Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಮಲಬಾರ್ ಗೋಲ್ಡ್ & ಡೈಮಂಡ್ಸ್ ’ನುವಾ’ ಅನಾವರಣ

 

ಬೆಳಗಾವಿ, ೧೩/೦೬/೨೦೨೬: ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಹೊಸ ನ್ಯಾಚುರಲ್ ಡೈಮಂಡ್ ಆಭರಣಗಳ ಕಲೆಕ್ಷನ್ ‘ನುವಾ’(ಓUWಂ) ಅನಾವರಣಗೊಳಿಸಿದೆ. ಪ್ರಕೃತಿಯಲ್ಲಿ ಕಾಣಸಿಗುವ ಸೂಕ್ಷ್ಮ ಮಾದರಿ, ರಚನೆಗಳು ಮತ್ತು ನಾಜೂಕಾದ ವಿವರಗಳಿಂದ ಪ್ರೇರಿತವಾದ ಈ ಕಲೆಕ್ಷನ್, ಆಧುನಿಕ ವೈಭವವನ್ನು ಪ್ರಕೃತಿಯ ಸೌಂದರ್ಯದೊಂದಿಗೆ ಸಂಯೋಜಿಸುವ ಪ್ರಯತ್ನವಾಗಿದೆ. ರೇಖೆಗಳ ಲಯ, ಜೇನುಗೂಡು ರಚನೆಗಳು ಹಾಗೂ ಭೂಮಿಯ ಸಹಜವಾಗಿ ರೂಪುಗೊಂಡ ಜೈವಿಕ ವಿನ್ಯಾಸಗಳು ಸೇರಿದಂತೆ ಸಾಮಾನ್ಯವಾಗಿ ಗಮನಕ್ಕೆ ಬಾರದ ಪ್ರಕೃತಿಯ ಅಂಶಗಳನ್ನು ಈ ಕಲೆಕ್ಷನ್‌ನಲ್ಲಿ ಅನಾವರಣಗೊಳಿಸಲಾಗಿದೆ.
೧೮ ಮತ್ತು ೧೪ ಕ್ಯಾರಟ್ ಚಿನ್ನದಲ್ಲಿ ವಿನ್ಯಾಸಗೊಳಿಸಲಾದ ಈ ಕಲೆಕ್ಷನ್‌ನಲ್ಲಿ ನ್ಯಾಚುರಲ್ ಡೈಮಂಡ್ಸ್‌ಗಳನ್ನು ಬಣ್ಣದ ರತ್ನಗಳು, ಸೆರಾಮಿಕ್ ಕಲರ್ ಎನಾಮೆಲಿಂಗ್ ಮತ್ತು ಮಲ್ಟಿ-ಟೋನ್ ರೋಡಿಯಮ್ ಫಿನಿಶ್‌ಗಳೊಂದಿಗೆ ಮತ್ತಷ್ಟು ಸುಂದರಗೊಳಿಸಲಾಗಿದೆ. ದೃಢತೆ ಮತ್ತು ಮೃದುವಾದ ಸೌಂದರ್ಯದ ನಡುವೆ ಸಮತೋಲನ ಸಾಧಿಸುವ ಈ ಆಭರಣಗಳು, ಸೊಗಸಾದ, ಬಹುಮುಖ ಹಾಗೂ ವಿವಿಧ ಸಂದರ್ಭಗಳಿಗೆ ಸೂಕ್ತವಾಗಿವೆ. ಪ್ರತಿಯೊಂದು ವಿನ್ಯಾಸವೂ ಪ್ರಕೃತಿಯ ಮಾದರಿಗಳ ಸೌಂದರ್ಯವನ್ನು ಸೂಕ್ಷ್ಮ ಕೈಗಾರಿಕೆ, ಹರಿವಿನ ಆಕಾರಗಳು ಮತ್ತು ಆಧುನಿಕ ಅಲಂಕಾರಿಕ ಶೈಲಿಯ ಮೂಲಕ ಪ್ರತಿಬಿಂಬಿಸುತ್ತದೆ.
ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ನುವಾ ಸಂಗ್ರಹದ ಈ ಹೊಸ ಆವೃತ್ತಿ, ನ್ಯಾಚುರಲ್ ಡೈಮಂಡ್ಸ್‌ಗಳ ಮೂಲಕ ಆಧುನಿಕ ವೈಭವವನ್ನು ಆಚರಿಸುವುದರ ಜೊತೆಗೆ ಪ್ರಕೃತಿಯ ಅತ್ಯುತ್ತಮ ಸೃಷ್ಟಿಗಳು ಹಾಗೂ ಜಾಗತಿಕ ವಿನ್ಯಾಸ ಪ್ರಭಾವಗಳಿಂದ ಪ್ರೇರಿತವಾಗಿದೆ.
ಈ ಕಲೆಕ್ಷನ್‌ಗೆ ಜನಪ್ರಿಯ ನಟಿ ಕರೀನಾ ಕಪೂರ್ ಖಾನ್ ಬ್ರಾಂಡ್ ಮುಂದುವರಿದಿದ್ದಾರೆ. ಅವರ ಸಹಜ ಶೈಲಿ, ಆತ್ಮವಿಶ್ವಾಸ ಮತ್ತು ಶಾಶ್ವತ ಆಕರ್ಷಣೆ, ವ್ಯಕ್ತಿತ್ವ, ಆಧುನಿಕ ಮಹಿಳತ್ವ ಮತ್ತು ಕಾಲಾತೀತ ಸೌಂದರ್ಯ ಪ್ರತಿಬಿಂಬಿಸುವ ಈ ಕಲೆಕ್ಷನ್‌ನ ಸಾರವನ್ನು ಸುಂದರವಾಗಿ ತೋರಿಸುತ್ತದೆ. ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಮಲಬಾರ್ ಗ್ರೂಪ್ ಚೇರ್ಮನ್ ಎಂ. ಪಿ. ಅಹಮ್ಮದ್
“ಈ ಕಲೆಕ್ಷನ್‌ನ ಹೃದಯದಲ್ಲಿ ಪ್ರಕೃತಿಯಲ್ಲಿರುವ ಮಾದರಿಗಳ ಸೌಂದರ್ಯ ಕುರಿತು ಆಳವಾದ ಗೌರವವಿದೆ?ನಮ್ಮ ಸುತ್ತಮುತ್ತಲಿನ ಜಗತ್ತನ್ನು ರೂಪಿಸುವ ಸೂಕ್ಷ್ಮ ರಚನೆ, ವಿನ್ಯಾಸ ಮತ್ತು ವಿವರಗಳು. ನುವಾ ಮೂಲಕ ಆ ಪ್ರಕೃತಿಯ ಸೌಂದರ್ಯವನ್ನು ಸಮಕಾಲೀನ ನ್ಯಾಚುರಲ್ ಡೈಮಂಡ್ ಕಲೆಕ್ಷನ್ ಆಗಿ ರೂಪಾಂತರಿಸುವುದು ನಮ್ಮ ಉದ್ದೇಶ. ಇದು ಸೊಗಸಾದ, ಬಹುಮುಖ ಹಾಗೂ ಇಂದಿನ ಮಹಿಳೆಯ ಜೀವನಶೈಲಿಗೆ ಹೊಂದುವಂತಾಗಿದೆ. ಪ್ರತಿಯೊಂದು ಆಭರಣವೂ ಅತ್ಯುತ್ತಮ ಕೈಗಾರಿಕೆ ಮತ್ತು ಸಹಜ ಸೌಂದರ್ಯದ ಸಮತೋಲನವನ್ನು ಪ್ರತಿಬಿಂಬಿಸುತ್ತದೆ, ಇದನ್ನು ವಿವಿಧ ಸಂದರ್ಭಗಳಲ್ಲಿ ಮೆಚ್ಚಿಕೊಳ್ಳಬಹುದು.”

ಸರಳವಾದ ವೈಭವ ಮತ್ತು ಅರ್ಥಪೂರ್ಣ ವಿನ್ಯಾಸ ಮೆಚ್ಚುವ ಮಹಿಳೆಯರಿಗಾಗಿ ಈ ಕಲೆಕ್ಷನ್ ವಿನ್ಯಾಸಗೊಳಿಸಲಾಗಿದೆ. ಪ್ರಕೃತಿಯ ಸಮತೋಲನ ಮತ್ತು ಸೌಹಾರ್ದದಿಂದ ಪ್ರೇರಿತವಾದ ನುವಾ, ನಾಜೂಕಾದ ವಿವರಗಳು ಮತ್ತು ಬಲವಾದ ದೃಶ್ಯ ಆಕರ್ಷಣೆಯನ್ನು ಸಂಯೋಜಿಸಿ ಆಧುನಿಕ ನ್ಯಾಚುರಲ್ ಡೈಮಂಡ್ ಜುವೆಲರಿಗೆ ವಿಶಿಷ್ಟ ಗುರುತನ್ನು ನೀಡುತ್ತದೆ.

ನುವಾ ಮೂಲಕ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ನ್ಯಾಚುರಲ್ ಡೈಮಂಡ್ ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ಬಲಪಡಿಸುತ್ತಿದೆ. ಕೈಗಾರಿಕೆ, ವಿನ್ಯಾಸ ಆವಿಷ್ಕಾರ ಮತ್ತು ಆಧುನಿಕ ವೈಭವದ ಸಂಯೋಜನೆಯ ಈ ಕಲೆಕ್ಷನ್, ಶಾಶ್ವತ ಪ್ರೇರಣೆಯನ್ನು ಹೊಂದಿದೆ.

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾನೂನು ಶಿಕ್ಷಣವು ನ್ಯಾಯಯುತ ಸಮಾಜ ನಿರ್ಮಾಣದ ಪ್ರಮುಖ ಸಾಧನ: ಹಿರಿಯ ನ್ಯಾಯವಾದಿ ಕೆ.ಎಲ್. ಪಾಟೀಲ’ನನ್ನ ದೇಹ, ನನ್ನ ಸುರಕ್ಷತೆ’ ಪರಿಕಲ್ಪನೆಯಡಿ ಮಕ್ಕಳಿಗೆ ಜಾಗೃತಿ ಮೂಡಿಸಿದ ಸಂಪನ್ಮೂಲ ವ್ಯಕ್ತಿಗಳು "ಫಲಾಪೇಕ್ಷೆಯಿಲ್ಲದ ಕಾರ್ಯ ಶ್ಲಾಘನೀಯ" -ಶ್ರೀಗುರುಸಿದ್ದೇಶ್ವರ ಶ್ರೀದೇಶನೂರ ಬಂಗಲೆ ರಸ್ತೆ, ದೇವಸ್ಥಾನದ ಅಭಿವೃದ್ಧಿ ಆದಷ್ಟು ಬೇಗ  ಪ್ರಾರಂಭ : ಬಾಬಾಸಾಹೇಬ ಪಾಟೀಲ ಹತ್ತರಗಿ : ದೀಪ ಸಂಜೀವಿನಿ ಉತ್ಪನ್ನಗಳ ಮಳಿಗೆ ಉದ್ಘಾಟನೆ,"ನಾಡು ನುಡಿ, ಗಡಿ ವಿಚಾರದಲ್ಲಿ ಒಗ್ಗಟ್ಟಿನಿಂದ ಶ್ರಮಿಸಿ  / ನಾಡು ನುಡಿಯ ರಕ್ಷಣೆಗೆ ಪ್ರತಿಯೊಬ್ಬ ಕನ್ನಡಿಗ ಮುಂದಾಗಬೇಕು"  *ಶಾಲಾ ದಾಖಲಾತಿಯಲ್ಲಿ ಗಣನೀಯ ಏರಿಕೆ: ಸರ್ಕಾರಿ ಶಾಲೆಗಳತ್ತ ಪೋಷಕರ ಒಲವು*ವಕೀಲರ ಸಂರಕ್ಷಣೆಯ ಕಾಯ್ದೆ ಪರಿಣಾಮಕಾರಿ ಜಾರಿಗೆ ಸವದತ್ತಿ ವಕೀಲರ ಸಂಘದಿಂದ ರಾಜ್ಯ ಸರ್ಕಾರಕ್ಕೆ ಮನವಿ  ಇಂಡಿ: ಸಿದ್ದೇಶ್ವರ ಸ್ವಾಮೀಜಿ ಮಳಿಗೆಗಳ ಬಹಿರಂಗ ಹರಾಜು – ಶಾಸಕ ಯಶವಂತರಾಯಗೌಡ ಪಾಟೀಲ ಚಾಲನೆವಿದ್ಯುತ್‌ ಸಮಸ್ಯೆಗಳಿಗೆ ಶೀಘ್ರ ಪರಿಹರಿಸಲು ಆಗ್ರಹಿಸಿ ಅನಿರ್ದಿಷ್ಟ ಹೋರಾಟ