ಕಾಗವಾಡ: ಪಟ್ಟಣದ ಬಸವ ನಗರದಲ್ಲಿರುವ ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ದಿ. 01 ರಂದು ಜೆಎಂಎಫ್ಸಿ ನ್ಯಾಯಾಧೀಶೆ ರೂಪಾ ಚಿನಿವಾರ ಹಾಗೂ ತಹಸೀಲ್ದಾರ ಆಕಸ್ಮಿಕ ಭೇಟಿ ನೀಡಿ, ಹಾಸ್ಟಲ್ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡಿದರು.
ಈ ವೇಳೆ ಸ್ವಚತೆ, ಆಹಾರ, ಶೌಚಾಲಯ, ವಸತಿ, ಮೂಲಭೂತ ಸೌಲಭ್ಯಗಳ ಕುರಿತು ಮಕ್ಕಳನ್ನು ವಿಚಾರಿಸಿ, ಮಾಹಿತಿ ಪಡೆದುಕೊಂಡರು. ಮತ್ತು ಅಲ್ಲಿರುವ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಸರಕಾರಿ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಈ ಸಂದರ್ಭದಲ್ಲಿ. ರವೀಂದ್ರ ಹಾದಿಮನಿ, ಈರಣ್ಣ ವಾಲಿ, ಶಾಫಿಕ ಮುಲ್ಲಾ, ಸಚೀನ ಜಾಧವ,,ಸೇರಿದಂತೆ ಇತರರು ಇದ್ದರು.