LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಕಿತ್ತೂರು ಚನ್ನಮ್ಮಾಜಿ ಆದರ್ಶ, ಹೋರಾಟ ಜೀವನದಲ್ಲಿ ಬಳಸಿಕೊಳ್ಳಿ : ಬಾಬಾಸಾಹೇಬ ಪಾಟೀಲ. 

ಚನ್ನಮ್ಮ ಕಿತ್ತೂರು: ಕಿತ್ತೂರು ಸಂಸ್ಥಾನದ ಇತಿಹಾಸ ಹಾಗೂ ರಾಣಿ ಚೆನ್ನಮ್ಮನ ಹೋರಾಟವನ್ನು ಪರಿಚಯಿಸುವ ಉದ್ದೇಶದಿಂದ ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಮಹಿಳೆಯರಿಗೆ ಎಲ್ಲ ರೀತಿಯ ಸೌಲಭ್ಯಗಳು ದೊರೆಯಬೇಕು. ಅವರು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬಂದು ಸಾಧನೆ ಮಾಡಬೇಕು ಎಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಕರೆ ನೀಡಿದರು.
ಶನಿವಾರ ಕಿತ್ತೂರು ಉತ್ಸವದ ಪ್ರಯುಕ್ತ ರಾಣಿ ಚನ್ನಮ್ಮ ಸ್ಮಾರಕ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ರಾಜ್ಯ ಮಟ್ಟದ ಮಹಿಳಾ ವಿಚಾರ ಸಂಕಿರಣ, ಚನ್ನಮ್ಮಾಜಿ ಜೀವನ ಚರಿತ್ರೆ, ಹೋರಾಟ ಕುರಿತು ವಿಚಾರ ಸಂಕಿರಣ  ಸಸಿಗೆ ನೀರು ಉನಿಸುವ ಮೂಲಕ  ಉದ್ಘಾಟಿಸಿ ಮಾತನಾಡಿದ ಅವರು, ರಾಣಿ ಚೆನ್ನಮ್ಮನ ಧೈರ್ಯ, ಸಾಹಸ ಮತ್ತು ಹೋರಾಟದ ಇತಿಹಾಸವನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ ಎಂದರು.
      ಇದೇ ವೇಳೆ ಸಾಹಿತಿ ಕತಿತಾ ಕುಸುಗಲ್ ಕಿತ್ತೂರು ರಾಣಿ ಚೆನ್ಮಮ್ಮ ವಿಶ್ವವಿಧ್ಯಾಲಯದ ಪ್ರಾಧ್ಯಾಪಕ ಅವರು ಮಾತನಾಡಿ, ರಾಣಿ ಚೆನ್ನಮ್ಮನ ಹೋರಾಟ ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಿದೆ. ಅಕ್ಕಪಕ್ಕದ ಸಂಸ್ಥಾನಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಚೆನ್ನಮ್ಮ, ಧೈರ್ಯ ಮತ್ತು ಶೌರ್ಯದಿಂದ ಇತಿಹಾಸದಲ್ಲಿ ಅಚ್ಚಳಿಯದ ಹೆಸರು ಗಳಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ  ಪುರಕೃತ ಕೆ. ಶರೀಫಾ ಅವರು ಮಾತನಾಡಿ, ಪುರಾತನ ಕಾಲದಿಂದಲ್ಲೂ ಮಹಿಳೆಯರ ಮೇಲೆ ದೌಜನ್ಯ  ಅಸಹಕಾರ, ಅಧಿಕಾರ ಹಂಚಿಕೆ ವಿರೋಧಿ ಮಹಿಳಾ ವಿರೋಧಿ ನೀತಿಯನ್ನು ಪುರುಷ ಸಮಾಜ, ನಿರಂತವಾಗಿ ದೌಜನ್ಯ ನಡೆಸಿಕೊಂಡು ಬಂದಿದು ಪ್ರಸ್ತಕವಾಗಿ ಈ ವೇಧೀಕೆಯ ಮೇಲೆ ಇಷ್ಟೊಂದು ಜನ  ಮಹಿಳೆ ಸಾಹಿತಿಗಳು ಬರಹಗಾರರು, ತಾಯಿ ಚೆನ್ನಮ್ಮಜೀ ಜೀವನ ಕುರಿತ ವಿಚಾರ ಸಂಕಿರಣದಲ್ಲಿ ತಮ್ಮ ಅಭಿಪ್ರಾಯ ಹೇಳುತ್ತಿರುವದು  ಸಂತೋಷ ಎಂದರು.
ಇದೇ ವೇಳೆ ಮತ್ತೋರ್ವ ಸಾಹಿತಿ ಅವರು ಮಾತನಾಡಿ ಗುರುದೇವಿ ಹುಲ್ಲೇಪ್ಪಮಠ ಅವರು ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಅವರು ಆದರ್ಶಗಳನ್ನು ಇಂದಿನ ಕಾಲದ ಪ್ರತಿಯೊಬ್ಬ ಮಹಿಳೆಯರು ವೀರ ಮಹಿಳೆ ಚೆನ್ನಮ್ಮ ಅವರು ಮಾರ್ಗದರ್ಶನದಲ್ಲಿ ನಡೆದುಕೊಳ್ಳುಬೇಕೆಂದೆದು ಕರೆ ಕೊಟ್ಟರು. 
ಈ ವೇಳೆ ಡಾ. ಸರಸ್ವತಿ ಬಗವತಿ, ಡಾ. ಮೈತ್ರಾದೇವಿ ಗದಿಗೇಪ್ಪಗೌಡ್ರ, ಶೀಲ್ಪಾ ಎಸ್, ಜಾನಕಿದೇವಿ ಭಧ್ರನ್ನವರ್, ವೀಣಾ ಬಿರಾಧಾರ ಕೆಪಿಸಿಸಿ ಸದಸ್ಯ ರೋಹಿಸಿ ಪಾಟೀಲ ರಾಜ್ಯದ ಅನೇಕ ಹಿರಿಯ ಮಹಿಳಾ ಸಾಹಿತಿಗಳು, ಕವಿಯತ್ರಿಯರು ಸೇರಿದಂತೆ ಹಲವರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಿತ್ತೂರು ಉತ್ಸವ ನಿಮಿತ್ತ ವೈಭವದ 'ಪಾರಂಪರಿಕ ನಡಿಗೆ'. ಸಂಸ್ಕೃತಿ, ಇತಿಹಾಸದ ರಕ್ಷಣೆ ಎಲ್ಲರ ಹೊಣೆ: ಸಾಹಿತಿ ಮಂಜುನಾಥ ಕಳಸಣ್ಣವರಹಿಂದೂ ಸಮಾಜದ ಸಂಘಟನೆಯೇ ದೇಶದ ಶಕ್ತಿಗೆ ಆಧಾರ: ನರೇಂದ್ರಜೀಕಬ್ಬಡಿ ಪುರುಷರ ಪಂದ್ಯಾವಳಿ ಸವದತ್ತಿ  ತಂಡಕ್ಕೆ ಜಯ.ವೀರರಾಣಿ ಚೆನ್ನಮ್ಮಳ ಧೈರ್ಯ, ಸಾಹಸ, ದೇಶಪ್ರೇಮ ಯುವಜನರಿಗೆ ಪ್ರೇರಣೆ: ತಹಸೀಲ್ದಾರ್ ಸಿದರಾಯ ಬೋಸಗಿ ಅಭಿಮತಬಸವರಾಜ ಶಿವಲಿಂಗಪ್ಪ ಯಾದವಾಡ ನಿಧನಜನರಲ್ಲಿ ದೇಶಾಭಿಮಾನ ಬೆಳಿಸಿದ ವೀರ ರಾಣಿ ಚೆನ್ನಮ್ಮ - ನಿರಾಣಿ    ಕಿತ್ತೂರು ಚನ್ನಮ್ಮಾಜಿ ಆದರ್ಶ, ಹೋರಾಟ ಜೀವನದಲ್ಲಿ ಬಳಸಿಕೊಳ್ಳಿ : ಬಾಬಾಸಾಹೇಬ ಪಾಟೀಲ.  ಸಿಕಂದರ ಬಾದಹ ಅರಬ ನಿಧನರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ: ಲಚ್ಯಾಣ ಸರಕಾರಿ ಶಾಲೆಯ ಬಾಲಕಿಯರಿಗೆ ತೃತೀಯ ಸ್ಥಾನಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಮಸ್ಯೆ ಪರಿಹರಿಸಿಕೊಳ್ಳಿ: ಕಾಗವಾಡ ತಹಶೀಲ್ದಾರ ರವೀಂದ್ರ ಹಾದಿಮನಿ ಕರೆ