LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿತ್ತಿರುವ  ಮಲ್ಲಾಪೂರ ಅರ್ಬನ್ ಬ್ಯಾಂಕ : ಡಾ. ಮಲ್ಲಿಕಾರ್ಜುನ ಶ್ರೀಗಳು 

 

ಘಟಪ್ರಭಾ.,ಸಹಕಾರಿ ರಂಘವು ಸಾರ್ವಜನಿಕರಿಗೆ, ಗ್ರಾಹಕರಿಗೆ, ಷೇರುದಾರರಿಗೆ ಉತ್ತಮ ಸೇವೆ ಸಲ್ಲಿಸಿ ಅವರ ಅಭಿವೃದ್ಧಿಗೆ ಶ್ರಮಿಸಿದರೆ ಬ್ಯಾಂಕುಗಳು ಬೆಳವಣಿಗೆ ಹೊಂದಿ ಉತ್ತಂಗ ಸ್ಥಾನಕ್ಕೆ ಹೋಗುತ್ತವೆ. ಆ ಸಾಲಿನಲ್ಲಿ ನಮ್ಮ ಪಟ್ಟಣದ ದಿ. ಮಲ್ಲಾಪೂರ ಅರ್ಬನ ಬ್ಯಾಂಕ ಗ್ರಾಹಕರ ವಡನಾಡಿ ಆಗಿ ಕೆಲಸ ಮಾಡುತಿದೆ  ಎಂದು ಘಟಪ್ರಭಾ ಪಟ್ಟಣದ ಗುಬ್ಬಲಗುಡ್ಡ  ಶ್ರೀ ಕೆಂಪಯ್ಯಸ್ವಾಮಿ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
     ಅವರು ಮಂಗಳವಾರದಂದು  ಪಟ್ಟಣದ ಪ್ರತಿಷ್ಠಿತ ದಿ ಮಲ್ಲಾಪೂರ ಅರ್ಬನ ಕೋ ಅಪ್ ಬ್ಯಾಂಕ ಲಿ. ಘಟಪ್ರಭಾ  ಇದರ ಆವರಣದಲ್ಲಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ  ದಿ. ಮಲ್ಲಪ್ಪ ಹತ್ತರವಾಟ ಮತ್ತು ಸಂಸ್ಥಾಪಕ ವ್ಯವಸ್ಥಾಪಕರಾದ ದಿ.ಮಲ್ಲಪ್ಪ ತುಕ್ಕಾನಟ್ಟಿ  ಇವರ ಪ್ರತಿಮೆ ಅನಾವರಣ ಮತ್ತು 2025-26 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ  ಸಭೆಯನ್ನು ಉದ್ದೇಸಿಸಿ ಮಾತನಾಡಿ ಘಟಪ್ರಭಾ ಪಟ್ಟಣಕ್ಕೆ ಅನೇಕ ಹಿರಿಯರ ಪರಿಶ್ರಮದಿಂದ ಇಲ್ಲಿನ ಜನರ ಅಶೋತ್ತರ ಅನುಗುಣವಾಗಿ ಹಣಕಾಸು ವ್ಯವಹಾರ ಮಾಡಲು ಬ್ಯಾಂಕಿನ ಸಂಸ್ಥಾಪಕರಾದ  ದಿ. ಮಲ್ಲಪ್ಪ ಹತ್ತರವಾಟ ಹಾಗೂ ಸಂಸ್ಥಾಪಕ ವ್ಯವಸ್ಥಾಪಕರಾದ ದಿ. ಮಲ್ಲಪ್ಪ ತುಕ್ಕಾನಟ್ಟಿ ಅವರ ಶ್ರಮ ದೊಡ್ಡದು ಎಂದರು.
    ಬ್ಯಾಂಕಿನ ಅಧ್ಯಕ್ಷ ರಮೇಶ ತುಕ್ಕಾನಟ್ಟಿ  ಮಾತನಾಡಿ ಈ ಭಾಗದ ರೈತರ, ಉದ್ಯಮಿಗಳ, ವ್ಯಾಪಾರಸ್ಥರ, ಸಾರ್ವಜನಿಕರ ಸೇವೆಗೆ ಬ್ಯಾಂಕು ಕೆಲಸ ಮಾಡಿತಿದ್ದು, ಈ ಜನಸೇವೆ ಮಾಡಲು ಅಡಿಪಾಯ ಹಾಕಿಕೊಟ್ಟ ಮಹಾನ್ ಪುರುಷರ ಸ್ಮರಣೆ ಮಾಡಿ, ಅವರ ಪ್ರತಿಮೆ ಅನಾವರಣ ಮಾಡುತ್ತಿರುವದು ಹೆಮ್ಮೆ ಅನಿಸುತ್ತಿದೆ ಎಂದರು. ದಿ. ಮಲ್ಲಪ್ಪಜ್ಜ ಹತ್ತರವಾಟ ಹಾಗೂ ತಂದೆ ದಿ. ಮಲ್ಲಪ್ಪ ತುಕ್ಕಾನಟ್ಟಿ ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾರ್ವಜನಿಕರ ಸೇವೆ ಮಾಡಿ ಸಹಕಾರಿ ರಂಘದಲ್ಲಿ ಮುನ್ನಡೆಯುತ್ತಿದೆ ಎಂದರು.
    2025-2026 ರ ವಾರ್ಷಿಕ ಸಭೆ ಉದ್ದೇಸಿಸಿ ಮಾತನಾಡಿದ ರಮೇಶ ತುಕ್ಕಾನಟ್ಟಿ ಪ್ರಸಕ್ತ 4925 ಸದಸ್ಯರನ್ನು ಹೊಂದಿರುವ ಬ್ಯಾಂಕು, ರೂ. 30,17,74,935=01 ಗಳ ದುಡಿಯುವ ಬಂಡವಾಳ, ರೂ. 1,00,98,200=00 ಗಳ ಶೇರ್ ಬಂಡವಾಳ, ರೂ. 4,82,87,834=80 ಗಳ ನಿಧಿಗಳು,ರೂ. 23,88,13,136=47 ಗಳ ಠೇವಣಿ ಹೊಂದಿದ್ದು, ರೂ. 16,92,57,354=00 ಗಳ ಸಾಲ ನೀಡಿದೆ. ಪ್ರಸಕ್ತ 2025-26  ನೇ ವಾರ್ಷಿಕ ಸಾಲಿನಲ್ಲಿ ರೂ 31,31,611=31 ಗಳ ಲಾಭ ಗಳಿಸಿ ಸಂಪೂರ್ಣ ಘಣಕಿಕೃತ ಬ್ಯಾಂಕಾಗಿದೆ ಎಂದರು.
    ಸಾನಿಧ್ಯ ವಹಿಸಿದ್ದ ಹೊಸಮಠದ ಶ್ರೀ ವೀರೂಪಾಕ್ಷ ಮಹಾಸ್ವಾಮಿಗಳು ಮಾತನಾಡಿ ಬ್ಯಾಂಕು ದಿನದಿಂದ ದಿನಕ್ಕೆ ಬೆಳೆದು, ಈ ಭಾಗದ ಜನರಿಗೆ ಉತ್ತಮ ಸೇವೆ ಸಲ್ಲಿಸಿ ಜನಾನುರಾಗಿ ಬ್ಯಾಂಕ್ ಆಗಿದೆ ಎಂದರು.
    ಈ ಸಭೆಯ ವೇದಿಕೆಯಲ್ಲಿ   ಜೆ ಜಿ ಕೋ ಸಹಕಾರಿ ಆಸ್ಪತ್ರೆಯ ಅಧ್ಯಕ್ಷ ಅಪ್ಪಯ್ಯಪ್ಪ ಬಡಕುಂದ್ರಿ, ಬೈಲಹೊಂಗಲ ಸಹಕಾರಿ ಸಂಘಗಳ  ಸಹಾಯಕ  ಉಪ ನಿಭಂದಕರಾದ ಶಾಹಿನ ಅಕ್ತರ್, ಕೆ ಆರ್ ಎಚ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಮಣ್ಣ ಹುಕ್ಕೇರಿ, ಜೆ ಜಿ ಕೋ ನಿರ್ದೇಶಕ ಚಂದ್ರಶೇಖರ ಕಾಡದವರ, ಪಿ ಕೆ ಪಿ ಎಸ್ ಅಧ್ಯಕ್ಷ ಮುತ್ತಣ್ಣ ಹತ್ತರವಾಟ, ಕರ್ನಾಟಕ ವೈಜ್ಞಾನಿಕ ಪರಿಷತ ಅಧ್ಯಕ್ಷ ಮಾರುತಿ ವಿಜಯನಗರ, ಸುರೇಶ ಪಾಟೀಲ ವೇದಿಕೆ ಮೇಲೆ ಇದ್ದರು.
    ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಹೊನ್ನಜ್ಜ ಕೋಳಿ, ಆಡಳಿತ ಮಂಡಳಿ ಸದಸ್ಯರಾದ ಶ್ರೀಶೈಲ ಮಗದುಮ್, ಆನಂದ್ ಕಬಾಡಗಿ, ಸತೀಶ್ ಹತ್ತರವಾಟ, ಶುಭಾಶಚಂದ್ರ ಕಾಡದವರ, ಮಹಾದೇವ ಬಟನೂರೆ, ಮಹಾವೀರ ಹುಲ್ಲೋಳಿ, ಡಾ. ರಾಜಶೇಖರ್ ತುಕ್ಕಾನಟ್ಟಿ, ಕಲ್ಲೋಳೆಪ್ಪಾ ಜಮಖಂಡಿ, ರಾಮಪ್ಪ ನಾಯಕ, ರೇವಕ್ಕ ಕಮತ, ಶ್ರುತಿ ಮಟಗಾರ, ಶ್ರೀಕಾಂತ್ ಗಾಢವಿ, ರಮೇಶ ಬಂಗಾರಿ, ಬ್ಯಾಂಕಿನ ವ್ಯವಸ್ಥಾಪಕರಾದ ರಮೇಶ ಮುರಗೋಡ 2025-26 ನೇ ಸಾಲಿನ ಸಂಪೂರ್ಣ ವರದಿ ವಾಚನ ಮಾಡಿದರು. ಘಟಪ್ರಭಾ ಭಾಗದ ಮುಖಂಡರು, ರೈತರು, ಷೇರುದಾರರು, ಗ್ರಾಹಕರು, ಬ್ಯಾಂಕಿನ ಸಿಬ್ಬಂದಿ   ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್