Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೆ.ಎಲ್.ಇ. ಶುಶ್ರೂಷಾ ಮಹಾವಿದ್ಯಾಲಯ ವಾರ್ಷಿಕೋತ್ಸವ  ಸಮಾರಂಭ "ನ್ಯಾಸಾ"-೨೦೨೬

ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ



ಬೆಳಗಾವಿ,ಜೂ,೧೩ : ಬೆಳಗಾವಿಯ ಕೆ.ಎಲ್.ಇ. ಶುಶ್ರೂಷಾ ಮಹಾವಿದ್ಯಾಲವು "ನ್ಯಾಸಾ" ವಾರ್ಷಿಕೋತ್ಸವನ್ನು-ದಿನಾಂಕ: ೧೩/೦೬/೨೦೨೬ ರಂದು ಕೆ.ಎಲ್.ಇ ಸಭಾಂಗಣದಲ್ಲಿ ಆಚರಿಸಿತು. 
ಕೆ.ಎಲ್.ಇ. ಶುಶ್ರೂಷಾ ಮಹಾವಿದ್ಯಾಲದ ಪ್ರಾಂಶುಪಾಲರಾದ ಪ್ರೊ.ಡಾ.ವೀರೇಶಕುಮಾರ ನಂದಗಾವ ಅವರು ಸಂಸ್ಥೆಯ ೨೦೨೫-೨೦೨೬ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ನ್ಯಾಸಾ ಮ್ಯಾಗಜಿನ್ ಮತ್ತು ವಾರ್ತಾ ಪತ್ರಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು ಹಾಗೂ ಈ ವೇಳೆ ಅತಿಥಿಗಳನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀ ಶ್ರೀಕಾಂತ ಪುಲಾರಿ. ಕುಲಸಚಿವರು, ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್, ಬೆಂಗಳೂರು ಇವರು ಆಗಮಿಸಿದ್ದರು ಮತ್ತು ಸಾಧನೆಗೈದ ಎಲ್ಲ ವಿಧ್ಯಾರ್ಥಿಗಳನ್ನು ಅಭಿನಂದಿಸಿ, ನರ್ಸಿಂಗ್ ವೃತ್ತಿಗೆ ಜಾಗತಿಕವಾಗಿ ಹೆಚ್ಚಿನ ಬೇಡಿಕೆಯಿದೆ ಮತ್ತು  ಕೆ.ಎಲ್.ಇ.  ಸಂಸ್ಥೆಯು ಸಮಾಜಕ್ಕೆ ಸಮರ್ಥ ಶುಶ್ರೂಷಕರನ್ನು ಒದಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆಯೆಂದು ಹೇಳಿದರು
ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|| ವಿ.ಎಂ.ಪಟ್ಟಣಶೆಟ್ಟಿ ಅವರು ಅಧ್ಯಕ್ಷೀಯ ಭಾಷಣದಲ್ಲಿ ಕೆ.ಎಲ್.ಇ. ಶುಶ್ರೂಷಾ ಮಹಾವಿದ್ಯಾಲವನ್ನು ೧೦೦% ಪ್ರತಿಶತ ಶೈಕ್ಷಣಿಕ ಯಶಸನ್ನು ಸಾಧಿಸಿದ್ದಕ್ಕಾಗಿ ಅಭಿನಂದಿಸಿದರು ಹಾಗೂ ಶುಶ್ರೂಷಾ ಮಹಾವಿದ್ಯಾಲಯವು ಉದ್ಯೋಗ ಸೇವೆಗಳು ಮತ್ತು ಜಾಗತಿಕ ಭಾಷಾ ತರಬೇತಿಯಲ್ಲಿ ಶ್ರೇಷ್ಢವಾಗಿದೆಯೆಂದು ಉಲ್ಲೇಖಿಸಿದರು
ಈ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಿಕ್ಷಣದಲ್ಲಿ ಹೆಚ್ಚು ಅಂಕ ಗಳಿಸಿದ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕೆ.ಎಲ್.ಇ. ನರ್ಸಿಂಗ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಗುರುರಾಜ ಉಡಪಿ ಅವರು ಸರ್ವರನ್ನು ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕರಾದ ಡಾ. ಶ್ವೇತಾ ದಂಡಗಿ ವಂದಿಸಿದರು.
ಕಾರ್ಯಕ್ರಮದಲ್ಲಿ  ಕೆ.ಎಲ್.ಇ. ನರ್ಸಿಂಗ ಕಾಲೇಜಿನ ಡೀನ್ ಡಾ. ಸಂಗೀತಾ ಖರಡೆ ಮತ್ತು ವಿದ್ಯಾರ್ಥಿ ಸಮಿತಿಯ ಸಲಹೆಗಾರರು ಉಪಸ್ಥಿತರಿದ್ದರು. ವಾರ್ಷಿಕೋತ್ಸವು ಸಮಾರಂಭವು ರಾಷ್ಟ್ರಗೀತೆ ಹಾಡುವುದರ ಮೂಲಕ ಮುಕ್ತಾಯಗೊಂಡಿತು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆ.ಎಲ್.ಇ. ಶುಶ್ರೂಷಾ ಮಹಾವಿದ್ಯಾಲಯ ವಾರ್ಷಿಕೋತ್ಸವ  ಸಮಾರಂಭ "ನ್ಯಾಸಾ"-೨೦೨೬ಮಲಬಾರ್ ಗೋಲ್ಡ್ & ಡೈಮಂಡ್ಸ್ ’ನುವಾ’ ಅನಾವರಣ೧೦ ಕೋಟಿ  ಸದಸ್ಯತ್ವ ಪಡೆದುಕೊಂಡ ಏಕೈಕ ದೊಡ್ಡ ಪಕ್ಷ ಬಿಜೆಪಿ : ಡಾ. ಮುರುಗೇಶ ನಿರಾಣಿಮಹಿಳೆಯರು ತಮ್ಮ  ಹಕ್ಕುಗಳನ್ನು ಅರಿತು  ಮುಖ್ಯವಾಹಿನಿಗೆ ಬರಲಿ : ನ್ಯಾಯವಾದಿ ದಾನೇಶ ಅವಟಿಮಳೆ ನೀರಿನಿಂದಾಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ: ಈಶ್ವರ ಶಿಲ್ಲೇದಾರಬೆಳಗಾವಿ ಅಭಿವೃದ್ಧಿಗೆ ಸೌಹಾರ್ದತೆ ಅಗತ್ಯ: ಸಂಸದ ಜಗದೀಶ್ ಶೆಟ್ಟರಹುನ್ನೂರ ಸತ್ಸಂಗ ದಿಂದ ಮಂದಿರ ನಿರ್ಮಾಣಕ್ಕೆ ದೇಣಿಗೆಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಕ್ರೀಯಾಶೀಲರಾಗಿ ಕಾರ್‍ಯನಿರ್ವಹಿಸಬೇಕು : ಎಸ್.ಎಚ್. ಮುದಕವಿ"ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ" ಆಚರಣೆ ಗಿಡ ಮರ ಬೆಳೆಸಿ ಪೋಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ : ಎಸ್ ಆರ್ ನಡುಗಡ್ಡಿ