LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಮೊಬೈಲ್ ಬಳಕೆ ಮಕ್ಕಳಿಗೆ ಮಾರಕ-ಅರ್ಜುನ ನಾಯಿಕವಾಡಿ

ಗುರ್ಲಾಪೂರ ೧೮ – ಮಕ್ಕಳು ನಮ್ಮ ದೇಶದ ಸಂಪತ್ತು ನಮ್ಮ ಮನೆಯ ಆಶಾಕಿರಣಗಳು, ಬಾಲ್ಯದಲ್ಲಿ ಅವರಿಗೆ ನಯ ವಿನಯ ಒಳ್ಳೆಯ ಸಂಸ್ಕಾರ ಕೊಟ್ಟು ತಾಯಂದಿರು ಹಾಗೂ ಪಾಲಕರು ಬೆಳೆಸಬೇಕು ಯಾವುದೇ ಕಾರಣಕ್ಕೂ ಮೊಬೈಲ್ ಹುಚ್ಚು ಅವರಿಗೆ ಅಂಟಿಕೊಳ್ಳದಂತೆ  ನೋಡಿಕೊಳ್ಳಬೇಕೆಂದು ಕೆಪಿಸಿಸಿ ಸದಸ್ಯರಾದ ಕಂಕಣವಾಡಿಯ ಅರ್ಜುನ ನಾಯಿಕವಾಡಿ ಹೇಳಿದರು. 
ಅವರು ಸ್ವತಂತ್ರ ದಿನಾಚರಣೆಯ ಅಂಗವಾಗಿ ಸಂಕೇಶ್ವರ ನಗರದಿಂದ ಕೂಡಲ ಸಂಗಮದವರೆಗೆ ಮಕ್ಕಳು ನಮ್ಮ ದೇಶದ ಭವಿಷ್ಯ ದಯವಿಟ್ಟು ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬೇಡಿ ಎಂಬ ಸಂದೇಶದೊಂದಿಗೆ  ವಿನೂತನ ಸೈಕಲ್ ಜಾಥಾ ಹೊರಟ ಸಂಕೇಶ್ವರದ ರಮೇಶ ಪೂಜಾರಿ ಅವರನ್ನು ಕಂಕಣವಾಡಿಯಲ್ಲಿ ಭವ್ಯವಾಗಿ ಸ್ವಾಗತಿಸಿ ಸತ್ಕರಿಸಿ ಬೀಳ್ಕೊಟ್ಟು ಮಾತನಾಡುತ್ತಾ ಮಕ್ಕಳಿಗೆ ಮೊಬೈಲ್ ಬದಲು ಪುಸ್ತಕ ಗೀಳು ಅಂಟುವ ಹಾಗೇ ನೋಡಿಕೊಳ್ಳಿರಿ, ಯುವಜನತೆ ಅವಶ್ಯಕತೆಗೆ ತಕ್ಕಂತೆ ಮೊಬೈಲ್ ಬಳಕೆ ಮಾಡಿ ತಮ್ಮ ಭಾವಿ ಜೀವನವನ್ನು ರೂಪಿಸಿಕೊಳ್ಳಬೇಕು. 
ಆಗಿನ ಕಾಲದಲ್ಲಿ ತಾಯಂದಿರು ಮಕ್ಕಳು ಅತ್ತಾಗ ಲಾಲಿ ಹಾಡಿ ಚುಕ್ಕೆ, ಚಂದಿರರನ್ನು ತೋರಿಸಿ ಸಮಾಧಾನಪಡಿಸುತ್ತಿದ್ದರು, ಈಗ ಮೊಬೈಲ್ ಕೈಗೆ ಕೊಟ್ಟು ಮಕ್ಕಳನ್ನು ಸಂತೈಸುವ ಕಾಲ ಬಂದಿದೆ ಇದು ಬದಲಾಗಬೇಕೆಂದು ಹೇಳಿದರು. 
ಈ ಸಂದರ್ಭದಲ್ಲಿ ಡಾ|| ಅರವಿಂದ ಗದಾಡಿ, ಸದಾಶಿವ ಹೊಸೂರ, ನಾರಾಯಣ ಅಗ್ನೆಪ್ಪಗೋಳ, ಬಾಳಪ್ಪಾ ಅರಭಾಂವಿ, ಮಾರುತಿ ಅಗ್ನೆಪ್ಪಗೋಳ, ರವಿ ಪೂಜೇರಿ, ಬಸವರಾಜ ಮರ್ದಿ, ರಾಮು ಬಳ್ಳಾರಿ, ಗುರುರಾಜ ನಾಯಿಕವಾಡಿ, ಯಮನಪ್ಪಾ ಕಂಬಾರ, ಮಹಾದೇವ ಮಂಗಸೂಳಿ ಮತ್ತು ಅನೇಕರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್