ಚ. ಕಿತ್ತೂರು., ಪಟ್ಟಣದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 2 ನೇ ದಿ. 24 ರ ರಾತ್ರಿ ಕಿತ್ತೂರು ಕೋಟೆಯ ಚನ್ನಮ್ಮ ಮುಖ್ಯ ವೇದಿಕೆಯಲ್ಲಿ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆದ ಕಾರ್ಯಕ್ರಮಗಳು ಜನ ಮನ ಸೋರೆಗೊಂಡವು. ರಾತ್ರಿ 8 ಘಂಟೆಗೆ ನಡೆದ ಓರ್ವ ಹುಡುಗಿ ಒಂದು ಚೀಲ ಎತ್ತಿ ಅಡಾಡುವ ಮೂಲಕ ಮಹಿಳೆಯರ ಶಕ್ತಿ ಸಾಮರ್ಥ್ಯ ಪ್ರದರ್ಶಿಸಿದಳು.
ತದನಂತರ ಕನ್ನಡದ ಕಾಮಿಡಿ ಕಿಲಾಡಿಗಳ ಕಾರ್ಯಕ್ರಮ ಜನರನ್ನು ನಗೆಗಡದಲ್ಲಿ ತೆಲಿಸಿತು. ವೀರ ರಾಣಿಯ ಪರಾಕ್ರಮ ಸಾರುವ ನೃತ್ಯ ರೂಪಕ ಅದ್ಭುತವಾಗಿತ್ತು. ಗೊಂಬೆ ಮಿಮಿಕ್ರಿ ಮಾತು, ಜಾನಪದ ಹಾಡು, ಚವಡಕಿ ಹಾಡು,ಸವದತ್ತಿ ಯಲ್ಲಮ್ಮನ ಹಾಡು, ನೃತ್ಯ, ವಿವಿಧ ಕಾರ್ಯಕ್ರಮಗಳು ಜನ ಮನ ಸೋರೆಗೊಂಡವು. ಮಳೆರಾಯ ನಿನ್ನೆಯ ದಿನ ವಿರಾಮ ಘೋಷಣೆ ಮಾಡಿದ ಪ್ರಯುಕ್ತ, ಶನಿವಾರ ಮದ್ಯಾಹ್ನ ರಜೆ ಪ್ರಯುಕ್ತ ಹೆಚ್ಚಿನ ಪ್ರಮಾಣದಲ್ಲಿ ಜನ ಹರಿದು ಬಂದಿತು. ಜನ ಉತ್ಸಾಹದಿಂದ ಎರಡನೇ ದಿನದ ಕಿತ್ತೂರು ಉತ್ಸವವನ್ನು ಭರ್ಜರಿಯಾಗಿ ಆಚರಿಸಿದರು.