LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಗರ್ಭಕಂಠದ ಕ್ಯಾನ್ಸರ್ ಲಸಿಕಾ ಅಭಿಯಾನಕ್ಕೆ ಚಾಲನೆ

ಬಳ್ಳಾರಿ, ಮಾ.13: ಜಿಲ್ಲೆಯಾದ್ಯಂತ ಇಂದಿನಿಂದ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ಬರುವುದನ್ನು ತಡೆಯಲು,ಹೂಮನ್ ಪ್ಯಾಪಿಲೋಮ ಎಂಬ  ವೈರಸ್ (ಎಚ್.ಪಿ.ವಿ) ಲಸಿಕೆ ನೀಡುವ ವಿಶೇಷ ಅಭಿಯಾನಕ್ಕೆ ಇಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗಿದೆ.

ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಇದಕ್ಕೆ ಚಾಲನೆ ನೀಡಿ. ಈ ಲಸಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ತಪ್ಪು ಸುದ್ದಿಗಳನ್ನು ನಂಬ ಬೇಡಿ. ಇದನ್ನು ಎಲ್ಲಾ ರೀತಿ ಪ್ರಯೋಗ ಮಾಡಿ ಹಾಕಲಾಗುತ್ತಿದೆ. ಇತರೇ ಲಸಿಕೆ ಹಾಕಿಸಿಕೊಂಡಾಗ ಬರುವ ಒಂದಿಷ್ಟು ಜ್ವರ ಕೆಲವರಿಗೆ ಮಾತ್ರ ಬರಬಹುದು. ಯಾವುದೇ ಸೈಡ್ ಎಫೆಕ್ಟ್ ಇಲ್ಲ. ಎಲ್ಲರೂ ಹಾಕಿಸಿಕೊಳ್ಳಿ. ಈಗ ಭಾರತ ಸರ್ಕಾರದಿಂದ 14 ವರ್ಷದೊಳಗಿನ ಮಕ್ಕಳಿಗೆ ನೀಡುತ್ತಿದೆ. ಕೆಎಂಆರ್ ಸಿ ನಿಧಿಯಿಂದ ನಮ್ಮ ಜಿಲ್ಲೆಯಲ್ಲಿ 9 ವರ್ಷದಿಂದ 14 ವರ್ಷದೊಳಗಿನ ಮಕ್ಕಳಿಗೆ ಹಾಕಲು ಉದ್ದೇಶಿಸಿದೆ. ಇದನ್ನು ಒಂದು ಬಾರಿ ಮಾತ್ರ ಹಾಕಿಸುವುದು. ನಿಮ್ಮಹೆಸರಲ್ಲಿ ಇದು ಆಬ್ ಲೈನ್ ಪೋರ್ಟಲ್ ನಲ್ಲಿ ನೋಂದಣಿ ಆಗಿ ನಿಮಗೆ ಲಸಿಕೆ ಪ್ರಮಾಣ ಪತ್ರ ದೊರೆಯುತ್ತದೆಂದು ಹೇಳಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಮಾತನಾಡಿ ಜಿಲ್ಲೆಯಲ್ಲಿ ಈ ಲಸಿಕೆ ಹಾಕಲು 18 ಸಾವಿರ ಮಕ್ಕಳನ್ನು ಗುರುತಿಸಿದೆ, ಭಾರತ ಸರ್ಕಾರದಿಂದ 6 ಸಾವಿರ ಲಸಿಕೆ ಈಗಾಗಲೇ ಬಂದಿದ್ದು ಹಂತ ಹಂತವಾಗಿ ಬರಲಿದ್ದು ಈ ಅಭಿಯಾನ ಮೂರು ತಿಂಗಳ ನಡೆಯುತ್ತದೆಂದರು.

ಭಾರತೀಯ ಕುಟುಂಬ ಯೋಜನಾ ಸಂಘದ ವ್ಯವಸ್ಥಾಪಕಿ ಡಾ.ಜಯಲಕ್ಷ್ಮಿ ಮಾರುಕಟ್ಟೆಯಲ್ಲಿ ಈ ಹೆಚ್ ಪಿ ವಿ ಲಸಿಕೆ ಬೆಲೆ 4 ಸಾವಿರ ರೂ. ಇದನ್ನು ನಮ್ಮ ಸಂಸ್ಥೆಯಲ್ಲಿ ರಿಯಾಯಿತಿಯಿಂದ 1500 ರೂ ಗೆ ಈ ವರೆಗೆ 256 ಜನರಿಗೆ ನೀಡಿದೆ. ಈಗ ಸರ್ಕಾರ ಉಚಿತವಾಗಿ ನೀಡುತ್ತಿರುವುದು ಸಂತೋಷದ ಸಂಗತಿ ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದರು.

ಲಸಿಕೆ ಪಡೆದ ಮಕ್ಕಳಾದ ನವ್ಯ ಮತ್ತು ನೇಹ ಸಂಜೆವಾಣಿಯೊಂದಿಗೆ  ಮಾತನಾಡಿ ನಮ್ಮ ಸುರಕ್ಷತೆಗಾಗಿ ಲಸಿಕೆ ಪಡೆಯಲು ಸಂತೋಷವಾಗುತ್ತದೆ. ಎಲ್ಲಾ 14 ವರ್ಷದೊಳಗಿನ ಹೆಣ್ಣು ಮಕ್ಕಳು ಹಾಕಿಸಿಕೊಳ್ಳಬೇಕು. ಇದರಿಂದ ಏನೂ ಆಗಲ್ಲ. ನಾನು ಜಿಲ್ಲೆಯಲ್ಲಿ ಮೊದಲ ಲಸಿಕೆ ಪಡೆದಿದ್ದು ಸಂತೋಷವಾಯ್ತು ಎಂದು ಹೇಳಿದರು.

ಈ ವೇಳೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸಾರೆಡ್ಡಿ ಮೊದಲಾದವರು ಇದ್ದರು ಜಿಲ್ಲೆಯ ಎಲ್ಲಾ ತಾಲೂಕು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಲಸಿಕೆ ಹಾಕಲಾಗುತ್ತದೆ. ಮಕ್ಕಳು ಪೋಷಕರೊಂದಿಗೆ ಆಗಮಿಸಿ ಹಾಕಿಸಿಕೊಳ್ಳಬೇಕಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ೩೦ ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಬೃಹತ್ ಶೋಭಾಯಾತ್ರೆಅನ್ನಪೂರ್ಣಾ ಯತ್ತಿನಮನಿ ನಿಧನ. ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾಡಗೌಡರಿಂದ ಚಾಲನೆಎಂಆರ್‌ಎನ್‌ ಗ್ರೂಪ್ ಬ ಬಯೋಪ್ಲಾಸ್ಟಿಕ್ ಕಾರ್ಖಾನೆಗೆ ರಾಜ್ಯ ಸರ್ಕಾರದ ನಿರಾಕರಣೆ: ಮುರುಗೇಶ್ ನಿರಾಣಿ ಅಸಮಾಧಾನಇಂಡಿಯಲ್ಲಿ 'ವಿಶಾಲ ಸೌಹಾರ್ದ' ಬ್ಯಾಂಕ್‌ 12ನೇ ಶಾಖೆ ಉದ್ಘಾಟನೆ: ನಿರಾಣಿ ಕುಟುಂಬದ ಸಹಕಾರಿ ಸೇವೆ ಶ್ಲಾಘನೀಯ ಎಂದ ಶಾಸಕ ಯಶವಂತರಾಯಗೌಡ ಪಾಟೀಲಇಂಡಿ, ಚಡಚಣ, ತಾಳಿಕೋಟೆ ತಾಲೂಕುಗಳು ಶೀಘ್ರದಲ್ಲೇ ಬರಪೀಡಿತ ಎಂದು ಘೋಷಣೆ: ಶಾಸಕ ಯಶವಂತರಾಯಗೌಡ ಪಾಟೀಲರೈತರ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಸಹಿಸಲ್ಲಾ-ಸೋಮನಗೌಡತಾಲ್ಲೂಕಾ ಮಟ್ಟದಲ್ಲಿ ಲಕ್ಷ್ಮೀಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಡ್ಢಿಯಲ್ಲಿ ಪ್ರಥಮ: ಜಿಲ್ಲಾಮಟ್ಟಕ್ಕೆ ಆಯ್ಕೆ*ವಿವಿಧ ಗ್ರಾಮಗಳ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಚನ್ನರಾಜ ಹಟ್ಟಿಹೊಳಿ*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್