ರಾಮದುರ್ಗ: ಸ್ಥಳೀಯ ವರ್ನಿಕಾ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಓಆ:ಙಂಉ ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಆಧುನಿಕ ಲೇಸರ್ ತಂತ್ರಜ್ಞಾನ ಮಸೀನ್‌ನ್ನು ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹಾಗೂ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಜಂಟಿಯಾಗಿ ಉದ್ಘಾಟಿಸಿದರು.
ಡಾ. ವಿನಯ ಸುಲ್ತಾನಪೂರ ಮಾತನಾಡಿ, ಈ ತಂತ್ರಜ್ಞಾನದ ಸಹಾಯದಿಂದ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯ ನಂತರ ಕೆಲವರಲ್ಲಿ ಮಸಕಾಗುವ ಹಿಂಭಾಗದ ಕ್ಯಾಪ್ಸುಲ್‌ನ್ನು ತೆರವುಗೊಳಿಸಿ ದೃಷ್ಟಿ ಸುಧಾರಿಸಲು ಬಳಸಲಾಗುವುತ್ತದೆ. ಕಣ್ಣಿನ ಒತ್ತಡ ಕಡಿಮೆ ಮಾಡಲು, ಕಣ್ಣಿನೊಳಗಿನ ಕೆಲವು ಅಂಗಾಂಶದ ಅಂಟಿಕೊಳ್ಳುವಿಕೆಗಳನ್ನು ಬೇರ್ಪಡಿಸಲು ಸಹಾಯಕವಾಗಿದ್ದು, ನೋವು ರಹಿತ ಚಿಕಿತ್ಸೆಯಾಗಿದೆ ಎಂದು ಮಾಹಿತಿ ನೀಡಿದರು.
ಡಾ. ರೇಣುಕ ಸುಲ್ತಾನಪೂರ ಮಾತನಾಡಿ, ನಗರ ಪ್ರದೇಶಗಳಲ್ಲಿರುವ ಆಸ್ಪತ್ರೆಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಆದರೆ ಗ್ರಾಮೀಣ ಭಾಗದ ಬಡರೋಗಿಗಳಿಗೆ ಆರ್ಥಿಕ ಹೊರೆಯಾಗುತ್ತದೆ. ಇದನ್ನು ಮನಗಂಡು ಸ್ಥಳೀಯ ನಮ್ಮ ಕಣ್ಣಿನ ಆಸ್ಪತ್ರೆಯನ್ನು ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ, ನಿವೃತ್ತ ಪ್ರಾಧ್ಯಾಪಕ ಎಸ್.ಎಸ್.ಸುಲ್ತಾಪೂರ. ಕಮಲಾ ಸುಲ್ತಾನಪೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಸಕ ಅಶೋಕ ಪಟ್ಟಣ ಹಾಗೂ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು.