LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ರೈತರ ತಾಳ್ಮೆ ಪರಿಕ್ಷೀಸದೇ ಬರ ಘೋಷಿಸಲಿ-ಶಾಸಕ ರಾಜುಗೌಡ

ಬೃಹತ್ ಪ್ರತಿಭಟನೆ ಧರಣಿ ಸತ್ಯಾಗ್ರಹ * ೨೧ ರಂದು ತಾಳಿಕೋಟೆ ಸಂಪೂರ್ಣ ಬಂದ್

ತಾಳಿಕೋಟೆ,  ಮಳೆ ಕೊರತೆಯಿಂದ ತಾಳಿಕೋಟೆ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ತೀವ್ರವಾಗಿ ಹಿನ್ನಡೆ ಕಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಅವರು ಹೇಳಿದರು.
       ಪಟ್ಟಣದಲ್ಲಿ ಗುರುವಾರರಂದು ಬಿಜೆಪಿ ರಾಜ್ಯ ರೈತ ಮೂರ್ಚಾ ಹಾಗೂ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ತಾಳಿಕೋಟೆ ತಾಲೂಕು ಬರಪೀಡಿತ ತಾಲೂಕೆಂದು  ಘೋಷಿಸಲು ಆಗ್ರಹಿಸಿ ನಡೆದ ರೈತ ಹೋರಾಟದಲ್ಲಿ ಮಾತನಾಡಿದ ಅವರು ತಾಲೂಕಿನ ಹಲವು ಗ್ರಾಮಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಚಟುವಟಿಕೆಗಳಿಗೆ ರೈತರು ಮಾಡಿರುವ ವೆಚ್ಚವೂ ವಾಪಸ್ ಬಾರದ ಸ್ಥಿತಿ ನಿರ್ಮಾಣವಾಗಿದೆ. ಬೆಳೆ ಹಾನಿಯನ್ನು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಅರ್ಹ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಅದನ್ನು ಬಿಟ್ಟು ರಾಜಕೀಯ ಪ್ರಭಾವ ಇರುವ ತಾಲೂಕುಗಳನ್ನು ಬರಪಟ್ಟಿಯಲ್ಲಿ ಮೊದಲು ಸೇರಿಸಿ ಇನ್ನೂಳಿದ ತಾಲೂಕುಗಳನ್ನು ಕೈಬಿಟ್ಟಿರುವದು ರೈತರಿಗೆ ಮಾಡಿರುವ ದೊಡ್ಡ ಅನ್ಯಾಯವಾಗಿದೆ ರೈತರ ಮೇಲಿರುವ ಕೃಷಿ ಸಾಲದ ಹೊರೆಯನ್ನು ಕಡಿಮೆ ಮಾಡಲು ಸಾಲ ಮನ್ನಾ ಮಾಡಬೇಕು. ಬರದಿಂದಾಗಿ ಮುಂದಿನ ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಒದಗಿಸಬೇಕು ಬರ ಪರಿಸ್ಥಿತಿಯಿಂದ ಹಾನಿಗೊಳಗಾದ ರೈತರಿಗೆ ಏಕರೆಗೆ ೫೦ ಸಾವಿರ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ ಶಾಸಕ ರಾಜುಗೌಡರು ಬೆಳೆ ವಿಮೆ ಹಾಗೂ ಇತರ ಪರಿಹಾರ ಸೌಲಭ್ಯಗಳು ತ್ವರಿತವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ವಿಜಯಪುರ ಜಿಲ್ಲೆ ಸಂಪೂರ್ಣ ಮಳೆ ಕೊರತೆಯಿಂದ ಬರದಿಂದ ತತ್ತರಿಸಿದೆ ಮೊದಲೇ ಪಟ್ಟಿ, ಎರಡನೇ ಪಟ್ಟಿ ಎಂದು ಸರ್ಕಾರವು ಕಾಟಾಚಾರಕ್ಕೆ ಒತ್ತಡಕ್ಕೆ ತಕ್ಕಂತೆ ಬರ ತಾಲೂಕು ಘೋಷಿಸುತ್ತಿರುವದು ಏಷ್ಟು ಸರಿ ಎಂದು ಪ್ರಶ್ನೀಸಿದ ಅವರು ಬರದಿಂದ ರೈತರು ಬೆಳೆ ನಷ್ಟ, ಆರ್ಥಿಕ ಸಂಕಷ್ಟ ಹಾಗೂ ಸಾಲದ ಬಾಧೆ ಎದುರಿಸುತ್ತಿದ್ದಾರೆ. ತಾಳಿಕೋಟೆ ತಾಲೂಕಿನ ಅರ್ದದಷ್ಟು ಹಳ್ಳಿಗಳು ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಬರುತ್ತವೆ ದೇವರ ಹಿಪ್ಪರಗಿ ಬರ ಘೋಷಿಸಿದರೆ ಸುಮ್ಮನೇ ಕೂಡುವ ಪ್ರಶ್ನೇ ಇಲ್ಲಾ ತಾಳಿಕೋಟಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವವರೆಗೆ ನಮ್ಮ ರೈತರ ನಿರಂತರ ಹೋರಾಟ ನಿಲ್ಲುವುದಿಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತಾಳಿಕೋಟೆಯನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡುವವರೆಗೂ ಹೋರಾಟವು ಮುಂದುವರೆಯಲಿದೆ ದಿ.೨೧ ರಿಂದ ನಡೆಯುವ ವಿಶೇಷ ಅಧಿವೇಶನದ ಸಂದರ್ಬದಲ್ಲಿ ಶಾಸಕನಾಗಿ ನಾನು ವಿಧಾನಸೌದದ ಒಳಗೆ ಭಾವಿಗಿಳಿದು ಹೋರಾಡುತ್ತೇನೆ ನಮ್ಮ ರೈತರಿಗೆ ನ್ಯಾಯಯುತವಾದ ಬೇಡಿಕೆಗಳು ಇಡೇರುವವರೆಗೂ ಹೋರಾಟ ಮಾಡುತ್ತೇನೆ ವಿಧಾನಸೌದದ ಒಳಗೆ ನಮ್ಮ ಹೋರಾಟ ಹೊರಗೆ ನಿಮ್ಮ ಹೋರಾಟ ರಾಜ್ಯ ಸರ್ಕಾರವನ್ನು ರೈತರ ಮುಂದೆ ಮಂಡಿಯೂರಿ ಕುಳಿತು ಕೆಲಸ ಮಾಡುವಂತೆ ಮಾಡಲಿದೆ ಎಲ್ಲರೂ ಈ ಪಕ್ಷಾತೀತ ಹೋರಾಟದಲ್ಲಿ ಭಾಗ ವಹಿಸಿ ಇನ್ನಷ್ಟು ಶಕ್ತಿ ತುಂಬುವ ಕಾರ್ಯವಾಗಲಿ ಎಂದರು.
   ಹೋರಾಟ ತೀವ್ರಗೊಳಿಸುವ ಎಚ್ಚರಿಕೆ
       ಇನ್ನೋರ್ವ ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಮಾತನಾಡಿ ಬಾಕಿ ಉಳಿದಿರುವ ತಾಳಿಕೋಟೆ ಒಳಗೊಂಡು ಉಳಿದ ೩ ತಾಲೂಕುಗಳನ್ನು ತಕ್ಷಣ ಬರಪೀಡಿತ ಪ್ರದೇಶಗಳೆಂದು ಘೋಷಿಸಿ ರೈತರಿಗೆ ನ್ಯಾಯ ಒದಗಿಸಬೇಕು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಬರದ ಪರಿಸ್ಥಿತಿ ಇದೆ ಈ ಭಾಗದಲ್ಲಿ ಯಾವುದೇ ನೀರಾವರಿ ಯೋಜನೆಗಳು ಕಾರ್ಯನಿರ್ವಹಿಸುತ್ತಿಲ್ಲಾ ಇಂತಹ ಸಂಕಷ್ಟದ ಸಂದರ್ಬದಲ್ಲಿ ರೈತರ ಜೊತೆ ನಿಲ್ಲಬೇಕಾದ ಕಾಂಗ್ರೇಸ್ ಸರ್ಕಾರ ತಾಳ್ಮೆಯನ್ನು ಪರಿಕ್ಷೀಸುತ್ತಿದೆ ರೈತರ ವಿಷಯದಲ್ಲಿ ತಾರತಮ್ಯ ಮಾಡಬಾರದು. ಬಾಕಿ ಉಳಿದಿರುವ ತಾಳಿಕೋಟೆ ತಾಲೂಕು ಸೇರಿ ಇನ್ನೂಳಿದ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಬೇಕೆಂದು ಒತ್ತಾಯಿಸಿದರು. 
   ನಾಡಗೌಡರು ಸಿಎಂ ಮೇಲೆ ಒತ್ತಡ ಹಾಕಲಿ
      ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಉಳಿದಿರುವ ತಾಳಿಕೋಟೆ, ಇಂಡಿ, ಚಡಚಣ ಸೇರಿದಂತೆ ೩ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಶಾಸಕ ಅಪ್ಪಾಜಿ ನಾಡಗೌಡರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕು. ಜಿಲ್ಲಾ ಉಸ್ತುವಾರಿ ಮಂತ್ರಿ ಎಂ.ಬಿ.ಪಾಟೀಲರು ಜಿಲ್ಲೆಯಲ್ಲಿಯ ಬೀಕರ ಬರ ತಿಳಿದವರಾಗಿದ್ದಾರೆ ಸಚೀವ ಸಂಪುಟದಲ್ಲಿ ರೈತರ ಸಮಸ್ಯೆಗೆ ನ್ಯಾಯಕೊಡಿಸಬೇಕೆಂದು ಸೋಮನಗೌಡ ಪಾಟೀಲ ಸಾಸನೂರ ಅವರು ಹೇಳಿದರಲ್ಲದೇ ರೈತರ ಹೋರಾಟ ಯಾವುದೇ ಪಕ್ಷದ ಹೋರಾಟವಲ್ಲ; ಇದು ಅನ್ನದಾತನ ನ್ಯಾಯಯುತ ಹೋರಾಟವಾಗಿರುವುದರಿಂದ ಎಲ್ಲರೂ ಒಗ್ಗೂಡಬೇಕು ಇನ್ನೂ ದಿ. ೧೮, ೧೯ ಎರಡು ದಿನ ಹೋರಾಟ ನಡೆಯಲಿದೆ ದಿ. ೨೧ ಸೋಮವಾರರಂದು ತಾಳಿಕೋಟೆ ಸಂಪೂರ್ಣ ಬಂದ್‌ಗೆ ಕರೆ ನೀಡಲಾಗಿದೆ ರೈತರ ಒಗ್ಗಟ್ಟಿನ ಹೋರಾಟ ಸರ್ಕಾರಕ್ಕೆ ಎಚ್ಚರಿಸುವ ಗಂಟೆಯಾಗಲಿದೆ ಎಂದರು. 
         ಇನ್ನೋರ್ವ ಬಿಜೆಪಿ ರೈತ ಮೂರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಕೂಡಲೇ ಇನ್ನೂಳಿದ ತಾಳಿಕೋಟೆ ತಾಲೂಕು ಒಳಗೊಂಡು ೩ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸದಿದ್ದರೆ ಉಗ್ರ ಸ್ವರೂಪದ ಹೋರಾಟ ನಡೆಯಲಿದೆ ಎಂದು ಸರ್ಕಾರಕ್ಕೆ ಏಚ್ಚರಿಸಿದರು. 
ಮುಖಂಡರಾದ ಮಡುಸಾಹುಕಾರ ಬಿರಾದಾರ, ಬಸನಗೌಡ ವಣಕ್ಯಾಳ, ಪ್ರಭುಗೌಡ ಅಸ್ಕಿ, ಶಿಲ್ಪಾ ಕುದರಗುಂಡ ಅವರು ಮಾತನಾಡಿದರು.
      ಪ್ರತಿಭಟನಾ ಮೇರವಣಿಗೆಯು ಬಸವೇಶ್ವರ ವೃತ್ತದಿಂದ ಪ್ರಾರಂಭಗೊಂಡು ಅಂಬೇಡ್ಕರ್ ಸರ್ಕಲ್, ಕತ್ರಿ ಭಜಾರ, ಶಿವಾಜಿ ಮಹಾರಾಜರ ವೃತ್ತ, ಬಸ್ ನಿಲ್ದಾಣದ ಮುಂಭಾಗದ ರಸ್ತೆಗುಂಟಾ ಹಾಯ್ದು ಎಪಿಎಂಸಿ ಮುಖ್ಯದ್ವಾರದಲ್ಲಿ ನಿರ್ಮಿಸಲಾದ ವೇದಿಕೆಗೆ ಆಗಮಿಸಿ ಧರಣಿಯೊಮದಿಗೆ ಸಭೆಯಾಗಿ ಮಾರ್ಪಟ್ಟಿತು.
     ಮುಖಂಡರಾದ ಸಿದ್ದು ಬುಳ್ಳಾ, ಡಿ.ಕೆ.ಪಾಟೀಲ, ರಾಜುಗೌಂಡ ಗುಂಡಕನಾಳ, ರಾಜುಗೌಡ ಕೊಳೂರ, ಎಂ.ಎಂ.ಪಾಟೀಲ, ಶ್ರೀಮತಿ ಸುವರ್ಣಾ ಬಿರಾದಾರ, ಸಂಗಮ್ಮ ದೇವರಳ್ಳಿ, ಮೊದಲಾದವರು ಪಾಲ್ಗೊಂಡಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್