದ್ಮಾವತಿ ಮತ್ತು ಧೂಳಪ್ಪಗೌಡ ದಂಪತಿಯ ಪುತ್ರಿಯಾಗಿ ಜನಿಸಿದ ಚೆನ್ನಮ್ಮ ಅವರು ಬಾಲ್ಯದಿಂದಲೇ ಧೈರ್ಯ, ಸಾಹಸ ಮತ್ತು ಶೌರ್ಯ ಗುಣಗಳನ್ನು ಹೊಂದಿದ್ದರು. ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ವಿವಾಹವಾದ ಅವರು, ಪತಿ ಹಾಗೂ ಪುತ್ರನ ಅಕಾಲಿಕ ಮರಣದ ನಂತರವೂ ಎದೆಗುಂದಲಿಲ್ಲ. ತಮ್ಮ ದತ್ತುಪುತ್ರನನ್ನು ಉತ್ತರಾಧಿಕಾರಿಯಾಗಿ ಸ್ವೀಕರಿಸಿದ ನಿರ್ಧಾರವನ್ನು ಬ್ರಿಟಿಷರು ವಿರೋಧಿಸಿದಾಗ, ಅವರ ವಿರುದ್ಧ ದಿಟ್ಟತನದಿಂದ ಹೋರಾಡಿದರು ಎಂದು ತಿಳಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಿತ್ತೂರು ಉತ್ಸವ ನಿಮಿತ್ತ ವೈಭವದ 'ಪಾರಂಪರಿಕ ನಡಿಗೆ'. ಸಂಸ್ಕೃತಿ, ಇತಿಹಾಸದ ರಕ್ಷಣೆ ಎಲ್ಲರ ಹೊಣೆ: ಸಾಹಿತಿ ಮಂಜುನಾಥ ಕಳಸಣ್ಣವರಹಿಂದೂ ಸಮಾಜದ ಸಂಘಟನೆಯೇ ದೇಶದ ಶಕ್ತಿಗೆ ಆಧಾರ: ನರೇಂದ್ರಜೀಕಬ್ಬಡಿ ಪುರುಷರ ಪಂದ್ಯಾವಳಿ ಸವದತ್ತಿ  ತಂಡಕ್ಕೆ ಜಯ.ವೀರರಾಣಿ ಚೆನ್ನಮ್ಮಳ ಧೈರ್ಯ, ಸಾಹಸ, ದೇಶಪ್ರೇಮ ಯುವಜನರಿಗೆ ಪ್ರೇರಣೆ: ತಹಸೀಲ್ದಾರ್ ಸಿದರಾಯ ಬೋಸಗಿ ಅಭಿಮತಬಸವರಾಜ ಶಿವಲಿಂಗಪ್ಪ ಯಾದವಾಡ ನಿಧನಜನರಲ್ಲಿ ದೇಶಾಭಿಮಾನ ಬೆಳಿಸಿದ ವೀರ ರಾಣಿ ಚೆನ್ನಮ್ಮ - ನಿರಾಣಿ    ಕಿತ್ತೂರು ಚನ್ನಮ್ಮಾಜಿ ಆದರ್ಶ, ಹೋರಾಟ ಜೀವನದಲ್ಲಿ ಬಳಸಿಕೊಳ್ಳಿ : ಬಾಬಾಸಾಹೇಬ ಪಾಟೀಲ.  ಸಿಕಂದರ ಬಾದಹ ಅರಬ ನಿಧನರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ: ಲಚ್ಯಾಣ ಸರಕಾರಿ ಶಾಲೆಯ ಬಾಲಕಿಯರಿಗೆ ತೃತೀಯ ಸ್ಥಾನಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಮಸ್ಯೆ ಪರಿಹರಿಸಿಕೊಳ್ಳಿ: ಕಾಗವಾಡ ತಹಶೀಲ್ದಾರ ರವೀಂದ್ರ ಹಾದಿಮನಿ ಕರೆ