ಬಳ್ಳಾರಿ ಜುಲೈ 11 : ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೋಶಿಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, 23 ವರ್ಷಗಳ ಶೈಕ್ಷಣಿಕ ಸಾಧನೆ ಮತ್ತು ವಿಶ್ವಾಸದ ಪರಂಪರೆಯನ್ನು ಹೊಂದಿದ್ದು, ತನ್ನ ಶಿಕ್ಷಣ ಸಂಸ್ಥೆಗಳ ಸರಣಿಗೆ ಹೊಸ ಸೇರ್ಪಡೆಯಾಗಿ ಕೋಶಿಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜ್ ನಲ್ಲಿ ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣದ ಕೋರ್ಸ್ ನ್ನು ಆರಂಭಿಸಲಾಗಿದೆ ಆಸಕ್ತರು ವಿದ್ಯಾರ್ಥಿಗಳು ಈ ಸಾಲಿನಲ್ಲಿ ಪ್ರವೇಶವನ್ನು ಪಡೆಯಬಹುದು ಎಂದು ಪ್ರವೇಶ ಸಂಯೋಜಕರಾದ
ಸುಗುರೇಶ್ ಸ್ವಾಮಿ ತಿಳಿಸಿದರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ ನವ ಉದ್ಯಮಕ್ಕೆ ಇಂಜಿನಿಯರ್‌ಗಳನ್ನು ರೂಪಿಸುವುದು ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ, ಈ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ (CSE), ಇನ್ಫರ್ಮೇಷನ್ ಸೈನ್ಸ್ & ಇಂಜಿನಿಯರಿಂಗ್ (ISE), ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ & ಮಷಿನ್ ಲರ್ನಿಂಗ್ (AI & ML) ಹಾಗೂ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ (ECE) ವಿಭಾಗಗಳಲ್ಲಿ ಬಿ.ಇ. ಪದವಿ ಕೋರ್ಸ್‌ಗಳು ಲಭ್ಯವಿದ್ದು ಪ್ರಸಕ್ತ ಸಾಲಿನ ಪ್ರವೇಶವನ್ನು ಪಡೆದುಕೊಳ್ಳಬಹುದು ಎಂದರು.
ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯಲ್ಲಿ, ಅತ್ಯಾಧುನಿಕ ಪ್ರಯೋಗಾಲಯಗಳು, ಸ್ಮಾರ್ಟ್ ತರಗತಿ ಕೊಠಡಿಗಳು, ಸುಸಜ್ಜಿತ ಗ್ರಂಥಾಲಯ, ಅನುಭವಿ ಪ್ರಾಧ್ಯಾಪಕರು, ಸುಸಜ್ಜಿತ ಜಿಮ್, ಕ್ರೀಡಾ ಸೌಲಭ್ಯಗಳು ಹಾಗೂ ಪ್ರತ್ಯೇಕ ಬಾಲಕ ಮತ್ತು ಬಾಲಕಿಯರ ವಸತಿ ನಿಲಯದೊಂದಿಗೆ ಅತ್ಯುತ್ತಮ ಮೂಲಸೌಕರ್ಯ ಕಲ್ಪಿಸಲಾಗಿದೆ.
ಈ ಸಂಸ್ಥೆಯ ವಿಶೇಷ ಆಕರ್ಷಣೆಯೆಂದರೆ ವೈಜ್ಞಾನಿಕವಾಗಿ ಸಾಬೀತಾಗಿರುವ ಮೆಮೊರಿ ತಂತ್ರಜ್ಞಾನಗಳನ್ನು ಒಳಗೊಂಡಿರುವ ವಿಶಿಷ್ಟ ಬೋಧನಾ ವಿಧಾನ. ಈ ವಿಧಾನವು ಪಿಯುಸಿ ವಿದ್ಯಾರ್ಥಿಗಳಿಂದ ಉತ್ತಮ ಸ್ವೀಕಾರ ಪಡೆದಿದ್ದು, ಕರ್ನಾಟಕ ಮೆಮೊರಿ ಸ್ಪೋರ್ಟ್ಸ್ ಕೌನ್ಸಿಲ್ ಇದನ್ನು ಪರಿಣಾಮಕಾರಿ ಕಲಿಕಾ ವಿಧಾನವೆಂದು ಪ್ರಚಾರ ಮಾಡುತ್ತಿದೆ. ಈಗ ಇದೇ ಪರಿಷ್ಕೃತ ವಿಧಾನವನ್ನು ಇಂಜಿನಿಯರಿಂಗ್ ಶಿಕ್ಷಣದಲ್ಲಿ ಪರಿಚಯಿಸಲಾಗುತ್ತಿದ್ದು, ವಿದ್ಯಾರ್ಥಿಗಳು ವೇಗವಾಗಿ ಕಲಿಯಲು, ಹೆಚ್ಚು ಕಾಲ ನೆನಪಿಟ್ಟುಕೊಳ್ಳಲು, ಆತ್ಮವಿಶ್ವಾಸದಿಂದ ವಿಷಯಗಳನ್ನು ಅನ್ವಯಿಸಲು ಹಾಗೂ ಶೈಕ್ಷಣಿಕ ಮತ್ತು ವೃತ್ತಿಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಹಕಾರಿಯಾಗಿದೆ, ದೇಶದ ಪ್ರಮುಖ ಐಟಿ ಕಂಪನಿಗಳು ಹಾಗೂ ಖ್ಯಾತ ಸಂಸ್ಥೆಗಳೊಂದಿಗೆ ಉತ್ತಮ ಪ್ಲೇಸ್‌ಮೆಂಟ್ ಸಂಪರ್ಕಗಳನ್ನು ಬೆಳೆಸಲಾಗಿದೆ.
ಅತ್ಯಂತ ಮುಖ್ಯವಾಗಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ, ಕೋಶಿಸ್ ಗ್ರೂಪ್‌ನ ಸ್ವಂತ ಬಹು ವಿಶೇಷತೆಗಳ ಆಸ್ಪತ್ರೆಗಳ ಸೇವೆಯನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿದ್ದು, ಅಗತ್ಯವಿದ್ದಾಗ ಉತ್ತಮ ವೈದ್ಯಕೀಯ ನೆರವು ಲಭ್ಯವಾಗಲಿದೆ ಮತ್ತು ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವ ಉದ್ದೇಶದಿಂದ ವಿಶೇಷ ವಿದ್ಯಾರ್ಥಿವೇತನ (Scholarship) ಸೌಲಭ್ಯವೂ ನೀಡಲಾಗುತ್ತಿದೆ. 2026-27ನೇ ಶೈಕ್ಷಣಿಕ ವರ್ಷದ ಪ್ರವೇಶಗಳು KCET, COMEDK ಹಾಗೂ ಮ್ಯಾನೇಜ್‌ಮೆಂಟ್ ಕೋಟಾ ಮೂಲಕ ಪ್ರವೇಶವನ್ನು ಪಡೆದುಕೊಳ್ಳಬಹುದು ಎಂದರು.