Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅತ್ಯಧಿಕ ಆದಾಯ ಗಳಿಸಿ ನಂ.1 ಸ್ಥಾನ ಪಡೆದ ಕುಕ್ಕೆ ಸುಬ್ರಹ್ಮಣ್ಯ ದೇಗುಲ

ಮಂಗಳೂರು, 

ಕರ್ನಾಟಕ ಮುಜರಾಯಿ ಇಲಾಖೆ ಆಧೀನದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಸತತ 15ನೇ ವರ್ಷವು ಸಹ ಆದಾಯ ಗಳಿಕೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಹೌದು.. 2025-26 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬರೋಬ್ಬರಿ 167.89 ಲಕ್ಷ ರೂಪಾಯಿ ಆದಾಯ ಹರಿದುಬಂದಿದೆ. 2025ರ ಏಪ್ರಿಲ್ 1ರಿಂದ 2026ರ ಮಾರ್ಚ್ 31 ರವರೆಗೆ ದೇವಾಲಯವು ಒಟ್ಟು 167.89 ಕೋಟಿ ರೂಪಾಯಿ ಆದಾಯ ಗಳಿಸಿದ್ದು, ಇದರಲ್ಲಿ 85.20 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಮೂಲಕ ಕಳೆದ 2024-25ನೇ ಸಾಲಿನ 155 ಕೋಟಿ ರೂ. ಆದಾಯವನ್ನು ಮೀರಿ ಸುಮಾರು 12 ಕೋಟಿ ರೂ. ಹೆಚ್ಚುವರಿ ಆದಾಯ ದಾಖಲಿಸಿದೆ.

2024-2025ನೇ ಸಾಲಿನಲ್ಲಿ 155.95 ಕೋಟಿ ರೂ. ಆದಾಯ ಗಳಿಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2025-26ನೇ ಹಣಕಾಸು ವರ್ಷದಲ್ಲಿ 167.89 ಕೋಟಿ ರೂ. ದಾಖಲೆಯ ಆದಾಯ ಗಳಿಸುವ ಮೂಲಕ ಸತತ 15ನೇ ವರ್ಷವೂ ರಾಜ್ಯದ ನಂ.1 ಮುಜರಾಯಿ ದೇವಾಲಯವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಹರಕೆ, ಕಾಣಿಕೆ ಹುಂಡಿ, ಹೂಡಿಕೆಗಳಿಂದ ಬರುವ ಬಡ್ಡಿ ಆದಾಯದ ಪ್ರಮುಖ ಮೂಲಗಳಾಗಿವೆ.

ಒಟ್ಟು 167.89 ಕೋಟಿ ರೂಪಾಯಿ ಆದಾಯದಲ್ಲಿ 85,20,14,531.42 ರೂ. ಖರ್ಚಾಗಿದೆ. 2024-2025ನೇ ಸಾಲಿನಲ್ಲಿ 155 ಕೋಟಿ ರೂ. ಆದಾಯ ಗಳಿಸಿತ್ತು. ಈ ಬಾರಿ 167,89,09,080.77 ರೂ. ಆದಾಯ ಗಳಿಸುವ ಮೂಲಕ ಈ ಆರ್ಥಿಕ ವರ್ಷದಲ್ಲಿ ಕಳೆದ ಆರ್ಥಿಕ ವರ್ಷದಿಂದ ಸುಮಾರು 12 ಕೋಟಿ ರೂ. ಅಧಿಕ ಆದಾಯ ಗಳಿಸಿದೆ. ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯ ಬರುತ್ತದೆ. ಕಳೆದ 14 ವರ್ಷಗಳಿಂದ ನಿರಂತರವಾಗಿ ಆದಾಯ ಗಳಿಕೆಯಲ್ಲಿ ರಾಜ್ಯದ ನಂಬರ್ ದೇವಸ್ಥಾನವಾಗಿ ಹೊರ ಹೊಮ್ಮಿರುವ ಕುಕ್ಕೆ, 15ನೇ ವರ್ಷವೂ ತನ್ನ ಅಗ್ರಸ್ಥಾನವನ್ನು ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ.

ಯಾವುದರಿಂದ ಎಷ್ಟು ಆದಾಯ?

ಗುತ್ತಿಗೆಗಳಿಂದ 2,53,09,230.00 ರೂ., ಧಾನ್ಯಗಳ ಇಳುವರಿ ಮತ್ತು ತೋಟದ ಉತ್ಪನ್ನದಿಂದ 10,50,323.00 ರೂ., ಕಟ್ಟಡ ಮತ್ತು ಅಂಗಡಿಗಳ ಬಾಡಿಗೆಯಿಂದ 94,46,470.00 ರೂ., ಕಾಣಿಕೆಯಿಂದ 5,47,43,244.45 ರೂ., ಇ ಹುಂಡಿಯಿಂದ 38,01,676.80 ರೂ., ಕಾಣಿಕೆ ಹುಂಡಿಯಿಂದ 24,69,63,576.00 ರೂ, ಹರಿಕೆ ಸೇವೆಗಳಿಂದ 64,08,90,940.51 ರೂ., ಅನುದಾನದಿಂದ 1,67,956.00 ರೂ., ಹೂಡಿಕೆಯಿಂದ ಬಂದ ಬಡ್ಡಿ 49,11,07,412 ರೂ., ಉಳಿತಾಯ ಖಾತೆ ಹಾಗೂ ಇತರ ಬಡ್ಡಿ 41,80,588.00 ರೂ., ಸ್ವೀಪ್ ವ್ಯವಹಾದಿಂದ ಬಂದ ಬಡ್ಡಿ 12,90,390.00 ರೂ., ಇತರ ಬಾಬ್ತುಗಳು 3,20,31,937.00 ರೂ., ಛತ್ರ ಸಂರಕ್ಷಣಾ ವಂತಿಗೆ 6,93,66,026.00 ರೂ., ಅನ್ನಸಂತರ್ಪಣೆ ನಿಧಿಯಿಂದ 9,14,71,606.01 ರೂ., ಅಭಿವೃದ್ದಿ ನಿಧಿ 14,17,284.00 ರೂ., ಶಾಶ್ವತ ಸೇವಾ ಮೂಲ ಧನ 56,70,421 ರೂ. ಹೀಗೆ ಒಟ್ಟು 167 ಕೋಟಿ 89 ಲಕ್ಷದ 09 ಸಾವಿರದ 080.77 ರೂ. ಆದಾಯ ದೇವಾಲಯಕ್ಕೆ ಬಂದಿದೆ.

2006-07ರಲ್ಲಿ ದೇವಾಲಯದ ಆದಾಯವು 19.76 ಕೋಟಿ ರೂ., 2007-08ರಲ್ಲಿ 24.44 ಕೋಟಿ ರೂ., 2008-09ರಲ್ಲಿ 31 ಕೋಟಿ ರೂ., 2009-10ರಲ್ಲಿ 38.51 ಕೋಟಿ ರೂ., 2011-12ರಲ್ಲಿ 56.24 ಕೋಟಿ ರೂ., 2012-13ರಲ್ಲಿ 66.76 ಕೋಟಿ ರೂ., 2013-14ರಲ್ಲಿ 68 ಕೋಟಿ ರೂ., 2014-15ರಲ್ಲಿ 77 ಕೋಟಿ 60 ಲಕ್ಷ ರೂ., 2015-16ರಲ್ಲಿ 88 ಕೋಟಿ 83 ಲಕ್ಷ, 2016-17ರಲ್ಲಿ 89 ಕೋಟಿ 65 ಲಕ್ಷ ರೂ., 2017-18ರಲ್ಲಿ 95 ಕೋಟಿ 92 ಲಕ್ಷ ರೂ., 2018-19ರಲ್ಲಿ 92 ಕೋಟಿ 09 ಲಕ್ಷ ರೂ, 2019-20ರಲ್ಲಿ 98 ಕೋಟಿ 92 ಲಕ್ಷ, 2020-21ರಲ್ಲಿ 68 ಕೋಟಿ 94 ಲಕ್ಷ., 2021-22 ರಲ್ಲಿ 72 ಕೋಟಿ 73 ಲಕ್ಷ, 2022-23ರಲ್ಲಿ 123 ಕೋಟಿ 64 ಲಕ್ಷ, 2023-24ನೇ ಸಾಲಿನಲ್ಲಿ 146 ಕೋಟಿ 1 ಲಕ್ಷ, 2024-25ನೇ ಸಾಲಿನಲ್ಲಿ 155 ಕೋಟಿ 95 ಲಕ್ಷ ಆದಾಯ ಗಳಿಸಿ ಸತತ 14 ವರ್ಷ ರಾಜ್ಯದ ನಂಬರ್ ವನ್ ಆದಾಯ ಗಳಿಕೆಯ ದೇವಸ್ಥಾನವಾಗಿತ್ತು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ