ಇಂಡಿ : ಎಲ್ಲ ಸಮುದಾಯದ ಒಳಿತಿಯನ್ನು ಬಯಸೋ ದೇವರು, ಎಲ್ಲರು ಆರಾಧಿಸುವ ದೇವರು, ಹನುಮ, ಆಂಜನೇಯ, ವಾಯು ಪುತ್ರ ನಾನಾರೀತಿಯಲ್ಲಿ ಪೂಜೆಗೆ ಪಾತ್ರನಾದ ದೇವರು ಅದು ಹನುಮ ದೇವರು ಎಂದು ಮಾಜಿ ಶಾಸಕರು ಅಪ್ಪಸಾಹೇಬ ಪಟ್ಟಣಶೆಟ್ಟಿ ಮಾತನಾಡಿದರು.
ಇಂಡಿ ತಾಲೂಕಿನ ಜೇವುರ ಗ್ರಾಮದ ಭೀರೇಶ್ವರ ನಗರದಲ್ಲಿ ನೂತವಾಗಿ ಕಟ್ಟಲಾದ ಹನುಮಾನ ದೇವಸ್ಥಾನ ಉದ್ಘಾಟಿಸಿ ಅವರು ಮಾತನಾಡಿದರು.
ಹನುಮ ಎಲ್ಲರ ಆರಾಧ್ಯ ದೈವ, ಈತನಿಗೆ ಪೂಜಿಸದ ಸಮಾಜವೇ ಇಲ್ಲಾ, ದೇವರಿಗೆ ದಾರಿ ತೋರಿದ, ಸಹಾಯ ಮಾಡಿದ ಮಹಾ ದೇವರು ಹನುಮ ದೇವರು, ಹಿರಿಕರ ವಾಡಿಕೆಯಂತೆ ಆಡು ಮುಟ್ಟದ ತಪ್ಪಲಿಲ್ಲ ಎಂಬಂತೆ, ಭಾರತ ದೇಶದಲ್ಲಿ ಹನುಮ ದೇವಸ್ಥಾನ ಇಲ್ಲದ ಗ್ರಾಮ ಇಲ್ಲಾ ಎಂದರು.
ವಿಜಯಪುರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ರಾಘವೇಂದ್ರ ಕಾಪಸೆ ಮಾತನಾಡಿ, ಸಂಕಷ್ಟವನ್ನು ಹರಣ ಮಾಡುವ ದೇವರು ಹನುಮ ದೇವರು, ಇಂತಹ ದೇವರ ಆರಾಧನೆ ಎಲ್ಲರಿಗೂ ಬಹು ಮುಖ್ಯ, ದಿನದ ಕೇವಲ ಐದು ನಿಮಿಷ ದೇವರ ನಾಮಸ್ಮರಣೆ, ಆರಾಧನೆ ಮಾಡುವದು ಮನಸ್ಸಿಗೆ ನೆಮ್ಮದಿ ಕೊಡುತ್ತೆ ಎಂದರು.
ಜೆಡಿಎಸ್ ಮುಖಂಡರು ಬಿ. ಡಿ. ಪಾಟೀಲ್ ಮಾತನಾಡಿ ಗ್ರಾಮದಲ್ಲಿ ಗುಡಿ ಗುಂಡಾರ ನಿರ್ಮಿಸೋದು ಕೇವಲ ಆಡಂಬರ ಮಾಡಲು ಅಲ್ಲ, ಅದರಿಂದ ನಮ್ಮ್ ಯುವಕರಲ್ಲಿ, ಗ್ರಾಮದಲ್ಲಿ ಶಾಂತಿ ನೆಲಸಲಿ, ಸಂಸ್ಕೃತಿ ಬೆಳೆಯಲಿ, ನಾವಿರುವ ಸ್ಥಳ ಶುಧಿಕಾರಣ ವಾಗಲಿ ಅನ್ನೋ ಉದ್ದೇಶಕ್ಕಾಗಿ, ನಮ್ಮ್ ಹಿರಿಯರು ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ ತಿಳಿಹೇಳಿ ದಾಗ ಇದಕ್ಕೆ ಮಹತ್ವ ಬರುತ್ತೆ ಎಂದರು.
ಈ ಸಂದರ್ಭದಲ್ಲಿ ರೇವಣಯ್ಯ ಮಠ ದಿವ್ಯ ಸಾನಿಧ್ಯ ವಹಿಸಿದರು, ನಾಗನಾಥಗೌಡ ಬಿರಾದಾರ, ಕಾಮಣ್ಣಗೌಡ ಬಿರಾದಾರ, ವಿಠಲ ಶಿರಷ್ಯಾಡ, ಮಹದೇವ್ ಮೇಲಿಮನಿ, ಶಿವಾನಂದ ಬಿರಾದಾರ, ರಾಜೂಗೌಡ ಪಾಟೀಲ, ಸಿದ್ದಣ್ಣ ಪೂಜಾರಿ, ನಾಗು ತಳಕೆರಿ, ಶಿವುಗೌಡ ಬಿ ಬಿರಾದಾರ, ಸುರೇಶ ಪೂಜಾರಿ, ಮಹೇಶ ಪೂಜಾರಿ, ಕಲ್ಲಣ್ಣ ಪೂಜಾರಿ, ನಂದೇಪ್ಪಾ ನಂದಗೊಂಡ ಗ್ರಾಮಸ್ಥರು ಮತ್ತು ಭೀರೇಶ್ವರ ನಗರದ ಎಲ್ಲ ಭಕ್ತಾದಿಗಳು ಉಪಸ್ಥಿತರಿದ್ದರು.