LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bijapur

ಕೆ. ಡೈಮಂಡ್ ಸೊಸೈಟಿಯಿಂದ ೧೦ ಲಕ್ಷ ವಿಮಾ ನೆರವು




ತಾಳಿಕೋಟೆ,  ಕೆ. ಡೈಮಂಡ್ ಮಲ್ಟಿ ಸ್ಟೇಟ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್, ತಾಳಿಕೋಟೆ ಶಾಖೆಯ ವತಿಯಿಂದ ಸಂಸ್ಥೆಯೊಂದಿಗೆ ಶ್ರೀರಾಮ್ ಇನ್ಶೂರೆನ್ಸ್ ಸಹಯೋಗದಲ್ಲಿ ಮಾಡಲಾಗಿದ್ದ ವಿಮಾ ಯೋಜನೆಯಡಿ, ನಿಧನರಾದ ಸಂಸ್ಥೆಯ ನಿರ್ದೇಶಕರಾದ ಪರಪ್ಪ ಸಜ್ಜನ್ ಅವರ ಪತ್ನಿ ಶ್ರೀಮತಿ ರಾಜೇಶ್ವರಿ ಸಜ್ಜನ್ ಅವರಿಗೆ ೧೦ ಲಕ್ಷ ವಿಮಾ ಮೊತ್ತವನ್ನು ಶುಕ್ರವಾರರಂದು ಹಸ್ತಾಂತರಿಸಲಾಯಿತು.
       ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕರಾದ ಎಸ್. ಎಂ. ಪಾಲ್ಕಿ ಅವರು, ಮಾತನಾಡಿ ಪರಪ್ಪ ಸಜ್ಜನ್ ಅವರು ಸಂಸ್ಥೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ, ಸಂಸ್ಥೆಯ ಅಭಿವೃದ್ಧಿಗೆ ಸದಾ ಸಹಕಾರ ನೀಡುತ್ತಿದ್ದ ಉತ್ತಮ ವ್ಯಕ್ತಿತ್ವದ ನಿರ್ದೇಶಕರಾಗಿದ್ದರು. ಅವರ ನಿಧನವು ಸಂಸ್ಥೆಗೆ ಹಾಗೂ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬದ ಆರ್ಥಿಕ ಭದ್ರತೆಗೆ ನೆರವಾಗುವ ಉದ್ದೇಶದಿಂದ ವಿಮಾ ಯೋಜನೆಯಡಿ ದೊರೆತ ೧೦ ಲಕ್ಷ ಮೊತ್ತವನ್ನು ಅವರ ಪತ್ನಿ ಶ್ರೀಮತಿ ರಾಜೇಶ್ವರಿ ಸಜ್ಜನ್ ಅವರಿಗೆ ಹಸ್ತಾಂತರಿಸಲಾಗುತ್ತಿದೆ ಎಂದ ಅವರು ದಿ.ಪರಪ್ಪ ಸಜ್ಜನ್ ಅವರ ಸರಳತೆ, ಉತ್ತಮ ವ್ಯಕ್ತಿತ್ವ ಹಾಗೂ ಸಂಸ್ಥೆಯ ಮೇಲಿನ ಅವರ ಕಾಳಜಿ ಮತ್ತು ಕೊಡುಗೆಯನ್ನು ಸ್ಮರಿಸಿ, ಅವರೊಂದಿಗೆ ಹೊಂದಿದ್ದ ಆತ್ಮೀಯತೆಯನ್ನು ನೆನಪಿಸಿಕೊಂಡ ಅವರು ಕೆ. ಡೈಮಂಡ್ ಮಲ್ಟಿ ಸ್ಟೇಟ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಸದಸ್ಯರು ಹಾಗೂ ಅವರ ಕುಟುಂಬಗಳ ಆರ್ಥಿಕ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇಂತಹ ಸಂಕಷ್ಟದ ಸಂದರ್ಭದಲ್ಲಿ ವಿಮಾ ಸೌಲಭ್ಯವು ಕುಟುಂಬಕ್ಕೆ ದೊಡ್ಡ ಆರ್ಥಿಕ ನೆರವಾಗುತ್ತದೆ ಎಂದು ತಿಳಿಸಿದರು. ಕೆ. ಡೈಮಂಡ್ ಸೊಸೈಟಿ ಮತ್ತು ಶ್ರೀರಾಮ್ ಇನ್ಶೂರೆನ್ಸ್ ನಡುವಿನ ಸಹಯೋಗದಿಂದ ಸದಸ್ಯರಿಗೆ ದೊರೆಯುತ್ತಿರುವ ಈ ರೀತಿಯ ವಿಮಾ ಸೌಲಭ್ಯವು ಅತ್ಯಂತ ಉಪಯುಕ್ತವಾಗಿದೆ ಎಂದು ಪಾಲ್ಕಿ ಅವರು ತಿಳಿಸಿದರು.
     ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಂಬರ ಪಾಟೀಲ, ಬೀರು ವಾಗ್ಮೋಡೆ, ಏರಿಯಾ ಮ್ಯಾನೇಜರ್ ಎನ್. ಬಿ. ಜಿಂಜರವಾಡಿ, ಸಂಸ್ಥೆಯ ವಿಮಾ ಅಧಿಕಾರಿ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಡಿ. ಪಿ. ಹಂಚಾಟೆ ಹಾಗೂ ನಿರ್ದೇಶಕರಾದ ಸುರೇಶ್ ಬಬಲೇಶ್ವರ ಎಸ್. ಟಿ. ನಿಡಗುಂದಿ, ಶ್ರೀರಾಮ್ ಇನ್ಶೂರೆನ್ಸ್ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗುಣಾತ್ಮ ಶಿಕ್ಷಣ, ಒಳ್ಳೆಯ ಸಂಸ್ಕಾರ ನೀಡುವುದು ಶಿಕ್ಷಕರ ಆಧ್ಯ ಕರ್ತವ್ಯ: ಶಾಸಕ ಂiಶವಂತರಾಯಗೌಡ ಪಾಟೀಲಬರ ಪೀಡಿತ ತಾಲೂಕು ಘೋಷಣೆ ಶೇ.೨೦೦ ಖಚಿತ-ಶಾಸಕ ನಾಡಗೌಡಮುದ್ದೇಬಿಹಾಳ ಹಾಗೂ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಎ.ಎಸ್. ಪಾಟೀಲ್ ನಡಹಳ್ಳಿ ಆಗ್ರಹಸಿಎಂ ಡಿ.ಕೆ.ಶಿವಕುಮಾರ್ ಜೊತೆ ಚರ್ಚೆ; ರೈತರ ಹೆಸರಿನಲ್ಲಿ ರಾಜಕೀಯ ಮಾಡುವವರ ಬಗ್ಗೆ ಕಿವಿಗೊಡಬೇಡಿಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ನ್ಯಾಯಾಧೀಶ ಎನ್.ವಿ.ವಿಜಯಸೆ.೧೩ರಂದು ತಾಳಿಕೋಟೆ ತಾಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯಹಿರೇಬಾಗೇವಾಡಿಯಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ: ಲಕ್ಷ್ಮೀ ಹೆಬ್ಬಾಳಕರ್ ಭಾಗಿ*ಗೃಹಲಕ್ಷ್ಮಿ ಹಣದಿಂದ ರಥ ನಿರ್ಮಾಣಕ್ಕೆ ಗ್ರಾಮಸ್ಥರ ಕೊಡುಗೆ*; *ಲಕ್ಷ್ಮೀ ಹೆಬ್ಬಾಳಕರ್ ಪ್ರಶಂಸೆ*ಸತೀಶ ಅಭಿಮಾನಿಗಳಿಂದ ಪ್ರತಿಭಟನೆಪೌಷ್ಠಿಕ ಆಹಾರ ಸೇವನೆಯಿಂದ ರಕ್ತಹೀನತೆ, ಅಪೌಷ್ಠಿಕತೆ ತಡೆ ಸಾಧ್ಯ: ನ್ಯಾ. ಮಹಾಂತೇಶ ದರಗದ