Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಜೊತೆಗೆ ನಿಲ್ಲೋಣ : ಸಿವಿಸಿ



ಕೊಪ್ಪಳ: ಚುನಾವಣಾ ಆಯೋಗದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಾವೆಲ್ಲ ಆಯೋಗದ ಜೊತೆಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಬಿ ಎಲ್ ಎ (ಬೂತ್ ಲೆವೆಲ್ ಏಜೆಂಟ್) ಕಾರ್ಯಗಾರದಲ್ಲಿ ಅವರು ಮಾತನಾಡಿದರು.

'ಪರಿಷ್ಕೃತ ಮತದಾರ ಪಟ್ಟಿ   ದೋಷರಹಿತವಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲಾ ರಾಜಕೀಯ ಪಕ್ಷಗಳ ಮೇಲೆ ಇದೆ. ಈಗಾಗಲೇ ನೇಮಕಗೊಂಡಿರುವ ಬಿಎಲ್ಎ - 2 ಅವರು  ಸರಕಾರದ ಬಿ ಎಲ್ ಓ ಅವರ ಜೊತೆಗೆ ಸರಿಯಾಗಿ ಕೆಲಸ ನಿರ್ವಹಿಸಿ ಮತದಾರರ ಪಟ್ಟಿ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕಿದೆ. ಪಕ್ಷಾತೀತವಾಗಿ ಈ ಕೆಲಸ ಮಾಡಬೇಕು. ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ಕೈಗೊಳ್ಳಲು ಮತದಾರರ ಪಟ್ಟಿ ಪರಿಷ್ಕೃತಗೊಳ್ಳುವುದು ಅತ್ಯಂತ ಅಗತ್ಯ,' ಎಂದು ಹೇಳಿದರು.

2002ರ ಮತದಾನ ಪಟ್ಟಿಯ ಆಧಾರದ ಮೇಲೆ ಕೆಲವೊಂದು ಬದಲಾವಣೆಗಳನ್ನು ಕೈಗೊಳ್ಳಲಾಗುತ್ತಿದೆ. ಅನರ್ಹ ಹಾಗೂ ನಿಧನ ಹೊಂದಿದವರ ಹೆಸರುಗಳನ್ನು ತೆಗೆದುಹಾಕಿ ಪಟ್ಟಿ ಸರಿಯಾಗಿ ಇರುವಂತೆ ನೋಡಿಕೊಳ್ಳುವ ಕೆಲಸ ಚುನಾವಣಾ ಆಯೋಗ ಮಾಡುತ್ತಿದೆ. ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಜೆಡಿಎಸ್ ಪಕ್ಷ ಪ್ರಾಥಮಿಕ ಹಂತದ ಕೆಲಸಗಳನ್ನು ಪೂರೈಸಿ ಜಿಲ್ಲಾಡಳಿತದ ಜೊತೆಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ಈ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳ್ಳಲು ನಮ್ಮ ಪಕ್ಷದ ಸಂಪೂರ್ಣ ಸಹಕಾರ ಇರಲಿದೆ ಎಂದು ಹೇಳಿದರು.

ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ ಹಿಟ್ನಾಳ್ ರವರು,  ಜಿಲ್ಲಾಧಿಕಾರಿ ಡಾ. ಸುರೇಶ  ಇಟ್ನಾಳ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಪಕ್ಷದ ಮುಖಂಡರು ಹಾಗೂ ಬಿ ಎಲ್ ಎ  ಗಳು ಹಾಜರಿದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ. ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ  ಬೃಹತ್ ರ‍್ಯಾಲಿನಾಡಗೌಡರಿಗೆ ಸಚಿವ ಸ್ಥಾನಕ್ಕೆ ಆಗ್ರಹ: ನಾಡಿದ್ದು ಮುದ್ದೇಬಿಹಾಳ ಬಂದ್‌ಕೇವಲ ಅಕ್ಷರ ಜ್ಞಾನವಿದ್ದರೆ ಸಾಲದು, ಜಗತ್ತಿನ ಜ್ಞಾನ ಅತ್ಯಗತ್ಯ: ಶಾಸಕ ಲಕ್ಷ್ಮಣ ಸವದಿವಿದ್ಯುತ್ ಖಾಸಗಿ ಮಾಡಿದಲ್ಲಿ ಸೌಲಭ್ಯಕ್ಕಿಂತ ಕೊರತೆಗಳನ್ನು ಹೆಚ್ಚು ಅನುಭವಿಸಬೇಕಾಗುತ್ತದೆ : ಬಿ.ಸಿ ಹಿರೇಮಠತಾಯಿನುಡಿಯೊಂದಿಗೆ ಮಕ್ಕಳಿಗಿರುವ ಸೇತುವೆಯನ್ನು ಕಡಿದು ಹಾಕಲಿರುವ 'ಸೇತುಬಂಧ ಕಾರ್ಯಕ್ರಮ :  ಅಲ್ಲಮಪ್ರಭು ಬೆಟ್ಟದೂರುರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಗುರು ಮೆಟಗುಡ್ಡ ನೇತೃತ್ವದಲ್ಲಿ ಮನವಿ.ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಜೊತೆಗೆ ನಿಲ್ಲೋಣ : ಸಿವಿಸಿ ಬಲ್ಡೋಟ ತನ್ನ ನಕ್ಷೆಯಲ್ಲಿ ಕೆರೆ ಹೊರಗಿಟ್ಟರೂ ಬಳಕೆಗೆ ಯಾಕಿಲ್ಲ: ನಾಯ್ಡುಮತದಾರರಿಗೆ ಎನುಮರೇಷನ್ ಫಾರಂ ಸಿಗುವಂತೆ ನೋಡಿಕೊಳ್ಳಿ: ಡಾ. ಸುರೇಶ ಇಟ್ನಾಳಬುಡಾ ಅಧ್ಯಕ್ಷರ  ಮೂಲಕ ರಾಜ್ಯ  ಸಿ. ಎಂ  ಡಿ.ಕೆ ಶಿವಕುಮಾರ್ ಗೆ  ಅತಿಥಿ ಉಪನ್ಯಾಸಕರ ಮನವಿ