LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

’ಸಂಭ್ರಮದ ಈದ್ ಮಿಲಾದ್’ ರಾರಾಜಿಸಿದ ಮೆಕ್ಕಾ ಮದೀನಾ ರೂಪಕಗಳು    

          
ಮೂಡಲಗಿ : ಪ್ರವಾದಿ ಮುಹಮ್ಮದ್ ಪೈಗಂಬರ್ (ಸ) ಅವರ ಜನ್ಮದಿನದ ಪ್ರಯುಕ್ತ ಪಟ್ಟಣದ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.                                                                    
ಬುಧವಾರ ಬೆಳಿಗ್ಗೆ ಇಲ್ಲಿನ ಜಾಮಿಯಾ ಮಸೀದಿ ಆವರಣದಲ್ಲಿ ಜಮಾವಣೆಗೊಂಡ ಬಾಂಧವರು ಪ್ರಾರ್ಥನೆ ಸಲ್ಲಿಸಿ ನಂತರ ಮೆರವಣಿಗೆಗೆ ಚಾಲನೆ ನೀಡಿದರು. ಮೆಕ್ಕಾ ಮದೀನಾ ಹಾಗೂ ನಾನಾ ರೂಪಕಗಳ ಭವ್ಯ ಮೆರವಣಿಗೆಯು ಶಾಲಾ ಮಕ್ಕಳ ಪ್ರಭಾತಫೇರಿಯಲ್ಲಿ ವಿವಿಧ ವಾದ್ಯಮೇಳದಲ್ಲಿ ಪ್ರವಾದಿ ಅವರ ಬಗ್ಗೆ ಹಾಡುಗಳನ್ನು ಹಾಗೂ ಘೋ?ಣೆ ಕೂಗುತ್ತ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಟ್ಟಣದ ಪ್ರಮುಖ ವೃತ್ತವಾದ ಶ್ರೀ ಕಲ್ಮೇಶ್ವರ ವೃತ್ತಕ್ಕೆ ಆಗಮಿಸಿ ಪವಾಡ ಪುರು? ಶ್ರೀ ಕಲ್ಮೇಶ್ವರ ಅಜ್ಜನವರ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿದರು . 
ಮೆರವಣಿಗೆಯುದ್ದಕ್ಕೂ ಅಂಗಡಿ ಮುಂಗಟ್ಟುಗಳ ವರ್ತಕರಿಗೆ ಹಾಗೂ ಸಂಚಾರಿ ಸಾರ್ವಜನಿಕರಿಗೆ ನಾನಾ ತರಹದ ಸಿಹಿ ವಿತರಿಸಿ ಹಬ್ಬದ ಶುಭಾಶಯಗಳನ್ನು ಹೇಳುತ್ತಾ  ಭಾವೈಕ್ಯತೆಗೆ ಸಾಕ್ಷಿಯಾದರು. ನಂತರ ಮೆರವಣಿಗೆ ಮಸೀದಿ ಆವರಣಕ್ಕೆ ತೆರಳಿ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಭೆ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಅನೇಕ ಮುಖಂಡರು, ಗಣ್ಯರು ಯುವಕ ಸಂಘದ ಯುವಕರು, ಶಾಲಾ ಮಕ್ಕಳು, ಧರ್ಮ ಗುರುಗಳು ಸೇರಿದಂತೆ ಸರ್ವ ಧರ್ಮದವರು ಪಾಲ್ಗೊಂಡಿದ್ದರು.
                                                                           

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST