ಬೀಳಗಿ- ಮಹಿಳೆಯರು ಸ್ವಾತಂತ್ರ್ಯದಿಂದ ಬದುಕು ಸಾಗಿಸುವ ಜೊತೆಗೆ ನಮ್ಮ ನಾಡು ದೇಶಾಭಿಮಾನ ಹೆಚ್ಚಿಸುವ ಕೆಲಸ ಹೇಗೆ ಮಾಡಬೇಕು ಎಂದು ತೋರಿಸಿದ ದಿಟ್ಟ ಮಹಿಳೆ ವೀರ ರಾಣಿ ಚೆನ್ನಮ್ಮ ಎಂದು ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ ತಿಳಿಸಿದರು. ಇಲ್ಲಿನ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕಾ ಆಡಳಿತ,ತಾಲೂಕ ಪಂಚಾಯತ,ಪಟ್ಟಣ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ -೨೦೨೬ ಸಮಾರಂಭದಲ್ಲಿ ಮಾತನಾಡಿದರು.
ಬ್ರಿಟಿಷ್ ವಿರುದ್ಧ ೫೪೦ ಸಂಸ್ಥಾನಗಳು ಹೋರಾಡಿದ್ದು ಆದರೆ ಬ್ರಿಟಿಷ್ ವಿರುದ್ಧ ಜಯ ಪಡೆದಿದ್ದು ಕಿತ್ತೂರು ಸಂಸ್ಥಾನ, ದೇಶಕ್ಕೆ ಸ್ವಾತಂತ್ರ್ಯ ತರುವ ನಿಟ್ಟಿನಲ್ಲಿ ಹೋರಾಡಿದ ವೀರ ರಾಣಿ ಚೆನ್ನಮ್ಮ ಮತ್ತು ಸಾವಿತ್ರಿಭಾಯಿ ಫುಲೆ ಮಹಿಳೆಯರಿಗೆ ಶಿಕ್ಷಣ ಸಿಗಬೇಕು ಎಂದು ಶೈಕ್ಷಣಿಕ ಕ್ರಾಂತಿಗೆ ಸಹಾಯ ಸಹಕಾರ ನೀಡಿದ್ದು ಇಂತಹ ಮಹಾನ್ ನಾಯಕರ ಆದರ್ಶಗಳನ್ನು ಪಾಲಿಸಬೇಕು ಎಂದರು.
ಈ ಸಂದರ್ಭದಲ್ಲಿ ನಿವ್ರತ ಶಿಕ್ಷಕರಾದ ಬಸವರಾಜ ಕುಬಕಡ್ಡಿ ವಿಶೇಷ ಉಪನ್ಯಾಸ ನೀಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ತಹಸೀಲ್ದಾರ್ ವಿನೋದ್ ಹತ್ತಳ್ಳಿ,ತಾಪಂ ಇಓ ಶ್ರೀನಿವಾಸ ಪಾಟೀಲ್,ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಫಾಲ್,ವಿ ಆರ್ ಹಿರೇನಿಂಗಪ್ಪನವರ, ಸಂಗಪ್ಪ ಗಿರಿಯನ್ನವರ, ಶ್ರೀಕಾಂತ್ ಸಂದಿಯಲ್ಲಿ, ಸೇರಿದಂತೆ ಇತರರು ಇದ್ದರು.