LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ನೇಸರಗಿ ಕ್ಲಸ್ಟರ್ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟನೆ

ನೇಸರಗಿ :ನೇಸರಗಿ - ಮಲ್ಲಾಪೂರ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನೇಸರಗಿ ಕ್ಲಸ್ಟರ್ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಸಡಗರ ಹಾಗೂ ಸಂಭ್ರಮದಿಂದ ಉದ್ಘಾಟಿಸಲಾಯಿತು.
       ಪೂಜ್ಯಶ್ರೀ ಚಿದಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ  ಕ್ರೀಡೆಯ ಮಹತ್ವದ ಕುರಿತು ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳು ಕ್ರೀಡಾ ಮನೋಭಾವ, ಶಿಸ್ತು, ಸಮಯಪಾಲನೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಅಲ್ಲದೆ, ಸೋಲು–ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕ್ರೀಡೆಯು ಕೇವಲ ದೈಹಿಕ ಸಾಮರ್ಥ್ಯವನ್ನು ಬೆಳೆಸುವ ಸಾಧನವಲ್ಲ; ಅದು ಮಾನಸಿಕ ಸದೃಢತೆ, ಆತ್ಮವಿಶ್ವಾಸ, ಸಹಕಾರ, ನಾಯಕತ್ವ ಹಾಗೂ ಸ್ನೇಹಭಾವವನ್ನು ಬೆಳೆಸುವ ಪ್ರಮುಖ ಮಾಧ್ಯಮವಾಗಿದೆ ಎಂದು ಸ್ವಾಮೀಜಿಯವರು ತಿಳಿಸಿದರು.
      ಕಾರ್ಯಕ್ರಮದಲ್ಲಿ ಸಂಸ್ಥೆಯ ಚೇರ್ಮನ್  ಶಿವನಗೌಡ ಪಾಟೀಲ,  ಆರ್. ಬಿ. ಪಾಟೀಲ,  ಚನ್ನಬಸಯ್ಯ ಪೂಜೇರಿ,  ರವಿ ಹೊನ್ನಯನವರ,  ಬಸವರಾಜ ಗಡೆನ್ನವರ,  ಅಡಿವೆಪ್ಪ ಗುರನಗೌಡರ,  ರಾಚಪ್ಪ ಬಂದ್ರಾಮ, ನೇಸರಗಿ, ಮಲ್ಲಾಪೂರ, ಮುರಕಿಭಾವಿ, ಅಂಬೇಡ್ಕರ್ ವಸತಿ ಶಾಲೆ ವನ್ನೂರು ಹಾಗೂ ವಿದ್ಯಾಮಂದಿರ ಪ್ರೌಢಶಾಲೆ ನೇಸರಗಿ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು,ಎಚ್ ಡಿ ಎಫ್ ಸಿ ಬ್ಯಾಂಕ  ಮ್ಯಾನೇಜರ ವಿನೋದ್ ಹಾದಿಮನಿ ಹಾಗೂ ಸಿಬ್ಬಂದಿ, ವಿವಿಧ ಶಾಲೆಗಳ ಕ್ರೀಡಾಪಟು ವಿದ್ಯಾರ್ಥಿಗಳು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು. ಶ್ರೀಮತಿ ಮೇರಿ ಡಿಸೋಜಾ ನಿರೂಪಿಸಿದರು. ಕುಮಾರಿ ಮಹಾದೇವಿ ಸೋಮಣ್ಣವರ ಪ್ರಾರ್ಥಿಸಿದರು.  ಫಕ್ಕೀರೇಶ ಹಿರೇಮಠ ಸ್ವಾಗತಿಸಿದರು.  ಅಡಿವೆಪ್ಪ ದಳವಾಯಿ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಾ ಪುರುಷರ ಆದರ್ಶ ಅಳವಡಿಸಿಕೊಳ್ಳೊಣ-ಡಾ.ಬಿರಾದಾರವಿಹಾನ ಮಲಪ್ರಭಾ ಹಾರ್ಟ್ ಕೇರ್‌ನಲ್ಲಿ ಅತ್ಯಾಧುನಿಕ ಹೃದಯ ಚಿಕಿತ್ಸಾ ಸೌಲಭ್ಯಗಾಣಿಗ ಸಮಾಜದಲ್ಲಿ ಒಗ್ಗಟ್ಟು ಹೆಚ್ಚಾಗಲಿ - ಬೆಳ್ಳುಬ್ಬಿ  ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟ ಹಾಗೂ ಸ್ವಚ್ಛತೆಗೆ ಒತ್ತು ನೀಡುವಂತೆ ಸೂಚನೆಇಂಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ: ಸೆ. 3ರಂದು ಬೃಹತ್ ಹೋರಾಟಕ್ಕೆ ಕರೆಇಂಡಿ: 67 ನಿವೃತ್ತ ಶಿಕ್ಷಕರಿಗೆ ಅದ್ಧೂರಿ ಸನ್ಮಾನ – ಶಿಕ್ಷಕ ವೃತ್ತಿ ಸಮಾಜದಲ್ಲೇ ಅತ್ಯಂತ ಶ್ರೇಷ್ಠ ಎಂದ ತಹಶೀಲ್ದಾರ್ ನಾಗೇಶ ಕೋಳಶೆಟ್ಟಿಮಾಹಿತಿ ಹಕ್ಕು ಕಾಯ್ದೆ ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವಕ್ಕೆ ಪ್ರಮುಖ ಕಾಯ್ದೆ : ಪ್ರಕಾಶ್ ನಾರಾಯಣ ಚೆನ್ನಾಳನೇಸರಗಿ ಕ್ಲಸ್ಟರ್ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟನೆಕಸಾಪ ಕಾಯಕಲ್ಪಕ್ಕೆ ‘ಹಾರ್ಟ್ ಸರ್ಜನ್’ ಸಜ್ಜು: ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಗೆದ್ದರೆ 111 ವರ್ಷಗಳ ಇತಿಹಾಸದಲ್ಲಿ ಹೊಸ ಅಧ್ಯಾಯ!   ೧೮೭ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ