ಇಂಡಿ: ಒಬ್ಬ ವ್ಯಕ್ತಿಯ ಹೆಸರನ್ನು ಒಂದು ಬಡಾವಣೆಗೆ ನಾಮಕರಣ ಮಾಡುವುದು ಕೇವಲ ಗೌರವದ ಸಂಕೇತವಲ್ಲ, ಅದರ ಹಿಂದೆ ಅಪಾರ ಪ್ರೀತಿ, ಅಭಿಮಾನ ಹಾಗೂ ಆತ್ಮೀಯತೆ ಅಡಗಿರುತ್ತದೆ. ಈ ನೂತನ ನಗರಕ್ಕೆ ನನ್ನ ಹೆಸರನ್ನು ಇಡುವ ಮೂಲಕ ತೋರಿದ ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಗೌರವಕ್ಕೆ ಎಂ.ಜೆ. ಡೆವಲಪರ್ಸ್ನ ಕುಟುಂಬದ ಸದಸ್ಯರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ನಗರದ ಎಮ್.ಜೆ. ಡೆವಲಪರ್ಸ್ ವತಿಯಿಂದ ನಿರ್ಮಿಸಲಾಗಿರುವ ಶ್ರೀ ಯಶವಂತರಾಯಗೌಡ ಪಾಟೀಲ ನಗರದ" ನೂತನ ಬಡಾವಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಬಡಾವಣೆ ಜನತೆಗೆ ನೀರು ಸೇರದಂತೆ ಇತರರ ಮೂಲ ಭೂತ ಸೌಲಭ್ಯ ಒದಗಿಸುವ ಅವಶ್ಯಕವಾಗಿದ್ದು ಆ ನಿಟ್ಟಿನಲ್ಲಿ ಈ ನೂತನ ಬಡಾವಣೆಯ ಅಭಿವೃದ್ಧಿ ಭಹಳ ಮುಖ್ಯವಾಗಿದೆ. ಸಾರ್ವಜನಿಕರಿಗೆ ದೊರೆಯಲಿರುವ ಸೌಲಭ್ಯಗಳು ಹಾಗೂ ಉತ್ತಮ ಯೋಜನೆ ಮತ್ತು ಮೂಲಸೌಕರ್ಯಗಳೊಂದಿಗೆ ಸುಂದರ ಬಡಾವಣೆ ನಿರ್ಮಾಣವಾಗಲಿ. ಇಲ್ಲಿನ ನಿವಾಸಿಗಳಿಗೆ ನೆಮ್ಮದಿಯ ಸುಸಜ್ಜಿತ ಜೀವನ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.
ಎಮ್.ಜೆ. ಡೆವಲಪರ್ಸ್ನ ಜಾವಿದ ಮೋಮಿನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಸತ್ತಾರ ಬಾಗವಾನ, ಎಸ್. ಎಮ್.ಪಾಟೀಲ ಗಣೀಹಾರ, ಅಜೀತ ಧನಶೆಟ್ಟಿ, ಶಿವಯೋಗೆಪ್ಪ ಚನ್ನಗೊಂಡ, ಡಿ.ಆರ್.ಶಹಾ, ಪ್ರಶಾಂತ ಕಾಳೆ, ಶ್ರೀಮಂತ ಇಂಡಿ, ನಿಲಕಂಠಗೌಡ ಪಾಟೀಲ, ಜಟ್ಟೆಪ್ಪ ರವಳಿ, ಅಪ್ಪಣ್ಣ ಕಲ್ಲೂರ, ಮುನ್ನಾ ಸೌದಾಗರ, ರಹಿಮಾನ ಸೌದಾಗರ, ಮೈಬುಬು ಮೋಮಿನ, ರಶಿದ ಅರಬ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪೋಟೊ ಕ್ಯಾಪ್ಸನ್ ೦೩ ಇಂಡಿ ೦೧: