LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

 ಭಾರತ ದೇಶ  ಗುರುಶಿಷ್ಯರ ಸಂಗಮದ ಬೀಡು : ಮಂಜುನಾಥ ಮಹಾರಾಜ.

ಹುಕ್ಕೇರಿ.ಭಾರತ ದೇಶ ಎಂದರೆ ಗುರು ಶಿಷ್ಯರ ಸಂಗಮದ ಬೀಡಾಗಿದೆ ಎಂದು ಹುಲ್ಲೋಳ್ಳಿ ಶಿವಾನಂದ ಮಠದ ಅಭಿನವ ಮಂಜುನಾಥ ಮಹಾರಾಜರು ಹೇಳಿದರು.
     ಅವರು    ಹುಕ್ಕೇರಿ ನಗರದ ಎಸ್ ಕೆ ಫ್ರೌಢ ಶಾಲೆಯ 2002 -2003 ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳ ಸ್ನೇಹ ಸಂಭ್ರಮ ಮತ್ತು ವಿದ್ಯಾರ್ಜನೆ ಮಾಡಿದ ಗುರುಗಳಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿಣ್ಣರ ಭವನದಲ್ಲಿ ಜರುಗಿದ ಕಾರ್ಯಕ್ರಮವನ್ನು ಹಿರಿಯ ಗುರುಗಳು ಶ್ರೀಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಹಳೆಯ ವಿದ್ಯಾರ್ಥಿಗಳು ತಮಗೆ ವಿದ್ಯೆ ನೀಡಿದ ಶಿಕ್ಷಕರನ್ನು ಪುಷ್ಪ ವೃಷ್ಟಿ ಮಾಡುವ ಮೂಲಕ ವೇದಿಕೆಗೆ ಕರೆ ತಂದು ಕಾಡಸಿದ್ದೇಶ್ವರ ಮತ್ತು ಸರಸ್ವತಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಮಂಜುನಾಥ ಶ್ರೀಗಳು ಹುಕ್ಕೇರಿ ಎಸ್ ಕೆ ಶಾಲೆಯಲ್ಲಿ ಆ ಕಾಲದಲ್ಲಿ ಕಲಿತ ವಿದ್ಯಾರ್ಥಿಗಳು ಒಂದಾಗಿ ತಮಗೆ ವಿದ್ಯೆ ನೀಡಿದ ಗುರುಗಳಿಗೆ ಗೌರವ ಸಲ್ಲಿಸುವ ಈ ಸಂಧರ್ಬ ಗುರು ಶಿಷ್ಯರ ಸಮಾಗಮ ವಾಗಿದೆ ಭಾರತ ದೇಶ ಗುರು ಶಿಷ್ಯರ ಸಂಗಮದ ಬೀಡು , ತಿದ್ದಿ ತೀಡಿ ಒಳ್ಳೆ ಮನುಷ್ಯನಾಗಲು ಮಾರ್ಗದರ್ಶನ ನೀಡಿದ ಗುರುವಿನ ನೆನಪಿಸಿ ಕೋಳ್ಳುವದು ಅವರಿಗೆ ಗೌರವಿಸುವದು ನಮ್ಮ ಒಳ್ಳೆಯ ಸಂಸ್ಕೃತ ವಾಗಿದೆ ಎಂದರು.
ವೇದಿಕೆ ಮೇಲೆ ಬಿ ಎಸ್ ಮುನವಳ್ಳಿ, ಎಸ್ ಆಯ್ ಸಂಬಾಳ,ಎಸ್ ಬಿ ಬುರ್ಜಿ, ಜೆ ಪಿ ಹಂದಿಗುಂದ, ಬಿ ಬಿ ಹಿಡಕಲ್, ಎಸ್ ಆರ್ ನಾವದಗಿ, ಸಿ ಎಂ ದರಬಾರೆ, ಶ್ರೀಮತಿ ಎಂ ಎ ದಂಡಗಿ ಸೇರಿದಂತೆ ಹಿರಿಯ ಶಿಕ್ಷಕರು ಉಪಸ್ಥಿತರಿದ್ದರು.
ನಂತರ ಎಲ್ಲ ಶಿಕ್ಷಕರನ್ನು ವಿದ್ಯಾರ್ಥಿಗಳು ಸತ್ಕರಿಸಿ ಗೌರವಿಸಿದರು.
ಸ್ನೇಹ ಸಂಭ್ರಮದ ರೂವಾರಿ ರವೀಂದ್ರ ಬಂದಾಯಿ ಮಾತನಾಡಿ ನಮಗೆ ಶಿಕ್ಷಣ ನೀಡಿದ ಗುರುಗಳಿಗೆ ಗೌರವ ಸಲ್ಲಿಸುವದು ಮತ್ತು ನಮ್ಮ ಹಳೆಯ ಸ್ನೆಹವನ್ನು ಶಾಶ್ವತವಾಗಿ ಮುನ್ನೆಡೆಸುವ ಉದ್ದೇಶದಿಂದ ಇಂದು ಸ್ನೇಹ ಸಂಭ್ರಮ  ಮತ್ತು ಗುರುವಂದನೆ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿದೆ ಎಂದರು.
ಇದಕ್ಕೂ ಮೊದಲು  ಶಾಲಾ ಮೈದಾನದಲ್ಲಿ ಮೊದಲಿನಂತೆ ಪ್ರಾರ್ಥನೆ ,ರಾಷ್ಟ್ರ ಗೀತೆ ಹಾಡುವ ಮೂಲಕ  ವೇದಿಕೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಮಾರುತಿ ಮುತಗಿ, ಜಗದೀಶ ಬೀರಾದರ ಪಾಟೀಲ, ವಿನೋದ ಪಾಟೀಲ, ಜ್ಯೋತಿ ವಿಭೂತಿಮಠ, ಲಕ್ಷ್ಮಿ ಬಡಿಗೇರ, ರಾಕೇಶ ಗಂಧ, ಬಸವರಾಜ ನಾಯಿಕ, ಸಾಗರ ಪಾಟೀಲ,ಸುಭಾಷ ಗಸ್ತಿ ಹಾಗೂ 2002- 03 ನೇ ಸಾಲಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST